ಬ್ರೇಕಿಂಗ್ ನ್ಯೂಸ್
26-05-26 11:03 pm HK News Desk ಕರ್ನಾಟಕ
ಬೆಂಗಳೂರು, ಮೇ 26: ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಕೊನೆಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಮಂಗಳವಾರ ದಿನವಿಡೀ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಿದ್ದರಾಮಯ್ಯ ಮತ್ತು ಹೈಕಮಾಂಡ್ ನಾಯಕರ ಸಭೆ ನಡೆದಿದ್ದು, ಇದರಲ್ಲಿ ಮಹತ್ತರ ನಿರ್ಧಾರಕ್ಕೆ ಬರಲಾಗಿದೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆಗೆ ಕಳುಹಿಸಲು ಹೈಕಮಾಂಡ್ ನಿರ್ಧರಿಸಿದ್ದು, ಸಿಎಂ ಗಾದಿಗಾಗಿ ತುದಿಗಾಲಲ್ಲಿ ನಿಂತಿರುವ ಡಿಕೆ ಶಿವಕುಮಾರ್ ಅವರನ್ನು ರಾಜ್ಯದಲ್ಲಿ ಸಿಎಂ ಪಟ್ಟದಲ್ಲಿ ಕೂರಿಸಲು ಪಕ್ಷ ನಿರ್ಧರಿಸಿದೆ. ಸಿದ್ದರಾಮಯ್ಯ ಅವರನ್ನು ತುರ್ತಾಗಿ ದೆಹಲಿಗೆ ಕರೆಸಿಕೊಂಡು ಹೈಕಮಾಂಡ್ ನಾಯಕರು ಸಭೆ ನಡೆಸಿದ್ದರು. ಇದಕ್ಕೂ ಮುನ್ನ ದೆಹಲಿಯ ಕರ್ನಾಟಕ ಭವನದಲ್ಲಿ ತನ್ನ ಆಪ್ತ ಸಚಿವರೊಂದಿಗೆ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಅದರಲ್ಲಿ ಡಿಕೆಶಿ ಕಡೆಯವರು ಇರಲಿಲ್ಲ.
ಆನಂತರ ಸುದೀರ್ಘ ಆರು ಗಂಟೆ ಕಾಲ ಸಭೆ ನಡೆಸಿದ್ದು, ಇದರಲ್ಲಿ ಸಿದ್ದರಾಮಯ್ಯ ಅವರನ್ನು ದೆಹಲಿ ರಾಜಕಾರಣಕ್ಕೆ ಕರೆಸಿಕೊಂಡು ದಕ್ಷಿಣ ಭಾರತದ ಅನೇಕ ರಾಜ್ಯಗಳಲ್ಲಿ ತನ್ನದೇ ನಾಯಕತ್ವದ ಛಾಪು ತೋರಿಸಿರುವ ಡಿಕೆಶಿ ಅವರನ್ನು ಕರ್ನಾಟಕ ಸಿಎಂ ಸ್ಥಾನದಲ್ಲಿ ಕೂರಿಸಲು ಹೈಕಮಾಂಡ್ ನಿರ್ಧರಿಸಿದೆ. ಆದರೆ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿಯವರ ದೆಹಲಿ ಆಹ್ವಾನದ ಬಗ್ಗೆ ಯಾವುದೇ ಅಭಿಪ್ರಾಯ ನೀಡಿಲ್ಲ ಎನ್ನಲಾಗುತ್ತಿದ್ದು, ತನ್ನ ಆಪ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುವುದಾಗಿ ತಿಳಿಸಿದ್ದಾರೆ ಎನ್ನುವ ಮಾಹಿತಿಗಳಿವೆ.
ಸದ್ಯ ಗೊತ್ತಾದ ಮಾಹಿತಿ ಪ್ರಕಾರ ಸಿದ್ದರಾಮಯ್ಯ ಮೇ 28ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿದ್ದಾರೆ. ಇದಕ್ಕೂ ಮುನ್ನ ಸಚಿವರೊಂದಿಗೆ ಬ್ರೇಕ್ ಫಾಸ್ಟ್ ಮೀಟಿಂಗನ್ನೂ ನಡೆಸಲಿದ್ದಾರೆ ಎನ್ನುವ ಮಾಹಿತಿ ಇದೆ. ಸಿದ್ದರಾಮಯ್ಯ ಇಂದು ರಾತ್ರಿಯೇ ದೆಹಲಿಯಿಂದ ಹೊರಟಿದ್ದು, ಡಿಕೆ ಶಿವಕುಮಾರ್ ಗುರುವಾರ ಸಂಜೆಯ ವೇಳೆಗೆ ದೆಹಲಿಯಿಂದ ಬರಲಿದ್ದಾರೆ. ಈ ನಡುವೆ, ರಾಜ್ಯದಲ್ಲಿ ಯಾವ ರೀತಿಯ ಬೆಳವಣಿಗೆ ಆಗುತ್ತದೆ ಎನ್ನುವ ಕುತೂಹಲವೂ ಇದೆ. ಇದೇ ವೇಳೆ ದೆಹಲಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಕೆಸಿ ವೇಣುಗೋಪಾಲ್, ಸಭೆಯಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಮಾತ್ರ ಚರ್ಚೆಯಾಗಿದೆ. ಬೇರಾವುದೇ ಚರ್ಚೆ ಆಗಿಲ್ಲ. ಬೇರೆಲ್ಲ ವದಂತಿಗಳಷ್ಟೇ ಎಂದು ಸಿಎಂ ಬದಲಾವಣೆಯನ್ನು ತಳ್ಳಿ ಹಾಕಿದ್ದಾರೆ, ದೆಹಲಿಯಲ್ಲಿ ರಾಹುಲ್ ಬಿಟ್ಟರೆ ವೇಣುಗೋಪಾಲ್ ಮಾತ್ರ ಸಿಎಂ ಸಿದ್ದರಾಮಯ್ಯ ಪರವಾಗಿದ್ದರು.
2023ರಲ್ಲಿ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆ ಒಪ್ಪಂದ ಆಗಿತ್ತು ಎನ್ನುವ ಮಾಹಿತಿಗಳಿದ್ದವು. ಇದರ ಬಗ್ಗೆ ಆಗಿಂದಾಗ್ಗೆ ಮಾತುಗಳು ಕೇಳಿಬರುತ್ತಿದ್ದರೂ ಹಿರಿಯ ಸಚಿವರು ಮಾತ್ರ ಇದನ್ನು ತಳ್ಳಿಹಾಕುತ್ತ ಬಂದಿದ್ದರು. ಹೈಕಮಾಂಡ್ ನಾಯಕರು ಮಾತ್ರ ಇದರ ಬಗ್ಗೆ ಮೌನವಾಗಿಯೇ ಇದ್ದರು. ಡಿಕೆ ಶಿವಕುಮಾರ್ ಕಡೆಯವರು ಮಾತ್ರ ತಮ್ಮ ನಾಯಕ ಸಿಎಂ ಆಗುವುದು ಖಚಿತ ಎಂದೇ ಹೇಳುತ್ತಿದ್ದರು. ಇದೀಗ ಕೇರಳದಲ್ಲಿ ಸ್ಥಳೀಯ ಪ್ರಭಾವಿ ನಾಯಕನಿಗೆ ಸಿಎಂ ಸ್ಥಾನ ಕೊಟ್ಟಿದ್ದರಿಂದ ರಾಜ್ಯದಲ್ಲಿಯೂ ಬದಲಾವಣೆ ಆಗಬಹುದೆಂಬ ವದಂತಿ ಕೇಳಿಬಂದಿತ್ತು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm