Janardhan Reddy, DK Shivakumar: ನನಗೆ ಜೀವ ಬೆದರಿಕೆ ಇದೆ, Z ಶ್ರೇಣಿ ಭದ್ರತೆ ಕೊಡಿ ; ಅಮಿತ್ ಶಾ, ಸಿದ್ದರಾಮಯ್ಯಗೆ ಜನಾರ್ದನ ರೆಡ್ಡಿ ಪತ್ರ, ಅವರ ಪಾರ್ಟಿಯ 100 ಜನರನ್ನು ಭದ್ರತೆಗೆ ಇರಿಸಿಕೊಳ್ಳಲಿ ಎಂದು ಡಿಕೆ ವ್ಯಂಗ್ಯ ! 

04-01-26 07:24 pm       HK News Desk   ಕರ್ನಾಟಕ

ಬ್ಯಾನರ್ ಗಲಾಟೆ ಬಳಿಕ ತನಗೆ ಜೀವ ಬೆದರಿಕೆ ಇದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ. ನನಗೆ ಝಡ್ ಶ್ರೇಣಿಯ ಭದ್ರತೆ ಕೊಡಿ ಎಂದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ರೆಡ್ಡಿ ಪತ್ರ ಬರೆದಿದ್ದಾರೆ.

ಬಳ್ಳಾರಿ, ಜ.04: ಬ್ಯಾನರ್ ಗಲಾಟೆ ಬಳಿಕ ತನಗೆ ಜೀವ ಬೆದರಿಕೆ ಇದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಆರೋಪ ಮಾಡಿದ್ದಾರೆ. ನನಗೆ ಝಡ್ ಶ್ರೇಣಿಯ ಭದ್ರತೆ ಕೊಡಿ ಎಂದು ಕೇಂದ್ರ ಹಾಗೂ ರಾಜ್ಯ ಗೃಹ ಸಚಿವರಿಗೆ ರೆಡ್ಡಿ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹಮಂತ್ರಿ, ಡಿಜಿ & ಐಜಿ ಸಲೀಂ ಅವರಿಗೂ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಜ.1 ರಂದು ನನ್ನ ಹಾಗೂ ನನ್ನ ಕುಟುಂಬದ ಮೇಲೆ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮತ್ತು ಆತನ ಬೆಂಬಲಿಗರು ದಾಳಿ ನಡೆಸಿದ್ದರು. ನಾರಾ ಭರತ್ ರೆಡ್ಡಿ, ಸತೀಶ್ ರೆಡ್ಡಿ ಕಡೆಯಿಂದಲೇ ಪೆಟ್ರೋಲ್ ಬಾಂಬ್ ದಾಳಿ, ಬಂದೂಕಿನಿಂದ ಶೂಟ್ ಮಾಡಲು ಯತ್ನಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಶಾಸಕ ಭರತ್ ರೆಡ್ಡಿಯಿಂದ ನನ್ನ ಕುಟುಂಬಕ್ಕೆ ಆಪತ್ತು ಇದೆ. ಕೂಡಲೇ ಝಡ್ ಶ್ರೇಣಿಯ ಭದ್ರತೆ ಒದಗಿಸಿ ಪತ್ರದಲ್ಲಿ ಮನವಿ ಮಾಡಿದ್ದಾರೆ. 

ಕಾರ್ಯಕ್ರಮವೊಂದರ ಬ್ಯಾನರ್ ಅಳವಡಿಕೆ ವಿಚಾರವಾಗಿ ಜನಾರ್ದನ್ ರೆಡ್ಡಿ ಮನೆ ಬಳಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಫೈರಿಂಗ್ ಆಗಿದ್ದು, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದರು. ಈ ಬೆಳವಣಿಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿದೆ.

ಈ ವಿಚಾರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪಾರ್ಟಿಯ 100 ಜನರನ್ನು ಭದ್ರತೆಗೆ ಇರಿಸಿಕೊಳ್ಳಲಿ, Z ಆದ್ರು ಕೇಳಲಿ, ಇರಾನ್‌ನಿಂದ ಯಾವುದಾದ್ರೂ ತೆಗೆದುಕೊಂಡು ಬರಲಿ, ಅಮೇರಿಕಾದಿಂದ ತರೆಸಿಕೊಳ್ಳಲಿ, ಇವರಾದ್ರೂ ಮಡಗಿಕೊಳ್ಳಲಿ ಯಾರು ಬೇಡ ಅಂತಾರೆ ಅಂತ ವ್ಯಂಗ್ಯವಾಡಿದ್ದಾರೆ.

Following a banner-related clash in Ballari, MLA Gali Janardhan Reddy has alleged that he faces a serious threat to his life. In letters to Union Home Minister Amit Shah, Karnataka Chief Minister Siddaramaiah, and senior police officials, Reddy has demanded Z-category security for himself and his family.