ಬ್ರೇಕಿಂಗ್ ನ್ಯೂಸ್
05-09-26 04:53 pm HK News Staffer ಕರ್ನಾಟಕ
ಬೆಂಗಳೂರು, ಸೆ.5: ಬಿಜೆಪಿಯ ಹಿಂದುತ್ವ, ಕೋಮುವಾದವನ್ನು ತಡೆದು ಯುವಜನರಲ್ಲಿ ಸಂವಿಧಾನದ ಆಶಯಗಳು, ಜಾತ್ಯತೀತ ತತ್ವಗಳನ್ನು ಬೆಳೆಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬೆಂಗಳೂರಿನಲ್ಲಿ ತರಬೇತಿ ಕೇಂದ್ರವನ್ನು ತೆರೆಯಲು ಮುಂದಾಗಿದೆ. ಹೊಸದಾಗಿ ರಾಜಕೀಯದತ್ತ ಆಸಕ್ತಿ ವಹಿಸುತ್ತಿರುವ ಜೆನ್ ಝೀ ಯುವಕರನ್ನು ಸೆಳೆಯಲು ಮತ್ತು ಅವರಲ್ಲಿ ಜಾತ್ಯತೀತ ಮನೋಭಾವನೆ ಬಿತ್ತಲು ಪಕ್ಷದಿಂದಲೇ ತಯಾರಿ ನಡೆದಿದೆ.
ಬಿಜೆಪಿ ಉತ್ತರ ಭಾರತದಲ್ಲಿ ಭದ್ರ ನೆಲೆ ಸ್ಥಾಪಿಸಿದ್ದರೂ ದಕ್ಷಿಣದ ರಾಜ್ಯಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಬೇರುಗಳನ್ನು ಚಾಚಲು ಸಾಧ್ಯವಾಗಿಲ್ಲ. ಹಿಂದುತ್ವ, ದೇಶಭಕ್ತಿ, ರಾಷ್ಟ್ರೀಯತೆ, ಅಯೋಧ್ಯೆ ವಿವಾದದಂತಹ ವಿಚಾರಗಳಿಗೆ ದಕ್ಷಿಣದ ಮತದಾರರು ಮಣೆ ಹಾಕಿಲ್ಲ. ಯುವಜನರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆದು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದ ಬಿಜೆಪಿಗೆ 'ನೀಟ್' ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ನಂತರ ಬೀದಿಗಿಳಿದಿರುವ ಜೆನ್ ಝೀಗಳು ನುಂಗಲಾರದ ತುತ್ತಾಗಿದ್ದಾರೆ. ಹೀಗಾಗಿ ಇಂಥ ಯುವಜನರನ್ನೇ ಕಾಂಗ್ರೆಸ್ ತರಬೇತಿ ಕೇಂದ್ರದ ಮೂಲಕ ಟಾರ್ಗೆಟ್ ಮಾಡಿದೆ.
ಯುವಜನರಲ್ಲಿ ಸಂವಿಧಾನದ ಆಶಯಗಳು, ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿರುವ ಪ್ರತ್ಯೇಕ ಪಡೆಯನ್ನು ಸಿದ್ದಗೊಳಿಸಲು ದಕ್ಷಿಣ ಭಾರತದಲ್ಲಿ ಮೊದಲ 'ಕಾಂಗ್ರೆಸ್ ತರಬೇತಿ ಕೇಂದ್ರ'ವನ್ನು ಸ್ಥಾಪಿಸಲಾಗುತ್ತಿದೆ. ಬೆಂಗಳೂರಿನ ನೆಲಮಂಗಲ ಸಮೀಪದ ಲಕ್ಕೇನಹಳ್ಳಿ ಬಳಿ 4.02 ಎಕರೆ ಪ್ರದೇಶದಲ್ಲಿ ಈ ಕೇಂದ್ರ ತಲೆ ಎತ್ತಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಹಿಂದುತ್ತದ ಮೂಲಕ ಪಕ್ಷ ಸಂಘಟನೆ ಮಾಡಿರುವ ಬಿಜೆಪಿಗೆ ಪರ್ಯಾಯವಾಗಿ ಸಂವಿಧಾನದ ಆಶಯಗಳ ಪ್ರತಿಪಾದನೆಗೆ ಯುವ ಸಮೂಹವನ್ನು ಸಜ್ಜುಗೊಳಿಸುವುದಕ್ಕಾಗಿ ತರಬೇತಿ ಕೇಂದ್ರ ತೆರೆಯಲಾಗುತ್ತಿದೆ. ಹರೆಯದ ಯುವಕರು ಧರ್ಮ ದ್ವೇಷಿಗಳಾಗದಂತೆ ತಡೆಯುವುದು, ಆರ್‌ಎಸ್ಎಸ್, ಬಿಜೆಪಿಯ ತಂತ್ರಕ್ಕೆ ಒಳಗಾಗದಂತೆ ಎಚ್ಚರ ವಹಿಸಿ ಯುವಕರನ್ನು ಒಟ್ಟುಗೂಡಿಸಲು ಪಕ್ಷ ಮುಂದಾಗಿದೆ. ಜಾತ್ಯತೀತ, ವೈಜ್ಞಾನಿಕ ಮನೋಭಾವ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದ್ದು ಕರ್ನಾಟಕದ ಜನರು ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಂದಲೂ ನೆಲಮಂಗಲ ಕೇಂದ್ರಕ್ಕೆ ಬರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ನೆಲಮಂಗಲದ ಬಳಿ ನಿರ್ಮಾಣವಾಗಲಿರುವ ಕಾಂಗ್ರೆಸ್ ತರಬೇತಿ ಕೇಂದ್ರವು ವರ್ಷದ 365 ದಿನವೂ ಕಾರ್ಯನಿರ್ವಹಿಸಲಿದೆ. ಪ್ರತಿದಿನ 500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲು ಬೃಹತ್ ಸಭಾಂಗಣ, ತರಬೇತಿ ಅವಧಿಯಲ್ಲಿ ಉಳಿದುಕೊಳ್ಳಲು ಯುವಕ- ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಇರಲಿದೆ. ಉಚಿತ ಊಟ -ಉಪಾಹಾರವನ್ನೂ ನೀಡಲಾಗುತ್ತದೆ. ನಿತ್ಯವೂ ಕಾರ್ಯಾಗಾರ, ವಿಚಾರ ಸಂಕಿರಣಗಳು, ಉಪನ್ಯಾಸ, ಸಂವಾದ, ಚರ್ಚೆಗಳು, ವಿಚಾರ ವಿನಿಮಯ ನಡೆಯಲಿದೆ. ಪ್ರತಿಯೊಬ್ಬರಿಗೂ ಕನಿಷ್ಠ 7ರಿಂದ 15 ದಿನಗಳ ತರಬೇತಿ ಇರುತ್ತದೆ. ತರಬೇತಿ ಕೇಂದ್ರವನ್ನು ಕೆಪಿಸಿಸಿ ನಿರ್ವಹಣೆ ಮಾಡಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
06-10-26 06:17 pm
HK News Staffer
AI education, D.K. Shivakumar: ಸರ್ಕಾರಿ ಶಾಲಾ ಮ...
06-10-26 09:32 am
ರಾಜ್ಯಕ್ಕೆ 7,142.64 ಕೋಟಿ ರೂ. ಬರ ಪರಿಹಾರ ನೀಡಿ ;...
03-10-26 05:30 pm
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
06-10-26 02:46 pm
HK News Staffer
Russia, pneumonic plague: ರಷ್ಯಾದಲ್ಲಿ ಹೊಸ ರೀತಿ...
06-10-26 12:58 pm
ಫ್ಲೈದುಬೈ ಹೈಜಾಕ್ ಯತ್ನದ ಹಿಂದೆ ಇರಾನ್ ಕೈವಾಡ ಎಂದ ಟ...
06-10-26 10:11 am
Nigerian aircraft: ನೈಜೀರಿಯಾದಲ್ಲಿ ವಾಯುಪಡೆ ವಿಮಾ...
06-10-26 09:30 am
Emergency Funds: ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡ...
05-10-26 08:56 pm
06-10-26 09:21 pm
HK News Staffer
Sudhir Kumar Murolli: ಎಸ್ಐಆರ್ ಹೆಸರಲ್ಲಿ ನಿರ್ದಿ...
06-10-26 09:15 pm
ಎಸ್ಐಆರ್ ಫಾರಂ 7 ದುರುಪಯೋಗ ; ಅಲ್ಪಸಂಖ್ಯಾತ ಮತದಾರರ...
05-10-26 10:53 pm
Mangalore News, Ekkaru Temple, Tirupati Templ...
05-10-26 12:35 pm
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
06-10-26 05:36 pm
HK News Staffer
DIG Somashekar : ಕೈದಿ ಪತ್ನಿಯನ್ನೇ ಲೈಂಗಿಕ ಶೋಷಣೆ...
06-10-26 03:27 pm
ಹುಲಿವೇಷದ ತರಬೇತಿಗೆ ಬಂದು ಪಣಂಬೂರು ಬೀಚ್ ತೆರಳಿದ್ದ...
06-10-26 01:23 pm
DIG Somashekar: ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಿ...
05-10-26 08:26 pm
ಪುತ್ತೂರಿನಿಂದ ಕೇರಳಕ್ಕೆ ಹಿಂಸಾತ್ಮಕ ರೀತಿಯಲ್ಲಿ 11...
05-10-26 08:24 pm