ಶಿವಮೊಗ್ಗ ; ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು, ಇಬ್ಬರ ಸಾವು

24-12-25 10:26 pm       HK News Desk   ಕರ್ನಾಟಕ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ ಹೊಸೂರು ಬಳಿ ಇಂದು ಮುಂಜಾನೆ ನಡೆದಿದೆ.‌ ಕಾರು ಕೆರೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿವಮೊಗ್ಗ, ಡಿ 24 : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕೆರೆಗೆ ಉರುಳಿದೆ. ಸೊರಬ ತಾಲೂಕು ಆನವಟ್ಟಿ ಸಮೀಪದ ಕನ್ನೆಕೊಪ್ಪ ಹೊಸೂರು ಬಳಿ ಇಂದು ಮುಂಜಾನೆ ನಡೆದಿದೆ.‌ ಕಾರು ಕೆರೆಗೆ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಕಾರಿಪುರ ತಾಲೂಕಿನ ಪುನೇದಹಳ್ಳಿ ಗ್ರಾಮ ನಿವಾಸಿ ನವೀನ್(21) ಹಾಗೂ ರಾಮಚಂದ್ರ(37) ಮೃತರು. ರುದ್ರೇಶ್(26) ಹಾಗೂ ಮಂಜುನಾಥ್(21) ಇಬ್ಬರು ಪ್ರಾಣಾಪಾಯದಿಂದ ಪರಾಗಿದ್ದಾರೆ. ರಾಮಚಂದ್ರ ಕಾರನ್ನು ಚಲಾಯಿಸುತ್ತಿದ್ದರು.

ಇಂದು ಬೆಳಗಿನಜಾವ ಕಾರು ಶಿಕಾರಿಪುರದ ಪುನೇದಹಳ್ಳಿಯಿಂದ ಆನವಟ್ಟಿ ಕಡೆ ಮಾರುತಿ ಸುಜುಕಿ ಇಕೊ ಕಾರಿನಲ್ಲಿ ನಾಲ್ಕು ಜನ ಪ್ರಯಾಣಿಸುತ್ತಿದ್ದರು‌. ಈ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳಕ್ಕೆ ಆನವಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಂತಹದ್ದೇ ಮತ್ತೊಂದು ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದಲ್ಲಿ ಸಂಭವಿಸಿದೆ. ರಸ್ತೆ ಬದಿಯ ಕಿರು ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೆಕ್ಕಲಕೋಟೆ ಪಟ್ಟಣದ ದೇವಿನಗರದ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಬುಧವಾರ (ಇಂದು) ಮುಂಜಾನೆ 5 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ.

ಮೃತರನ್ನು ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮದ ಪ್ರಸಾದ್ ರಾವ್ (75), ಸಿರುಗುಪ್ಪ ನಿವಾಸಿಗಳಾದ ವಿಜಯ (70) ಹಾಗೂ ಸಂಧ್ಯಾ (35) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡ ನಿಟ್ಟೂರು ಗ್ರಾಮದ ಪದ್ಮ (70) ಹಾಗೂ ಸಿರುಗುಪ್ಪದ ಬ್ರಹೇಶ್ವರರಾವ್ (45) ಅವರನ್ನು ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್​​ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸೇರಿದಂತೆ ಒಂದೇ ಕುಟುಂಬದ ಐವರು ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿಂದ ಹಿಂತಿರುಗಿ ಬರುವಾಗ ಅಪಘಾತ ಸಂಭವಿಸಿದೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಘಟನೆ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುಗಳು ಹಾಗೂ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದರು. ಚಾಲಕ ನಿದ್ದೆ ಮಂಪರಿನಲ್ಲಿ ಚಾಲನೆ ಮಾಡಿರುವುದು ಹಾಗೂ ಮಂಜುಗಟ್ಟಿದ ವಾತಾವರಣದ ಹಿನ್ನೆಲೆ ರಸ್ತೆ ಕಾಣದೇ ಅಪಘಾತ ಸಂಭವಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತೆಕ್ಕಲಕೋಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Two people died after a car lost control and fell into a lake near Annevatti in Shivamogga district early Tuesday, while two others narrowly survived. In a separate accident in Ballari’s Siruguppa taluk, three members of the same family were killed and two seriously injured when their car rammed into a small bridge amid dense fog. Police have registered both cases and preliminary reports suggest overspeeding and poor visibility as possible causes.