ಬ್ರೇಕಿಂಗ್ ನ್ಯೂಸ್
17-02-26 02:53 pm HK News Desk ಕರ್ನಾಟಕ
ಬೆಂಗಳೂರು, ಫೆ.17: ದೇಶದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಪ್ರಭಾವ ಬೀರಬಲ್ಲ ಮಹತ್ವದ ಆದೇಶವೊಂದನ್ನು ದೆಹಲಿ ಹೈಕೋರ್ಟ್ ಹೊರಡಿಸಿದೆ. ಪ್ರಸಿದ್ಧ ಸಂಗೀತ ನಿರ್ದೇಶಕ ಇಳಯರಾಜಾ ಅವರಿಗೆ ಸಂಬಂಧಿಸಿದ 134 ಚಲನಚಿತ್ರ ಹಾಡುಗಳ ಹಕ್ಕು ವಿಚಾರದಲ್ಲಿ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ವಿಧಿಸಿದೆ.
1976–2001ರ ಅವಧಿಯಲ್ಲಿ ರಚಿಸಲಾದ 134 ಚಿತ್ರಗಳ ಹಾಡುಗಳ ಹಕ್ಕು ತಮ್ಮದೇ ಎಂದು ಸರಿಗಮ ಕಂಪನಿ ಹೇಳಿಕೊಂಡಿತ್ತು. ಇಳಯರಾಜಾ ಸಂಗೀತ ಸಂಯೋಜಿಸಿದ 134 ಚಲನಚಿತ್ರಗಳ ಸಂಗೀತ ಹಾಗೂ ಧ್ವನಿಮುದ್ರಣ ಹಕ್ಕುಗಳನ್ನು ನಿರ್ಮಾಪಕರೊಂದಿಗೆ ಮಾಡಿದ ಔಪಚಾರಿಕ ಒಪ್ಪಂದಗಳ ಮೂಲಕ ವಿಶ್ವವ್ಯಾಪಿ ಮತ್ತು ಶಾಶ್ವತವಾಗಿ ಪಡೆದಿದ್ದೇವೆ ಎಂದು ಸರಿಗಮ ನ್ಯಾಯಾಲಯಕ್ಕೆ ತಿಳಿಸಿತ್ತು.
ಆದರೆ ಇಳಯರಾಜಾ ಈ ಹಾಡುಗಳನ್ನು ಅಮೆಜಾನ್ ಮ್ಯೂಸಿಕ್, ಐಟ್ಯೂನ್ಸ್ ಮತ್ತು ಜಿಯೋಸಾವನ್ ಸೇರಿದಂತೆ ಡಿಜಿಟಲ್ ವೇದಿಕೆಗಳಲ್ಲಿ ಅಪ್‌ಲೋಡ್ ಮಾಡಿ ತಮ್ಮದೇ ಹಕ್ಕು ಎಂದು ಹೇಳಿಕೊಳ್ಳುತ್ತಿರುವುದು ಕಾನೂನುಬಾಹಿರ ಎಂದು ಸಂಸ್ಥೆ ವಾದಿಸಿತ್ತು.
ಸರಿಗಮ ಪರ ವಕೀಲರು 1957ರ ಹಕ್ಕುಸ್ವಾಮ್ಯ ಕಾಯಿದೆಯ ಪ್ರಕಾರ ಚಲನಚಿತ್ರಕ್ಕಾಗಿ ರಚಿಸಲಾದ ಸಂಗೀತದ ಮೊದಲ ಮಾಲೀಕರು ನಿರ್ಮಾಪಕರೇ ಆಗುತ್ತಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿ ತುಷಾರ್ ರಾವ್ ಕೆಟೇಲಾ ಸರಿಗಮದ ವಾದ ಒಪ್ಪಿಕೊಂಡು, ತಡೆಯಾಜ್ಞೆ ನೀಡದಿದ್ದರೆ ಕಂಪನಿಗೆ ತುಂಬಲಾಗದ ನಷ್ಟವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇಳಯರಾಜಾ ಹಾಗೂ ಅವರ ಪ್ರತಿನಿಧಿಗಳು ಸಂಬಂಧಿತ ಹಾಡುಗಳನ್ನು ಬಳಸಬಾರದು ಅಥವಾ ಪರವಾನಗಿ ನೀಡಬಾರದು ಎಂದು ಆದೇಶಿಸಿದ್ದಾರೆ.
ಈಗಾಗಲೇ ಜನಪ್ರಿಯ ತಮಿಳು ಹಾಡು “ಎನ್ ಇನಿಯಾ ಪೊನ್ ನಿಲವೇ” ಬಳಕೆ ಕುರಿತಾಗಿ ಇಳಯರಾಜಾ ಮತ್ತು ಸರಿಗಮಾ ನಡುವೆ ವಿವಾದ ನಡೆದಿತ್ತು. ಅಘಾಥಿಯಾ ಚಿತ್ರದ ಬಳಕೆಗೆ ಸಂಬಂಧಿಸಿ ನ್ಯಾಯಾಲಯ ಮೊದಲು ನಿರ್ಮಾಪಕರು ಸರಿಗಮಾದಿಂದ ಪರವಾನಗಿ ಪಡೆಯದೆ ಹಾಡನ್ನು ಬಳಸಬಾರದು ಎಂದು ಹೇಳಿತ್ತು. ನಂತರ ನಿರ್ಮಾಪಕರ ಹೂಡಿಕೆ ಪರಿಗಣಿಸಿ, ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಬಳಿ 30 ಲಕ್ಷ ರೂ. ಠೇವಣಿ ಇಡುವ ಷರತ್ತಿನೊಂದಿಗೆ ಬಳಕೆ ಮಾಡಲು ಅವಕಾಶ ನೀಡಲಾಗಿತ್ತು.
ನ್ಯಾಯಾಲಯದ ಆದೇಶ ಪ್ರಕಾರ, ಇಳಯರಾಜಾ ಅಥವಾ ಅವರ ಪರವಾಗಿ ಕಾರ್ಯ ನಿರ್ವಹಿಸುವ ಸಹಭಾಗಿಗಳು, ಪ್ರತಿನಿಧಿಗಳು ಅಥವಾ ಲೈಸೆನ್ಸಿಗಳು ಸರಿಗಮ ವಶದಲ್ಲಿರುವ 134 ಚಿತ್ರಗಳ ಧ್ವನಿಮುದ್ರಣ ಹಾಗೂ ಸಾಹಿತ್ಯ-ಸಂಗೀತ ಕೃತಿಗಳ ಮೇಲೆ ಯಾವುದೇ ಮಾಲೀಕತ್ವದ ಹಕ್ಕು ಹೊಂದಿದ್ದೇವೆ ಎಂದು ಹೇಳಿಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಪ್ರಕರಣ ಸಂಗೀತ ಕಾಪಿರೈಟ್ ಹಕ್ಕುಗಳ ಕುರಿತು ಚಿತ್ರೋದ್ಯಮ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ವಲಯದಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
16-10-26 11:04 am
HK News Staffer
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm
Mangaluru Valencia St. Vincent Church Priest...
14-10-26 09:09 pm