ಎಸ್‌ ಪಿ ಪವನ್ ಆತ್ಮಹತ್ಯೆ ವದಂತಿ ; ಸರ್ಕಾರ ಅವರ ಡೆತ್‌ನೋಟ್‌ ಮುಚ್ಚಿಟ್ಟಿದೆ, ಬಳ್ಳಾರಿ ಕೇಸ್ ಗೆ ಹೊಸ ಟ್ವಿಸ್ಟ್ ಕೊಟ್ಟ ಶೋಭಾ ಕರಂದ್ಲಾಜೆ 

04-01-26 10:27 pm       Bangalore Correspondent   ಕರ್ನಾಟಕ

ಅಮಾನತ್ತಿನಲ್ಲಿರುವ ಬಳ್ಳಾರಿ ಎಸ್‌.ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ ವದಂತಿ ಕುರಿತು ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ಜ 05 : ಅಮಾನತ್ತಿನಲ್ಲಿರುವ ಬಳ್ಳಾರಿ ಎಸ್‌.ಪಿ ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನ ವದಂತಿ ಕುರಿತು ಕೇಂದ್ರ‌ ಸಚಿವೆ ಶೋಭಾ ಕರಂದ್ಲಾಜೆ ಹೊಸ ಬಾಂಬ್‌ ಸಿಡಿಸಿದ್ದಾರೆ. ಪವನ್ ನೆಜ್ಜೂರ್ ಆತ್ಮಹತ್ಯೆ ಯತ್ನಕ್ಕೂ ಮುನ್ನ ಡೆತ್‌ನೋಟ್ ಬರೆದಿದ್ರು ಅಂತ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪವನ್ ಅವರ ಡೆತ್‌ನೋಟ್ ಮುಚ್ಚಟ್ಟಿದೆ. ಅಧಿಕಾರಿಗಳು ನಿನ್ನೆ ಡೆತ್‌ನೋಟ್ ಕೈಯಲ್ಲಿ ಮುಚ್ಚಿಟ್ಕೊಂಡು ಮಾತಾಡಿದ್ರು. ಅದರಲ್ಲಿ‌ ಏನಿದೆ ಅಂತ ಬಹಿರಂಗಪಡಿಸಬೇಕು ಅಂತ ಆಗ್ರಹಿಸಿದ್ದಾರೆ.

ನಮಗೆ ಬಂದಿರುವ ಮಾಹಿತಿ ಪ್ರಕಾರ ಡೆತ್‌ನೋಟ್‌ನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಹೆಸರು ಬರೆದಿದ್ದಾರೆ. ಡೆತ್‌ನೋಟ್ ನಲ್ಲಿ ಏನಿದೆ? ಸರ್ಕಾರ ಯಾಕೆ ಮುಚ್ಚಿಡೋ ಪ್ರಯತ್ನ ಮಾಡ್ತಿದೆ ಅಂತ ಸಚಿವರು ಪ್ರಶ್ನಿಸಿದ್ರು.

ಪವನ್ ನೆಜ್ಜೂರ್ ಆತ್ಮಹತ್ಯೆಗೆ ಯತ್ನಿಸಿಲ್ಲ ಅಂತ ಸರ್ಕಾರ ಹೇಳ್ತಿರುವಾಗ ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆ ಈಗ ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Union Minister Shobha Karandlaje has stirred fresh controversy in the Ballari SP Pavan Nejjur case by alleging that the Karnataka government is hiding a death note reportedly written before his alleged suicide attempt. Addressing the media in Bengaluru, she claimed that senior police officials were seen holding the note but the contents were not disclosed.