ಗಾಳಿಯಲ್ಲಿ ಗುಂಡು ಹಾರಿಸಿ ಉಡಚಣ ಸ್ವಾಮೀಜಿ ರಂಪಾಟ ; ಎಂಟು ತಿಂಗಳ ಹಿಂದೆ ಮಠ ತೊರೆದು ಹೋಗಿದ್ದ ವ್ಯಕ್ತಿ ಮತ್ತೆ ಬಂದು ಜನರೆದುರು ಬಿಲ್ಡಪ್ ! 

22-12-25 11:09 pm       HK News Desk   ಕರ್ನಾಟಕ

ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಮೀಜಿಯೊಬ್ಬರು ಸಾರ್ವಜನಿಕರ ಮಧ್ಯೆ ಬಿಲ್ಡಪ್ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ನಡೆದಿದೆ. 

ಕಲಬುರಗಿ, ಡಿ.22 : ಗಾಳಿಯಲ್ಲಿ ಗುಂಡು ಹಾರಿಸಿ ಸ್ವಾಮೀಜಿಯೊಬ್ಬರು ಸಾರ್ವಜನಿಕರ ಮಧ್ಯೆ ಬಿಲ್ಡಪ್ ಕೊಟ್ಟ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ನಡೆದಿದೆ. 

ಉಡಚಣ ಗ್ರಾಮದ ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಎಂಬವರು ಗಾಳಿಯಲ್ಲಿ ಗುಂಡು ಹಾರಿಸಿ ಜನರ ಮಧ್ಯೆ ಭಯ ಮೂಡಿಸಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ಈ ಮಠವಿದೆ. ಕಳೆದ ಕೆಲ ತಿಂಗಳುಗಳಿಂದ ಸ್ವಾಮೀಜಿ ಮಠ ತೊರೆದು ಎಸ್ಕೇಪ್ ಆಗಿದ್ದರು. ವಾರದ ಹಿಂದೆ ದಿಢೀರ್ ಆಗಿ ಮಠದಲ್ಲಿ ಪ್ರತ್ಯಕ್ಷರಾಗಿದ್ದರು.

ಕುಡಿದು ತೂರಾಡಿ ವಾಹನ ಅಪಘಾತ ಎಸಗಿದ್ದ ಸ್ವಾಮೀಜಿಯನ್ನು ಗ್ರಾಮಸ್ಥರು ಸೇರಿ ಮಠದಿಂದ ಹೊರಗೆ ಹಾಕಿದ್ದರು. ಮಠಕ್ಕೆ ಹೊಸ ಪೀಠಾಧಿಪತಿ ನೇಮಕದ ಚರ್ಚೆ ಬೆನ್ನಲ್ಲೇ ಸ್ವಾಮೀಜಿ ವಾಪಾಸಾಗಿದ್ದರು. 

ಇದೀಗ ಮಠದ ಆವರಣದಲ್ಲಿ ನಿಂತು ಗಾಳಿಯಲ್ಲಿ ಗುಂಡು ಹಾರಿಸಿದ್ದು ಆಮೂಲಕ ತಮ್ಮ ವಿರೋಧಿಗಳನ್ನ ಹೆದರಿಸೋಕೆ ಯತ್ನಿಸಿದ್ದಾರೆ. ಇದೀಗ ಶಾಂತಲಿ‌ಂಗ ಶಿವಾಚಾರ್ಯ ಸ್ವಾಮೀಜಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಶಾಂತಲಿ‌ಂಗ ಶಿವಾಚಾರ್ಯ ಸ್ವಾಮೀಜಿ ಎಂಟು ತಿಂಗಳಿಂದ ಮಠ ತೊರೆದಿದ್ದರು. ಕುಡಿದು ರಂಪಾಟ ಮಾಡಿದ್ದನ್ನು ಗ್ರಾಮದ ಜನರು ಪ್ರಶ್ನಿಸಿದ್ದಕ್ಕೆ ಮಠ ತೊರೆದು ಹೋಗಿದ್ದರು.

A dramatic incident unfolded in Udachana village of Afzalpur taluk, Kalaburagi district, where a Swamiji fired a gun in the air and created panic among villagers.  Shantalinga Shivacharya of Shankarlingshwara Hirémath, Udachana, reportedly fired shots in the air inside the mutt premises, attempting to intimidate people who were opposing him. A video of the incident has gone viral on social media.