ಬ್ರೇಕಿಂಗ್ ನ್ಯೂಸ್
17-06-26 06:59 pm HK News Desk ಕರ್ನಾಟಕ
ಶಿವಮೊಗ್ಗ, ಜೂ 17: ಕಾನೂನು ಜ್ಞಾನ ಇಲ್ಲದ ಗೃಹಮಂತ್ರಿ ಕರ್ನಾಟಕದಲ್ಲಿದ್ದಾರೆ. ಆರ್ಎಸ್ಎಸ್ ಲೆಕ್ಕ ಕೇಳಲು ಪ್ರಿಯಾಂಕ್ ಖರ್ಗೆ ಯಾರು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಎಂಬ ಕಸವನ್ನು ಸೈಡ್ಗೆ ಹಾಕಬೇಕು. ಪ್ರಿಯಾಂಕ್ ಖರ್ಗೆ ಪ್ರಚಾರಕ್ಕೋಸ್ಕರ ಆರ್ಎಸ್ಎಸ್ ಇಟ್ಟುಕೊಂಡು ಹೊರಟಿದ್ದಾರೆ. ತಾಕತ್ತು ಇದ್ದರೆ ಕಾನೂನು ಕ್ರಮ ತೆಗೆದುಕೊಳ್ಳಿ, ಅದನ್ನು ಬಿಟ್ಟು ಪ್ರಚಾರಕ್ಕಾಗಿ ಹೀಗೆ ಮಾಡುವುದು ಸರಿ ಅಲ್ಲ. ಮಂತ್ರಿಯಾಗಿ ಏನು ಬೇಕಾದರೂ ಕ್ರಮ ತೆಗೆದುಕೊಳ್ಳಬಹುದು. ಅವರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಹೋದರೆ ವಿಫಲರಾಗ್ತಾರೆ ಅಂತ ಗೊತ್ತಿದೆ. ಆರ್ಎಸ್ಎಸ್ ಬಗ್ಗೆ ಮಾತಾಡಿದರೆ ಪ್ರಚಾರ ಸಿಗುತ್ತೆ ಅಂತ ಮಾತಾಡುತ್ತಿದ್ದಾರೆ, ನಿಂಗೆ ತಾಕತ್ತಿದ್ರೆ RSS ಮೇಲೆ ಕ್ರಮ ತೆಗೆದುಕೋ ಎಂದು ಕಿಡಿಕಾರಿದರು
ಆರ್ಎಸ್ಎಸ್ ಅಂದವರು ಎಲ್ಲಾ ನೆಲಕಚ್ಚಿ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ ಸಹ ನೆಲ ಕಚ್ಚಿ ಹೋಗುತ್ತಾರೆ. ನೀವು ಯಾರು ಲೆಕ್ಕ ಕೇಳೋಕೆ? ನೀವು ಎಷ್ಟು ಕೊಟ್ಟಿದ್ದೀರಿ? ಇವರೊಬ್ಬ ಮಂತ್ರಿಯಾಗಿ ಹೇಳೋಕೆ ಅಧಿಕಾರ ಕೊಟ್ಟವರ್ಯಾರು? ಎಂದು ಏಕ ವಚನದಲ್ಲಿಯೇ ಪ್ರಶ್ನಿಸಿದರು.
ಆರ್ಎಸ್ಎಸ್ನ ಹಿರಿಯರಾದ ಮೋಹನ್ ಭಾಗವತ್ ಅವರು ಈ ಚಿಲ್ಲರೆಗೆ ಉತ್ತರ ಕೊಟ್ಟಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕಡೆ ಆರ್ಎಸ್ಎಸ್ ಪಥಸಂಚಲನ ನಡೆಯಿತು. ಸಣ್ಣ ಗಲಾಟೆ ಸಹ ಆಗಲಿಲ್ಲ. ನಿಮ್ಮ ಎದುರಿಗೇನೇ ನಿಮ್ಮ ರಾಜ್ಯಸಭಾ ಸದಸ್ಯರು ಪಾಕಿಸ್ತಾನ ಜಿಂದಾಬಾದ್ ಎಂದರು. ಏನು ಕ್ರಮ ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.
ಇಂತಹ ಚಿಲ್ಲರೆಗೆ ಉತ್ತರ ಕೊಡಬೇಡಿ ಅಂತ ಮೋಹನ್ ಭಾಗವತ್ ಅವರಿಗೆ ಕೇಳಿಕೊಳ್ಳುತ್ತೇನೆ. ನಮ್ಮ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳು ಜಾಸ್ತಿ ಇದೆ. ಹಾಗಾಗಿ ಮೋಹನ್ ಭಾಗವತ್ ಅವರಿಗೆ ಝೆಡ್ ಪ್ಲಸ್ ಭದ್ರತೆ ಕೊಟ್ಟಿದ್ದಾರೆ. ಇವನ್ಯಾರು ಇವನ್ನೆಲ್ಲ ಕೇಳೋಕೆ ಎಂದರು.
ಪ್ರಚಾರಕ್ಕಾಗಿ ಪ್ರಿಯಾಂಕ್ ಖರ್ಗೆ ಹುಚ್ಚು ಹುಚ್ಚು ಹೇಳಿಕೆ ಕೊಡುತ್ತಿದ್ದಾರೆ. ಮೋಹನ್ ಭಾಗವತ್ ಅಮೆರಿಕಾಗೆ ಹೋಗಿರೋದನ್ನ ಕೇಳೋಕೆ ಇವರ ಅಪ್ಪನ ಮನೆಯಿಂದ ಹಣ ಕೊಟ್ಟಿದ್ದಾರಾ? ಎಂದು ಏಕವಚನದಲ್ಲಿ ಪ್ರಶ್ನಿಸಿದರು.
ಆರ್ಎಸ್ಎಸ್ ಬಗ್ಗೆ ಹೀಗೆ ಮಾತನಾಡಿ ದೊಡ್ಡ ಮನುಷ್ಯ ಆಗೋಗೆ ಹೊರಟಿದ್ದಾರೆ. ಕಸದಂತಿರುವ ಇವರಿಗೆ ಉತ್ತರ ಕೊಡಬೇಡಿ. ಕಸದ ಬುಟ್ಟಿಗೆ ತಳ್ಳಿ. ಇಂತಹ ಚಿಲ್ಲರೆ ನಮ್ಮ ಆರ್ಎಸ್ಎಸ್ ಬಗ್ಗೆ ಮಾತಾಡುತ್ತಿದ್ದಾರೆ ಎನ್ನುವ ನೋವು ಇದೆ ಎಂದರು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm