ಬ್ರೇಕಿಂಗ್ ನ್ಯೂಸ್
29-11-25 08:11 pm Bangalore Correspondent ಕರ್ನಾಟಕ
ಬೆಂಗಳೂರು, ನ.29 : ಕೆಎಂಎಫ್ ನಂದಿನಿ ತುಪ್ಪಕ್ಕೆ ಎಲ್ಲಿಲ್ಲದ ಬೇಡಿಕೆ ಇರುವುದರಿಂದ ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು ನಂದಿನಿ ಹೆಸರಲ್ಲಿ ನಕಲಿ ತುಪ್ಪವನ್ನೂ ಮಾಡುತ್ತಿದ್ದಾರೆ. ಇದೀಗ ನಕಲಿಗಳಿಗೆ ಕಡಿವಾಣ ಹಾಕಲು ಕೆಎಂಎಫ್ ಭರ್ಜರಿ ಪ್ಲಾನ್ ಮಾಡಿಕೊಂಡಿದೆ.
ಇಡೀ ದೇಶದಲ್ಲಿ ವಿಶಿಷ್ಟ ರುಚಿ ಮತ್ತು ವಿಶ್ವಸನೀಯ ಬ್ರಾಂಡ್ ಎನಿಸಿರುವ ಕೆಎಂಎಫ್ ತುಪ್ಪವನ್ನ ನಕಲಿ ಮಾಡುವುದನ್ನು ಗಂಭೀರ ಪರಿಗಣಿಸಿದ ಆಡಳಿತ ಮಂಡಳಿ ಪರ್ಯಾಯ ಕ್ರಮಕ್ಕೆ ಮುಂದಾಗಿದೆ. ಕೆಟ್ಟ ಮೇಲೆ ಬುದ್ದಿ ಕಲಿತಂತಿರುವ ಕೆಎಂಎಫ್ ನಂದಿನಿ ಬ್ರ‍್ಯಾಂಡ್‌ಗೆ ಹೊಡೆತ ಬೀಳಬಾರದು ಎಂಬ ಉದ್ದೇಶದಿಂದ ಆಹಾರ ಇಲಾಖೆ ತಜ್ಞರ ಜೊತೆ ಚರ್ಚಿಸಿ ಮಾಸ್ಟರ್ ಪ್ಲಾನ್ ಮಾಡಿದೆ. ಪ್ಯಾಕ್ ಮೇಲೆ ಕ್ಯೂ ಆರ್ ಕೋಡ್ ಬಳಸಿದಲ್ಲಿ ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದು ಕೇವಲ ಸ್ಕ್ಯಾನ್ ಮಾಡುವುದರಿಂದ ತಿಳಿಯಲಿದೆ.
ಇದರಿಂದ ಗ್ರಾಹಕರು ಖರೀದಿ ಮಾಡಿರುವುದು ಅಸಲಿಯೋ, ನಕಲಿಯೋ ಎಂಬುದು ಒಂದೇ ಹಂತದಲ್ಲಿ ಗೊತ್ತಾಗುತ್ತದೆ. ಶೀಘ್ರದಲ್ಲಿಯೇ ಕ್ಯೂ ಆರ್ ಕೋಡ್ ಜಾರಿಗೆ ತರಲು ಆಡಳಿತ ಮಂಡಳಿ ಮುಂದಾಗಿದ್ದು ಇದಕ್ಕೆ ತಗಲುವ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸದೆ ತಾನೇ ಭರಿಸಲಿದೆ. ಕ್ಯೂ ಆರ್ ಕೋಡ್ ನಿಂದ ಯಾವ ಒಕ್ಕೂಟದಿಂದ ಉತ್ಪಾದನೆಯಾಗಿದೆ, ಯಾವ ಡಿಪೋಗೆ ಸರಬರಾಜು ನೀಡಲಾಗಿದೆ, ಯಾವ ಏರಿಯಾಗೆ ಡೆಲಿವರಿ ನೀಡಲಾಗಿದೆ, ಯಾವ ರೀಟೇಲ್ ಅಂಗಡಿಗೆ ಸೇಲ್ ಮಾಡಲಾಗಿದೆ ಎಂಬ ಮಾಹಿತಿ ಇರುತ್ತದೆ.
ಕ್ಯೂಆರ್ ಕೋಡ್ ಮೂಲಕ ಗ್ರಾಹಕರು ತುಪ್ಪದ ಉತ್ಪಾದನೆ, ಪೂರೈಕೆ, ಯಾವ ಮಳಿಗೆ, ಯಾರಿಗೆ ಮಾರಾಟ ಮಾಡಿದ್ದಾರೆ ಎಂಬುದನ್ನು ತಿಳಿಯಬಹುದು. ಇದರಿಂದ ತಾವು ಖರೀದಿಸಿದ ತುಪ್ಪ ಅಸಲಿಯೋ ನಕಲಿಯೋ ಅನ್ನೋದನ್ನು ಗ್ರಾಹಕರೇ ತಿಳಿಯಬಹುದು.
As demand for KMF Nandini ghee continues to soar across the country, miscreants have begun selling duplicate ghee using the Nandini brand name. To put an end to this fake ghee racket, the Karnataka Milk Federation (KMF) has come up with a strong master plan.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm