ಸಹಪಾಠಿಗಳು ನಿಂದಿಸಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು !

23-03-21 02:02 pm       Headline Karnataka News Network   ಕರ್ನಾಟಕ

ಸಹಪಾಠಿಗಳು ನಿಂದಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ‌, ಮಾ.23 : ಸಹಪಾಠಿಗಳು ನಿಂದಿಸಿದ್ದಕ್ಕೆ ನೊಂದ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. 

ಮೃತ ಬಾಲಕನನ್ನು ಹರ್ಷಿತ್ ಗೌಡ(16) ಎಂದು ಗುರುತಿಸಲಾಗಿದೆ. ಹರ್ಷಿತ್‌‌ ಹಾಸನದ ಕೆಂಚಮಾರನಹಳ್ಳಿ ಬಳಿಯ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ. ಒಂದು ವರ್ಷದ ಹಿಂದೆ ಆತನಿಗೆ ಸ್ಟ್ರೋಕ್‌ ಆಗಿದ್ದು, ಆತನ ಸಹಪಾಠಿಗಳು ಇದೇ ಕಾರಣವನ್ನು ಇಟ್ಟುಕೊಂಡು ಶಾಲೆಗೆ ಹೋದಾಗ ಆತನಿಗೆ ರೇಗಿಸುತ್ತಿದ್ದರಂತೆ. ಈ ವಿಚಾರದ ಬಗ್ಗೆ ಮಾರ್ಚ್‌ 19ರಂದು ಶಾಲೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಗಲಾಟೆ ನಡೆದ ಸಂದರ್ಭ ಶಿಕ್ಷಕರು ವಿದ್ಯಾರ್ಥಿಗಳಿಗೆ ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸರಗೊಂಡ ಹರ್ಷಿತ್‌ ಶಾಲೆ ಬಿಟ್ಟು ಹೋಗಿದ್ದು, ಮನೆಯಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಮನೆಯಲ್ಲಿ ದನ ಮೇಯಿಸಲು ಹೋಗಿದ್ದ ವೇಳೆ ಜಮೀನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆಯ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic incident, a 16-year-old boy committed suicide in Hassan because of being teased by his friends.