ಸಿಎಂ ಫೈಟ್, ಒಕ್ಕಲಿಗ ಸ್ವಾಮೀಜಿಗಳು ಅಖಾಡಕ್ಕೆ, ಡಿಕೆಶಿ ಸಿಎಂ ಆಗಬೇಕೆಂದು ಒತ್ತಾಯ, ಡಿಕೆ ಪರ ಆದಿಚುಂಚನಗಿರಿ ಶ್ರೀಗಳ ಬ್ಯಾಟಿಂಗ್ 

26-11-25 09:41 pm       HK News Desk   ಕರ್ನಾಟಕ

ಸದ್ಯದ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಎರಡೂವರೆ ವರ್ಷದ ನಂತರ ನಮ್ಮ ಸಮುದಾಯದವರು ಸಿಎಂ ಆಗ್ತಾರೆಂದುಕೊಂಡಿದ್ದೆ. ಡಿಕೆಶಿ ಸಿಎಂ ಆಗಬೇಕು ಅನ್ನುವ ಆಶಯ ನಮಗೂ ಇದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ. 

ಹಾಸನ, ನ.26 : ಸದ್ಯದ ರಾಜಕೀಯ ಬೆಳವಣಿಗೆಯನ್ನು ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ. ಎರಡೂವರೆ ವರ್ಷದ ನಂತರ ನಮ್ಮ ಸಮುದಾಯದವರು ಸಿಎಂ ಆಗ್ತಾರೆಂದುಕೊಂಡಿದ್ದೆ. ಡಿಕೆಶಿ ಸಿಎಂ ಆಗಬೇಕು ಅನ್ನುವ ಆಶಯ ನಮಗೂ ಇದೆ ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಹೇಳಿದ್ದಾರೆ. 

ಕುಂದೂರು ಬಿಜಿಎಸ್ ಮಠದಲ್ಲಿ ಮಾಧ್ಯಮದ ಪ್ರಶ್ನೆಗೆ ನಿರ್ಮಲಾನಂದ ಶ್ರೀಗಳ ಹೇಳಿಕೆ ನೀಡಿದ್ದು ಈ ವಿಚಾರದ ಬಗ್ಗೆ ಡಿಕೆಶಿ ನಮ್ಮ ಜೊತೆ ಮಾತನಾಡಿಲ್ಲ. ಆದರೆ ಸಾವಿರಾರು ಭಕ್ತರು ಕರೆ ಮಾಡ್ತಾರೆ. ಮೂರು ಪಕ್ಷಗಳಲ್ಲೂ ಒಳ್ಳೆಯ ನಾಯಕರಿದ್ದಾರೆ. ನಮ್ಮವರೊಬ್ಬರು ಸಿಎಂ ಆಗ್ತಾರೆ ಅಂತ ಅಂದುಕೊಂಡಿದ್ದೇವಿ. ಈಗ ಎರಡೂವರೆ ವರ್ಷ ಆದ ಮೇಲೆ ನಮ್ಮ ಸಮುದಾಯವರು ಸಿಎಂ ಆಗುತ್ತಾರೆಂದು ಕೊಂಡಿದ್ದೇವೆ. 

ಸರ್ಕಾರಕ್ಕೆ ಎರಡೂವರೆ ವರ್ಷ ಆದ ಮೇಲೆ ಡಿಕೆಶಿ ಸಿಎಂ ಆಗಬೇಕು ಅನ್ನುವ ನಮಗೂ ಇದೆ. ಇನ್ನುಳಿದ ಎರಡೂವರೆ ವರ್ಷ ಡಿಕೆಶಿ ಸಿಎಂ ಆಗಬೇಕೆನ್ನುವ ಅಭಿಲಾಷೆ ನಮಗೂ ಇದೆ. ಡಿಕೆಶಿ ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಡಿಕೆಶಿ ಸಿಎಂ ಆಗಬೇಕು.‌ ಭಕ್ತರು ನಮ್ಮ ಜೊತೆಗೆ ಡಿಕೆಶಿ ಸಿಎಂ ಆಗಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ. 

ಎರಡೂವರೆ ವರ್ಷ ಅಧಿಕಾರ ಹಂಚಿಕೆ ವಿಚಾರ ಜನರು ಚರ್ಚೆ ಮಾಡುತ್ತಿದ್ದಾರೆ. ಡಿಕೆಶಿಗೆ ರಾಜಕೀಯ ಒಳಸುಳಿ ಗೊತ್ತಿದೆ. ರಾಜಕೀಯ ಅಸ್ಥಿರತೆ ಆದ್ರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಅಭಿವೃದ್ಧಿಗೆ ಮಾರಕವಾಗುತ್ತದೆ. ನಮ್ಮ ರಾಜ್ಯದ ಹಿತದೃಷ್ಟಿಯಿಂದ, ಹೈಕಮಾಂಡ್ ಸಮಸ್ಯೆ ಬಗೆಹರಿಸಲಿ ಎಂದು ಸ್ವಾಮೀಜಿ ಹೇಳಿದ್ದಾರೆ.

Amid the ongoing political turbulence in Karnataka, Adichunchanagiri Mutt seer Nirmalananda Swamiji stated that the Vokkaliga community wishes to see DK Shivakumar become the Chief Minister after the two-and-a-half-year power-sharing period.a