ಮದುವೆಯಾದ ಎರಡೂವರೆ ತಿಂಗಳಿಗೆ ಬೇರೆ ಯುವಕನ ಹಿಂದೋಡಿದ ಪತ್ನಿ ; ಬೇಸತ್ತ ಪತಿರಾಯ ಆತ್ಮಹತ್ಯೆ, ಸುದ್ದಿ ಕೇಳಿ ಮದುವೆ ಮಾಡಿಕೊಟ್ಟ ಮಾವನೂ ಸಾವಿಗೆ ಶರಣು 

27-01-26 09:34 pm       HK News Desk   ಕರ್ನಾಟಕ

ಮದುವೆಯಾಗಿ ಎರಡೂವರೆ ತಿಂಗಳಿಗೆ ಪತ್ನಿ ತನ್ನ ಹಳೆಯ ಪ್ರಿಯಕರನ ಜೊತೆ ಪರಾರಿಯಾಗಿದ್ದು ಇದರ ಚಿಂತೆಯಲ್ಲಿ ನವ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.‌ 

ದಾವಣಗೆರೆ, ಜ.27 : ಮದುವೆಯಾಗಿ ಎರಡೂವರೆ ತಿಂಗಳಿಗೆ ಪತ್ನಿ ತನ್ನ ಹಳೆಯ ಪ್ರಿಯಕರನ ಜೊತೆ ಪರಾರಿಯಾಗಿದ್ದು ಇದರ ಚಿಂತೆಯಲ್ಲಿ ನವ ವಿವಾಹಿತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ತಾಲೂಕು ಗುಮ್ಮನೂರು ಗ್ರಾಮದಲ್ಲಿ ನಡೆದಿದೆ.‌ 

ಯುವಕನ ಸಾವಿನ ಸುದ್ದಿ ತಿಳಿದು ಮದುವೆ ಮಾಡಿಕೊಟ್ಟ ಯುವತಿಯ ಮಾವನೂ ಸಹ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹರೀಶ್(32) ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತ. ಘಟನೆಯಿಂದ ಮನನೊಂದು ಯುವತಿಯ ಮಾವ ರುದ್ರೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ. ‌

ಮದುವೆಯಾಗಿ ಎರಡುವರೆ ತಿಂಗಳಲ್ಲಿ ಹೆಂಡತಿ ಸರಸ್ವತಿ ಬೇರೊಬ್ಬ ಯುವಕನೊಂದಿಗೆ ಓಡಿ ಹೋಗಿದ್ದು ಆನಂತರ ಪತಿಯ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಳು. ಈ ಹಿನ್ನೆಲೆ ಪತಿ ಹರೀಶ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಹೆಂಡತಿ, ಅತ್ತೆ ಮಾವ ಹಾಗೂ ಹೆಂಡತಿಯನ್ನ ಕರೆದುಕೊಂಡು ಹೋದ ಯುವಕನೇ ಕಾರಣ ಎಂದು ಬರೆದಿಟ್ಟಿದ್ದಾನೆ. 

ತನ್ನ ಅಂತ್ಯ ಸಂಸ್ಕಾರವನ್ನ ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆಯೂ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a shocking incident from Gummanur village in Davanagere, a 32-year-old newlywed man died by suicide just two and a half months after marriage, allegedly distressed after his wife eloped with her former lover and later filed harassment complaints against him. Upon hearing the news, the woman’s uncle, who had arranged the marriage, also ended his life. Police have registered a case and are investigating the matter.