ಬ್ರೇಕಿಂಗ್ ನ್ಯೂಸ್
05-01-26 01:24 pm HK News Desk ಕರ್ನಾಟಕ
ಬಳ್ಳಾರಿ, ಜ.5 : ಬಳ್ಳಾರಿ ಬ್ಯಾನರ್ ಗಲಭೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ 26 ಜನರು ಹಾಗೂ ಒಬ್ಬ ಖಾಸಗಿ ಗನ್‌ಮ್ಯಾನ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಗನ್ ಮ್ಯಾನ್ ಗುರುಚರಣ್ ಸಿಂಗ್ ನನ್ನು ಬಂಧಿಸಲಾಗಿದೆ.
ಬ್ಯಾನರ್ ಗಲಭೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರಕಾರ ಬಳ್ಳಾರಿ ಎಸ್ಪಿ ಅವರನ್ನು ಅಮಾನತುಗೊಳಿಸಿದ ಬಳಿಕ, ಪೊಲೀಸ್ ಇಲಾಖೆಯಿಂದಲೇ ಸುಮೊಟೋ ಪ್ರಕರಣ ದಾಖಲಿಸಿ ತನಿಖೆ ತೀವ್ರಗೊಳಿಸಿದೆ. ಪೊಲೀಸರಿಗೆ ದೊರೆತ ಸಾಕ್ಷ್ಯ ಹಾಗೂ ವಿಡಿಯೋಗಳ ಆಧಾರದಲ್ಲಿ ಮೂರು ದಿನಗಳ ಬಳಿಕ ಅಧಿಕೃತವಾಗಿ 27 ಜನರನ್ನು ಬಂಧಿಸಲಾಗಿದೆ. ಬಂಧಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಳಿದವರಿಗೆ ಶೋಧ ನಡೆದಿದ್ದು ನಗರ ತೊರೆದವರ ಪತ್ತೆಗಾಗಿ ಪೊಲೀಸರು ತಂಡ ರಚಿಸಿ ಬಂಧನಕ್ಕಾಗಿ ಬಲೆಬೀಸಿದ್ದಾರೆ.
ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸತೀಶ್ ರೆಡ್ಡಿ ಅವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಶಾಸಕ ನಾರಾ ಭರತ್ ರೆಡ್ಡಿ ಅವರ ಬೆಂಬಲಿಗರಿಂದ ಮೂರು ಪ್ರಕರಣ, ಶಾಸಕ ಜನಾರ್ದನ ರೆಡ್ಡಿ ಸೇರಿ ಅವರ ಬೆಂಬಲಿಗರಿಂದ ಎರಡು ಪ್ರಕರಣ, ಪೊಲೀಸರಿಂದ ಸ್ವಯಂ ದೂರು ಸೇರಿ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಈವರೆಗೆ ಒಟ್ಟು ಆರು ಪ್ರಕರಣ ದಾಖಲಾಗಿದೆ.

ಗನ್ ಮ್ಯಾನ್ ಗುರುಚರಣ್ ಸಿಂಗ್ ಬಂಧನ
ಖಾಸಗಿ ಗನ್ ಮ್ಯಾನ್‌ಗಳು ನಡೆಸಿದ ಫೈರಿಂಗ್ ಸಂಬಂಧಿಸಿ ಸಿಸಿಟಿವಿಯಲ್ಲಿ ದೊರೆತ ಸಾಕ್ಷ್ಯ ಆಧರಿಸಿ ಗನ್ ಮ್ಯಾನ್ ಗುರುಚರಣ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಅವರನ್ನು ವಿಚಾರಣೆಗೆ ಒಳಪಡಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದು, ಮತ್ತಿಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಶಾಸಕ ಜನಾರ್ದನ ರೆಡ್ಡಿ ನಿವಾಸಕ್ಕೆ ಪೊಲೀಸ್ ತಂಡ ಭೇಟಿ ನೀಡಿ, ಗಲಭೆ ಸಂಬಂಧ ಮಾಹಿತಿ, ಸಾಕ್ಷ್ಯಗಳನ್ನು ಕಲೆ ಹಾಕಿದೆ. ಗಲಭೆ ದಿನ ಮನೆಯತ್ತ ತೂರಿ ಬಂದ ಕಲ್ಲು, ಸೆಲ್, ಬಾಟಲಿ, ಮೂರು ಖಾಸಗಿ ಬುಲೆಟ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಸಿರಗುಪ್ಪ ರಸ್ತೆಯಲ್ಲಿ ನಡೆದ ಗಲಾಟೆ ವೇಳೆ ಬಂದ ಆಟೋದಲ್ಲಿ ಗಾಜಿನ ಬಾಟಲ್ ತಂದಿರುವ ವಿಡಿಯೊ ವೈರಲ್ ಆಗಿದೆ. ಕಲ್ಲುತೂರಾಟ, ಫೈರಿಂಗ್ ನಡುವೆಯೇ ಗುಂಪಿನಲ್ಲಿ ಪ್ರತ್ಯಕ್ಷವಾದ ಆಟೋದಲ್ಲಿ ಗಾಜಿನ ಬಾಟಲ್‌ಗಳಿದ್ದು, ಇವುಗಳನ್ನು ನೆರೆದಿದ್ದ ಗುಂಪಿನಲ್ಲಿ ಹಂಚಿಕೆ ಮಾಡುವುದನ್ನು ಕಂಡ ಪೊಲೀಸರು ತಡೆಯುತ್ತಿರುವ ದೃಶ್ಯ ಸೆರೆಯಾಗಿದೆ. ಗಾಜಿನ ಬಾಟಲ್‌ಗಳನ್ನು ಕೆಲವರು ಮನಸೋ ಇಚ್ಛೆ ತೂರಿದ್ದಾರೆ.
In the Bellary banner clash case, police have intensified the investigation and arrested 27 individuals, including workers from both the BJP and Congress, as well as a private gunman. The arrests were made based on CCTV evidence that captured stone-pelting, bottle-throwing, and firing during the violent incident.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am