ಬ್ರೇಕಿಂಗ್ ನ್ಯೂಸ್
30-01-26 12:38 pm HK News Desk ಕರ್ನಾಟಕ
ಗದಗ, ಜ.30 : ಐತಿಹಾಸಿಕ ನಗರಿ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ 13ನೇ ದಿನ ಮುಂದುವರಿದಿದ್ದು, ಪ್ರತಿದಿನವೂ ಅಪರೂಪದ ಅವಶೇಷಗಳು ಬೆಳಕಿಗೆ ಬರುತ್ತಿವೆ. ನಿನ್ನೆ ಜ.29ರಂದು ನಡೆದ ಉತ್ಖನನದ ವೇಳೆ ಮೂರು ಹೆಡೆಗಳ ನಾಗರ ಕಲ್ಲು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಕೋಟೆ ವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ಅಪರೂಪದ ನಾಗರ ಶಿಲ್ಪ ಸಿಕ್ಕಿದ್ದು, ಇದನ್ನು ಕಂಡ ಸ್ಥಳೀಯರು ವಿವಿಧ ಅರ್ಥಗಳನ್ನು ನೀಡುತ್ತಿದ್ದಾರೆ. ನಿಧಿ ಇರುವ ಸ್ಥಳದಲ್ಲಿ ನಾಗರ ಕಲ್ಲು ಇರುವುದು ಸಾಮಾನ್ಯ ಎಂಬ ಮಾತು ಮತ್ತೆ ಚರ್ಚೆಗೆ ಬಂದಿದೆ.
ನಿಧಿ ಇದ್ದಲ್ಲಿ ನಾಗ- ಸ್ಥಳೀಯರ ಮಾತು
ಪ್ರವಾಸಿ ಮಿತ್ರ ಆಲಪ್ಪ ತುಳಸಿಮನಿ ಮಾತನಾಡಿ, “ನಾಗರ ಸರ್ಪಗಳಲ್ಲಿ ಮೂರು ಹೆಡೆ, ಪಂಚಮುಖಿ, ಸಪ್ತಮುಖಿ ಇರುತ್ತವೆ. ಇವು ನಿಧಿ ಇರುವ ಸ್ಥಳವನ್ನು ಗುರುತಿಸುತ್ತವೆ. ಲಕ್ಕುಂಡಿಯಲ್ಲಿ ಸಿಕ್ಕಿರುವ ಮೂರು ಹೆಡೆ ನಾಗರ ಕಲ್ಲು ಲಕ್ಷ್ಮೀ ವಾಸಸ್ಥಾನವನ್ನು ಸೂಚಿಸುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
101 ದೇವಸ್ಥಾನ, ಬಾವಿಗಳ ನಾಡು ಲಕ್ಕುಂಡಿ
ಇತಿಹಾಸದ ಪುಟಗಳನ್ನು ತಿರುಗಿಸಿದರೆ, ಕಲ್ಯಾಣಿ ಚಾಳುಕ್ಯರು ಲಕ್ಕುಂಡಿಯಲ್ಲಿ 101 ಬಾವಿ ಹಾಗೂ 101 ದೇವಸ್ಥಾನಗಳನ್ನು ನಿರ್ಮಿಸಿದ್ದರು ಎನ್ನುವ ಮಾಹಿತಿ ಇದೆ. 11ನೇ ಶತಮಾನದಲ್ಲಿ ಜೈನ ಧರ್ಮದ ಪ್ರಭಾವ ಹೆಚ್ಚಾಗಿ, 24 ತೀರ್ಥಂಕರರ ಆರಾಧನೆ ನಡೆಯುತ್ತಿತ್ತು. ಸಪ್ತಮುಖಿ ನಾಗದೇವರ ಪೂಜೆ ಕೂಡ ವ್ಯಾಪಕವಾಗಿತ್ತು. ಲಕ್ಕುಂಡಿಯ ನಾಗನಾಥ ದೇವಸ್ಥಾನದಲ್ಲಿ ಏಳು ಹೆಡೆಗಳ ನಾಗ ಶಿಲ್ಪವಿದ್ದರೂ, ಅಲ್ಲಿ ಪಾರ್ಶ್ವನಾಥರ ಮೂರ್ತಿ ಇಲ್ಲದಿರುವುದು ಹಾಗೂ ಲಿಂಗ ಸ್ಥಾಪನೆಯಿರುವುದು ನಿಧಿಯ ಸಂಕೇತವಾಗಿರಬಹುದು ಎಂಬ ನಂಬಿಕೆ ವ್ಯಕ್ತವಾಗಿದೆ.
ಹೊಯ್ಸಳ, ವಿಜಯನಗರರ ಕಾಲದ ಸಿರಿವಂತ ಪರಂಪರೆ
ಇತಿಹಾಸಕಾರರ ಪ್ರಕಾರ, ಹೊಯ್ಸಳರ ರಾಜಧಾನಿಗಳಲ್ಲಿ ಟಂಕಸಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಮುತ್ತು, ರತ್ನ, ಬಂಗಾರಗಳ ವ್ಯಾಪಾರ ಜೋರಾಗಿತ್ತು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಈ ಪ್ರದೇಶ ಸಿರಿ ಸಂಪತ್ತಿನ ನಾಡಾಗಿತ್ತು. ಸರ್ಪದ ಕಲ್ಲುಗಳು ಸಿಕ್ಕಿರುವುದು ಇಲ್ಲಿನ ಶ್ರೀಮಂತ ಪರಂಪರೆಯ ಸಂಕೇತವಾಗಿರಬಹುದು ಎನ್ನಲಾಗುತ್ತಿದೆ.
‘ನಿಧಿಗಾಗಿ ಅಲ್ಲ, ಇತಿಹಾಸಕ್ಕಾಗಿ ಉತ್ಖನನ’
ಲಕ್ಕುಂಡಿ ಅಭಿವೃದ್ಧಿ ಆಯುಕ್ತ ಶರಣು ಗೋಗೇರಿ ಮಾತನಾಡಿ, “12 ದಿನಗಳ ಉತ್ಖನನ ಯಶಸ್ವಿಯಾಗಿ ನಡೆದಿದೆ. ಇಂದು ಮೂರು ಹೆಡೆಯ ನಾಗರ ಶಿಲ್ಪ ಪತ್ತೆಯಾಗಿದೆ. ಇತಿಹಾಸದಲ್ಲಿ ನಾಗಾರಾಧನೆ ಮಹತ್ವದ್ದಾಗಿತ್ತು. ನಾವು ನಿಧಿಗಾಗಿ ಉತ್ಖನನ ಮಾಡುತ್ತಿಲ್ಲ. ಲಕ್ಕುಂಡಿಯು ಕಲ್ಯಾಣಿ ಚಾಳುಕ್ಯರು, ರಾಷ್ಟ್ರಕೂಟರು, ಹೊಯ್ಸಳರ ಕಾಲದ ಶ್ರೀಮಂತ ವಾಣಿಜ್ಯ ನಗರಿಯಾಗಿತ್ತು. ಈ ಉತ್ಖನನದಿಂದ ಇತಿಹಾಸಕ್ಕೆ ಪೂರಕವಾದ ಮಹತ್ವದ ಮಾಹಿತಿ ಲಭ್ಯವಾಗುತ್ತಿದೆ. ಮುಂದೆಯೂ ಉತ್ಖನನ ಮುಂದುವರಿಯಲಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಉತ್ಖನನ ಸ್ಥಳದಲ್ಲಿ ನಿಜ ಹಾವು ಪತ್ತೆ
ಉತ್ಖನನ ಸ್ಥಳದಲ್ಲಿ ನಿಜವಾದ ಹಾವು ಪತ್ತೆಯಾಗಿರುವ ಘಟನೆ ಕುತೂಹಲಕ್ಕೆ ಕಾರಣವಾಗಿದೆ. ಲಕ್ಕುಂಡಿ ಉತ್ಖನ ಪ್ರದೇಶದ ಬ್ಲಾಕ್–ಎ ವಿಭಾಗದಲ್ಲಿ ಹಾವು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮೂರು ಹೆಡೆಗಳಿರುವ ನಾಗರ ಶಿಲೆ ಪತ್ತೆಯಾದ ಬೆನ್ನಲ್ಲೇ ನಿಜವಾದ ಹಾವು ಪತ್ತೆಯಾಗಿರುವುದು ಹಲವು ಚರ್ಚೆಗಳಿಗೆ ಕಾರಣವಾಗಿದೆ. ಹಾವು ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಉತ್ಖನ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿಯಲ್ಲಿ ಆತಂಕ ಹೆಚ್ಚಾಗಿದೆ.
During the ongoing excavation at the historic site of Lakkundi in Gadag district, a rare three-headed serpent sculpture was unearthed, sparking curiosity and speculation about hidden treasures. Adding to the intrigue, a real snake was also found at the excavation site, triggering fear and concern among locals and workers.
30-01-26 12:38 pm
HK News Desk
ಕರಾವಳಿ ಜಿಲ್ಲೆಗಳ ರೈತರ ಬೆಳೆ ವಿಮೆಗೆ ರಾಜ್ಯ ಸರ್ಕಾರ...
30-01-26 12:20 pm
ಕಾರವಾರ ರಿಶೇಲ್ ಡಿಸೋಜಾ ಆತ್ಮಹತ್ಯೆ ; ಕೊನೆಗೂ JDS ನ...
30-01-26 11:55 am
ಚೀಟಿ ವ್ಯವಹಾರ ಇತ್ಯರ್ಥಕ್ಕೆ 4 ಲಕ್ಷ ರೂ. ಲಂಚಕ್ಕೆ ಬ...
29-01-26 11:03 pm
ಡಿಕೆ ಮುಖ್ಯಮಂತ್ರಿ ಸ್ಥಾನಕ್ಕೆ ಹೋಗಲು ಭಗವಂತ ಅವಕಾಶ...
29-01-26 10:48 pm
30-01-26 02:04 pm
HK News Desk
ಕೋಲ್ಕತ್ತಾ ಭೀಕರ ಅಗ್ನಿ ಅವಘಡ ; 21 ಮಂದಿ ಸಾವು, ಹೊತ...
30-01-26 01:23 pm
ಕೇರಳದಲ್ಲಿ ಹೈಸ್ಪೀಡ್ ರೈಲು ಯೋಜನೆ ; ತಿರುವನಂತಪುರ-...
29-01-26 11:07 pm
ಮಂಜು ಮುಸುಕಿದ್ದೇ ವಿಮಾನ ಅಪಘಾತಕ್ಕೆ ಕಾರಣ? ರನ್ ವೇ...
28-01-26 11:16 pm
ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಅಲ್ಪಸಂಖ್ಯಾತ ಮೀಸಲಾತ...
28-01-26 11:14 pm
29-01-26 10:38 pm
Mangalore Correspondent
Kadri Flower Show 2026: ಕದ್ರಿಯಲ್ಲಿ ಫ್ಲವರ್ ಶೋ...
29-01-26 08:37 pm
ಕೋಡಿಬೆಂಗ್ರೆ ದುರಂತದ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ;...
29-01-26 03:54 pm
ನಿರ್ಲಕ್ಷ್ಯದಿಂದಲೇ ಅಪಘಾತ ಹೆಚ್ಚಳ, ಕುಡಿದು ವಾಹನ ಚಲ...
27-01-26 10:50 pm
ಫೆ.1ರಂದು "ನಮ್ಮ ನಡಿಗೆ ತಲಪಾಡಿ ದೇವಿಪುರದ ಕಡೆಗೆ" ಬ...
27-01-26 08:58 pm
27-01-26 10:18 pm
Bangalore Correspondent
ಬೆಂಗಳೂರಿನಲ್ಲಿ ಮತ್ತೊಂದು ದರೋಡೆ ; 1.37 ಕೋಟಿ ರೂ....
27-01-26 05:56 pm
ಕೆನರಾ ಲೈಟಿಂಗ್ ಇಂಡಸ್ಟ್ರೀಸ್ ಸಂಸ್ಥೆಯಿಂದ ಕೊಲ್ಕತ್ತ...
27-01-26 05:15 pm
ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಬೋನಸ್ ಬಂದಿದೆ ! ಬಣ್...
27-01-26 03:21 pm
JAKEA Michael Rego, Rajeev Gowda Arrest: ಧಮ್ಕ...
27-01-26 12:22 pm