ಬ್ರೇಕಿಂಗ್ ನ್ಯೂಸ್
09-12-25 08:53 pm HK News Desk ಕರ್ನಾಟಕ
ಬೀದರ್, ಡಿ.9: ತಾನು ದಿನವೂ ಹೋಗಿ ಬರುತ್ತಿದ್ದ ಶಾಲೆಯ ವಾಹನ ಹರಿದು ಎಂಟು ವರ್ಷದ ಬಾಲಕಿ ದುರಂತ ಸಾವನ್ನಪ್ಪಿದ ಘಟನೆ ಬೀದರ್ ಜಿಲ್ಲೆಯ ಜನವಾಡಾ ಗ್ರಾಮದ ಪೊಲೀಸ್ ಕ್ವಾಟರ್ಸ್ ಬಳಿ ನಡೆದಿದೆ.
ಗಡಿಕುಶನೂರು ಗ್ರಾಮದ ನಿವಾಸಿ, ಐದನೇ ಕ್ಲಾಸ್ ವಿದ್ಯಾರ್ಥಿನಿ ರುತ್ವಿ (8) ಸಾವನ್ನಪ್ಪಿದ ಬಾಲಕಿ. ಬೀದರ್ ತಾಲೂಕಿನ ಜನಾವಾಡಾ ಗ್ರಾಮದ ಗುರುನಾನಕ್ ಶಾಲೆಯಲ್ಲಿ ಓದುತ್ತಿದ್ದು ಇಂದು ಮಧ್ಯಾಹ್ನ ಶಾಲೆಯಿಂದ ವಾಪಸ್ ಮನೆಗೆ ಬರುತ್ತಿದ್ದಾಗ ಬಸ್ಸಿನಡಿಗೆ ಬಿದ್ದು ಮೃತಪಟ್ಟಿದ್ದಾಳೆ.


ಎಂದಿನಂತೆ ಶಾಲೆಯಿಂದ ವಾಹನದಲ್ಲಿ ಮನೆ ವರೆಗೂ ಬಾಲಕಿಯನ್ನು ಡ್ರಾಪ್ ಮಾಡಿದ್ದರು. ಆದರೆ ಬಾಲಕಿ ಸ್ಕೂಲ್ ಬಸ್ ಇಳಿದು ಬಸ್ ಪಕ್ಕವೇ ನಿಂತಿದ್ದಳು. ಬಾಲಕಿ ಬಸ್ ಬಳಿಯಿರುವುದನ್ನ ಗಮನಿಸದೆ ಚಾಲಕ ಬಸ್ ಓಡಿಸಿದ್ದು ಆಕೆಯ ಮೇಲಿನಿಂದಲೇ ಹರಿದಿದೆ. ಬಸ್ಸಿನಡಿಗೆ ಬಿದ್ದ ಬಾಲಕಿ ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತಪಟ್ಟಿದ್ದಾಳೆ.
ಚಾಲಕನ ನಿರ್ಲಕ್ಷ್ಯದಿಂದ ಬಾಲಕಿ ದುರಂತ ಸಾವಿಗೀಡಾಗಿದ್ದಾಳೆ. ಸಾವಿನ ಸುದ್ದಿ ತಿಳಿದ ತಕ್ಷಣ ಕುಟುಂಬಸ್ಥರು ಮತ್ತು ಸಂಬಂಧಿಕರು ಬೀದರ್‌ನ ಬ್ರಿಮ್ಸ್ ಆಸ್ಪತ್ರೆ ಆವರಣಕ್ಕೆ ದೌಡಾಯಿಸಿದ್ದು, ಪುಟ್ಟ ಮಗಳ ಸಾವಿನಿಂದ ತೀವ್ರ ದುಃಖತಪ್ತರಾಗಿ ಗೋಳಾಡಿದರು. ನಿರ್ಲಕ್ಷ್ಯದಿಂದ ಅಮಾಯಕ ಮಗುವಿನ ಸಾವಿಗೆ ಕಾರಣನಾದ ಶಾಲಾ ವಾಹನ ಚಾಲಕನ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ಕುರಿತು ಜನವಾಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸಲಾಗಿದೆ.
A heartbreaking incident occurred near the Police Quarters in Janwada village, Bidar district, where an eight-year-old girl lost her life after falling under her school bus. The victim, Rutvi (8), a Class 5 student from Gadikushnoor village studying at Guru Nanak School, Janwada, was returning home from school when the tragedy struck. After being dropped near her house as usual, the child stood beside the bus. The driver, reportedly not noticing her presence, moved the vehicle, fatally running over the girl. Severely injured, she died on the way to the hospital.
12-01-26 08:20 pm
Mangaluru
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
12-01-26 11:00 pm
HK staffer
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
12-01-26 08:03 pm
Mangaluru Staffer
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
12-01-26 06:28 pm
Mangaluru Staffer
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm
ಅಯ್ಯಪ್ಪ ಸ್ವಾಮಿಗಳ ಪೂಜೆ ಸಂದರ್ಭದಲ್ಲಿ ಮುಸ್ಲಿಂ ವ್ಯ...
11-01-26 09:59 pm
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm