ಬ್ರೇಕಿಂಗ್ ನ್ಯೂಸ್
12-08-26 11:18 pm HK News Staffer ಕ್ರೈಂ
ಮಂಗಳೂರು, ಆ.12: ಮಂಗಳೂರು ಪೊಲೀಸರ ಕೈಯಿಂದ ಕೈ ಕೋಳದ ಜೊತೆಯಲ್ಲೇ ಪರಾರಿಯಾಗಿದ್ದ ಬಾಗಲಕೋಟ ಮೂಲದ ನಟೋರಿಯಸ್ ಆರೋಪಿ ಅಲ್ತಾಫ್ ಹುಸೇನ್ ಎರಡು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಹಿಳೆಯೊಬ್ಬರ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದ ಪ್ರಕರಣದಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಅಲ್ತಾಫ್ ಹುಸೇನ್ ನಗರದ ಪಾಂಡೇಶ್ವರದ ರೊಜಾರಿಯೋ ಶಾಲೆಯ ಬಳಿ ಪೊಲೀಸರ ಕೈಯಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡಿದ್ದ. ಜೂನ್ 26ರಂದು ನಡೆದ ಪರಾರಿ ಘಟನೆ ಸಂಬಂಧಿಸಿ ಪಾಂಡೇಶ್ವರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿತ್ತು. ಇದೀಗ ವಿಜಯಪುರ ಜಿಲ್ಲೆಯ ಗೋಲಗುಂಬಜ್ ಬಳಿಯ ಓಣಿಯಲ್ಲಿದ್ದಾಗ ಪಾಂಡೇಶ್ವರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಮಾರುತಿ ಪಿ. ಹಾಗೂ ಸಿಬಂದಿಗಳಾದ ಲಕ್ಷ್ಮಣ ಸಾಲೋಟಗಿ, ಸಾಗರ್, ಆಂಜನೇಯ ಸೇರಿ ಬಂಧಿಸಿದ್ದಾರೆ.
ಜೂನ್ 14ರಂದು ಮಧ್ಯಾಹ್ನ 12.30 ಗಂಟೆಗೆ ಮಹಿಳೆಯೊಬ್ಬರು ವೆಲೆನ್ಸಿಯಾದಿಂದ ಸೂಟರ್ ಪೇಟೆ ಕಡೆಗೆ ನಡೆದು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದಿದ್ದವರು ಚಿನ್ನದ ಸರ ಕಿತ್ತುಕೊಂಡು ಹೋಗಿದ್ದರು. ಕೃತ್ಯವನ್ನು ಬಾಗಲಕೋಟ ನಿವಾಸಿ ಅಲ್ತಾಫ್ ಹುಸೇನ್ ಮತ್ತು ಉತ್ತರ ಪ್ರದೇಶ ನಿವಾಸಿ ರವಿ ಬೋರ ಎಂಬವರು ಮಾಡಿದ್ದಾಗಿ ಪೊಲೀಸರು ಪತ್ತೆ ಮಾಡಿದ್ದರು. ತನಿಖೆಯಲ್ಲಿ ಇನ್ನೊಬ್ಬ ಉತ್ತರ ಪ್ರದೇಶ ನಿವಾಸಿ ಮೊಹಮ್ಮದ್ ಸಾಹಿಲ್ ಸಿದ್ದಿಕಿ ಕೂಡ ಭಾಗಿಯಾಗಿದ್ದು ಪತ್ತೆಯಾಗಿತ್ತು.
ಪ್ರಕರಣ ಸಂಬಂಧಿಸಿ ಮೂವರು ಆರೋಪಿಗಳನ್ನು ಜೂನ್ 26ರಂದು ಪೊಲೀಸರು ಬಂಧಿಸಿ ರೊಜಾರಿಯೋ ಶಾಲೆಯ ಬಳಿಯಿಂದ ಕರೆತರುತ್ತಿದ್ದಾಗ ಅಲ್ತಾಫ್ ಹುಸೇನ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ. ಈತನ ಪತ್ತೆಗಾಗಿ ವಿಶೇಷ ಪೊಲೀಸ್ ತಂಡವನ್ನು ಕಮಿಷನರ್ ಸುಧೀರ್ ರೆಡ್ಡಿ ರಚಿಸಿದ್ದರು. ಎರಡು ತಿಂಗಳ ಬಳಿಕ ಆರೋಪಿಯನ್ನು ವಿಜಯಪುರದಲ್ಲಿ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಸರ ಗಳ್ಳತನ ಬಳಿಕ ಮಂಗಳೂರಿನ ಮೀನುಗಾರಿರು ದಕ್ಕೆಗೆ ಅಲ್ತಾಫ್ ಹುಸೇನ್ ಗ್ಯಾಂಗ್ ಬಂದಿರುವ ಬಗ್ಗೆ ಪೊಲೀಸರಿಗೆ ಪಕ್ಕಾ ಮಾಹಿತಿ ಬಂದಿತ್ತು. ಈ ವೇಳೆ, ಗ್ಯಾಂಗ್ ಬಂಧಿಸಲು ಪಾಂಡೇಶ್ವರ ಠಾಣೆಯ ಪೊಲೀಸರು ಅಲ್ಲಿ ತೆರಳಿದ್ದರು. ಐವರು ಪೊಲೀಸ್ ಸಿಬಂದಿ ಮೂವರನ್ನು ಕರೆತರುತ್ತಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಇಬ್ಬರನ್ನು ಬೆನ್ನಟ್ಟಿ ಹಿಡಿದರೆ ಕೈ ಕೋಳದಲ್ಲೇ ಅಲ್ತಾಫ್ ಹುಸೇನ್ ಪರಾರಿಯಾಗಿದ್ದ. ಈ ಗ್ಯಾಂಗ್ ಮೇಲೆ ಹೈದ್ರಾಬಾದ್, ಬಾಗಲಕೋಟೆ, ಗದಗ ಸೇರಿದಂತೆ ಹಲವಾರು ಕಡೆಗಳಲ್ಲಿ ಪ್ರಕರಣ ದಾಖಲಾಗಿವೆ. ಅಲ್ತಾಫ್ ರಸ್ತೆಯಲ್ಲಿ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am