ಪೊಲೀಸ್ ಇನ್ಸ್‌ಪೆಕ್ಟರ್‌ ಗೋವಿಂದರಾಜು ಟ್ರ್ಯಾಪ್ ವಿಡಿಯೋ ವೈರಲ್ ; ಭ್ರಷ್ಟನ ಹೆಡೆಮುರಿ ಕಟ್ಟಿದ ಲೋಕಾ ಅಧಿಕಾರಿಗಳು, ಪೊಲೀಸರ ವಿರುದ್ಧವೇ ಕೂಗಾಡಿ ರಂಪಾಟ, ಸೋಶಿಯಲ್ ಮೀಡಿಯಾದಲ್ಲಿ ಕ್ಯಾಕರಿಸಿ ಉಗಿದ ಜನರು !

30-01-26 05:00 pm       Bangalore Correspondent   ಕರ್ನಾಟಕ

ಲಂಚದ ಆರೋಪದಲ್ಲಿ ಟ್ರ್ಯಾಪ್‌ಗೆ ಸಿಲುಕುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಹೈಡ್ರಾಮಾ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಲಂಚ ಸ್ವೀಕರಿಸುವ ವೇಳೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದಾಗ ಗೋವಿಂದರಾಜು ತಪ್ಪಿಸಿಕೊಳ್ಳಲು ನಾಟಕೀಯ ವರ್ತನೆ ತೋರಿಸಿದ್ದು ಸದ್ಯ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಬೆಂಗಳೂರು, ಜ 30 : ಲಂಚದ ಆರೋಪದಲ್ಲಿ ಟ್ರ್ಯಾಪ್‌ಗೆ ಸಿಲುಕುತ್ತಿದ್ದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಗೋವಿಂದರಾಜು ಹೈಡ್ರಾಮಾ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಲಂಚ ಸ್ವೀಕರಿಸುವ ವೇಳೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದಾಗ ಗೋವಿಂದರಾಜು ತಪ್ಪಿಸಿಕೊಳ್ಳಲು ನಾಟಕೀಯ ವರ್ತನೆ ತೋರಿಸಿದ್ದು ಸದ್ಯ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಗೋವಿಂದ ರಾಜು ಲಂಚಕ್ಕೆ ಭೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಪಡೆದ ಲೋಕಾ ಅಧಿಕಾರಿಗಳು ಪಕ್ಕ ಪ್ಲ್ಯಾನ್‌ ಮಾಡಿಕೊಂಡು ಯೋಜನೆ ರೂಪಿಸಿ ಟ್ರ್ಯಾಪ್ ನಡೆಸಿದ್ದರು. ಲಂಚದ ಹಣ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಇನ್ಸ್‌ಪೆಕ್ಟರ್ ಗೋವಿಂದರಾಜು ಗಾಬರಿಗೊಂಡು ಅಸಹಜವಾಗಿ ವರ್ತಿಸಿದ್ದಾನೆ. 

ಲೋಕಾ ಅಧಿಕಾರಿಗ ಬಲೆಗೆ ತಗಲಕೊಂಡ ಬೆನ್ನಲ್ಲೇ  ಗೋವಿಂದರಾಜು ವಿಚಿತ್ರವಾಗಿ ಚಿರಾಡಿ ಅವರಿಂದ ಬಿಡಿಸಿಕೊಳ್ಳಲು ಟ್ರೈ ಮಾಡಿದ್ದಾನೆ . ಜೊತೆಗೆ ತನಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿ ಗಲಾಟೆ ಮಾಡಿದ್ದು, ಕೆಲಕಾಲ ಅಧಿಕಾರಿಗಳ ಕಾರ್ಯಾಚರಣೆಗೆ ಅಡ್ಡಿ ಉಂಟುಮಾಡಿದ್ದಾನೆ. ಆದರೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಭ್ರಷ್ಟನನ್ನ ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಗೋವಿಂದರಾಜು ವಿರುದ್ಧ ಭ್ರಷ್ಟಾಚಾರ ನಿರೋಧಕ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ. ಈ ಘಟನೆ ಪೊಲೀಸ್ ಇಲಾಖೆಯಲ್ಲಿ ಚರ್ಚೆಗೆ ಕಾರಣವಾಗಿದ್ದು, ಶಿಸ್ತು ಮತ್ತು ಹೊಣೆಗಾರಿಕೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

ಇನ್ನೂ ದೂರುದಾರ ಸೂರಜ್ ಮಾತನಾಡಿ, “ಪ್ರತಿದಿನ ಠಾಣೆಗೆ ಕರೆಸಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಪ್ರಕರಣದಿಂದ ಪಾರಾಗಲು ಮೇಲಧಿಕಾರಿಗಳಿಗೆ ಹಣ ಕೊಡಬೇಕು ಎಂದು ಹೇಳಲಾಗುತ್ತಿತ್ತು. ಪೊಲೀಸ್ ಠಾಣೆ ನ್ಯಾಯ ಸಿಗುವ ಜಾಗ ಎಂದು ನಂಬಿದ್ದೆವು, ಆದರೆ ಅನುಭವವೇ ಬೇರೆ ಆಗಿತ್ತು” ಎಂದು ಹೇಳಿದ್ದಾರೆ.

ಈ ಕುರಿತು ಲೋಕಾಯುಕ್ತ ಎಸ್‌ಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, “ಪ್ರಿವೆನ್ಷನ್ ಆಫ್ ಕರಪ್ಷನ್ ಆ್ಯಕ್ಟ್ ಅಡಿ ಟ್ರ್ಯಾಪ್ ಕಾರ್ಯಾಚರಣೆ ನಡೆಸಲಾಗಿದೆ. ಇನ್ಸ್‌ಪೆಕ್ಟರ್ ಗೋವಿಂದರಾಜು ಐದು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷ ರೂ. ಈಗಾಗಲೇ ಪಡೆದಿದ್ದು, ಉಳಿದ ನಾಲ್ಕು ಲಕ್ಷ ಪಡೆಯುವಾಗ ಟ್ರ್ಯಾಪ್ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಕೆ ಆರ್ ಎಸ್ ಪಕ್ಷ, ಜನರು ಕೊಟ್ಟ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೆರೆಯುವ ಎಲ್ಲಾ ದುಷ್ಟ ಮತ್ತು ಭ್ರಷ್ಟ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇದನ್ನು ನೋಡಿ ಸದಾ ನೆನಪಿಟ್ಟುಕೊಳ್ಳಬೇಕು. ಬದಲಾಗದಿದ್ದರೆ ನಿಮಗೂ ಇದೇ ಗತಿ ಇಂದಲ್ಲ ನಾಳೆ ಆಗಲಿದೆ. ಪರಿಸ್ಥಿತಿ ಕೈಮೀರಿದರೆ ಭ್ರಷ್ಟರನ್ನು ಜನರು ಅಟ್ಟಾಡಿಸಿ ಹೊಡೆಯುತ್ತಾರೆ, ಎಚ್ಚರ!!! ಶ್ರೀಲಂಕಾ, ಬಾಂಗ್ಲಾ, ನೇಪಾಳ ನೆನಪಿಸಿಕೊಳ್ಳಿ ಎಂದಿದೆ.

A dramatic video of police inspector Govindaraju being caught in a Lokayukta trap while accepting a bribe has gone viral on social media. The inspector allegedly created a ruckus, cited health issues, and tried to evade arrest, but officials restrained and detained him. The incident has sparked public outrage online, raising serious questions about corruption, accountability, and discipline within the police force.