ಪ್ಲೀಸ್ ಸ್ವಲ್ಪ ತಾಳ್ಮೆ ವಹಿಸಿ, ನಾವು ನಿಮ್ಮನ್ನು ಕರೆಯುತ್ತೇವೆ..! ಡಿಕೆಶಿಗೆ ರಾಹುಲ್ ಗಾಂಧಿ ಸಂದೇಶ ರವಾನೆ, ಹೈಕಮಾಂಡಿಗೆ ಸವಾಲಾದ ಅಧಿಕಾರ ಹಂಚಿಕೆ 

26-11-25 10:48 pm       Bangalore Correspondent   ಕರ್ನಾಟಕ

ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಸಂಘರ್ಷ ನಿಭಾಯಿಸುವುದು ಹೈಕಮಾಂಡ್ ನಾಯಕರಿಗೆ ಸವಾಲಾಗಿ ಪರಿಣಿಮಿಸಿದೆ. ಇದರ ನಡುವಲ್ಲೇ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಅವರಿಗೆ ಪ್ಲೀಸ್ ಸ್ವಲ್ಪ ತಾಳ್ಮೆಯಿಂದ ಇರಿ, ನಾವು ನಿಮ್ಮನ್ನು ಕರೆಯುತ್ತೇವೆ ಎಂದು ವಾಟ್ಸಪ್ ಸಂದೇಶ ನೀಡಿದ್ದಾರೆ. ‌

ಬೆಂಗಳೂರು, ನ.26 : ಕಾಂಗ್ರೆಸ್​ನಲ್ಲಿ ಅಧಿಕಾರ ಹಂಚಿಕೆ ಸಂಘರ್ಷ ನಿಭಾಯಿಸುವುದು ಹೈಕಮಾಂಡ್ ನಾಯಕರಿಗೆ ಸವಾಲಾಗಿ ಪರಿಣಿಮಿಸಿದೆ. ಇದರ ನಡುವಲ್ಲೇ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಅವರಿಗೆ ಪ್ಲೀಸ್ ಸ್ವಲ್ಪ ತಾಳ್ಮೆಯಿಂದ ಇರಿ, ನಾವು ನಿಮ್ಮನ್ನು ಕರೆಯುತ್ತೇವೆ ಎಂದು ವಾಟ್ಸಪ್ ಸಂದೇಶ ನೀಡಿದ್ದಾರೆ. ‌

ಇದೇ ವೇಳೆ, ಮುಖ್ಯಮಂತ್ರಿ ಹುದ್ದೆಯ ವಿವಾದವನ್ನು ಶೀಘ್ರದಲ್ಲೇ ಇತ್ಯರ್ಥ ಪಡಿಸಲಾಗುವುದು. ಈ ಸಂಬಂಧ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಜೊತೆಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಡಿಸೆಂಬರ್ 1ರಂದು ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದ್ದು ಅದಕ್ಕೂ ಮುನ್ನ ನಾಯಕತ್ವ ಗೊಂದಲ ಬಗೆಹರಿಸಲು ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದೆ. ಇದಕ್ಕಾಗಿ, ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ನ.29ರಂದು ದೆಹಲಿಗೆ ಕರೆದು ಗೊಂದಲ ಇತ್ಯರ್ಥ ಪಡಿಸಲು ಮುಹೂರ್ತ ಇಟ್ಟಿದೆ.‌ ಆದರೆ ಇತ್ತ ಎರಡೂ ಬಣದ ನಾಯಕರು ತಮಗೆ ತೋಚಿದ ರೀತಿ ಹೇಳಿಕೆ ನೀಡುತ್ತಿದ್ದು ರಾಜ್ಯ ರಾಜಕೀಯದಲ್ಲಿ ಮತ್ತಷ್ಟು ಗೊಂದಲ ಮೂಡಿಸಿದ್ದಾರೆ.‌

ಇದೇ ವೇಳೆ, ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ರವಾನಿಸಿದ್ದು, "ದಯವಿಟ್ಟು ಕಾಯಿರಿ. ನಾನು ನಿಮಗೆ ಕರೆ ಮಾಡುತ್ತೇನೆ" ಎಂದು ಹೇಳಿರುವುದಾಗಿ ಹೇಳಲಾಗುತ್ತಿದೆ.

The Congress high command is struggling to resolve the escalating power-sharing dispute in Karnataka. Amid rising tensions, Rahul Gandhi has reportedly sent a WhatsApp message to Deputy CM DK Shivakumar, asking him to “please be patient, we will call you.” AICC chief Mallikarjun Kharge confirmed that the leadership issue between CM Siddaramaiah and DK Shivakumar will be settled soon after consultations with Sonia and Rahul Gandhi.