ಬ್ರೇಕಿಂಗ್ ನ್ಯೂಸ್
26-03-21 12:46 pm Headline Karnataka News Network ಕರ್ನಾಟಕ
ಮಂಗಳೂರು, ಮಾ.26: ದಕ್ಷಿಣ ಕನ್ನಡ - ಕಾಸರಗೋಡು ಗಡಿಭಾಗ ವಿಟ್ಲ ಬಳಿಯ ಸಾಲೆತ್ತೂರಿನಲ್ಲಿ ನಿನ್ನೆ ತಡರಾತ್ರಿ ಪೊಲೀಸರು ಮತ್ತು ರೌಡಿಗಳ ಮಧ್ಯೆ ಜಟಾಪಟಿ ನಡೆದಿದೆ. ಮಂಜೇಶ್ವರ ಪೊಲೀಸರಿಂದ ತಪ್ಪಿಸಿಕೊಂಡು ಹೊರರಾಜ್ಯಕ್ಕೆ ಎಸ್ಕೇಪ್ ಆಗುತ್ತಿದ್ದ ರೌಡಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಮಂಜೇಶ್ವರದ ಮೀಯಪದವಿನಲ್ಲಿ ನಿನ್ನೆ ಒಬ್ಬರಿಗೆ ಗನ್ ತೋರಿಸಿ ಬೆದರಿಸಿದ ಪ್ರಕರಣ ನಡೆದಿತ್ತು. ಈ ಬಗ್ಗೆ ದೂರು ಬಂದಿದ್ದ ಹಿನ್ನೆಲೆಯಲ್ಲಿ ಪೊಲೀಸರು ಮುರತ್ತಣೆ ಮತ್ತು ಮೀಯಪದವಿನ ನಡುವಿನ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳು ಮುರತ್ತಣೆ ಭಾಗದಲ್ಲಿ ರೌಡಿಗಳಾಗಿದ್ದು ಪೊಲೀಸರು ಅವರ ಬಂಧನಕ್ಕೆ ಬಲೆ ಬೀಸಿದ್ದರು. ಆದರೆ, ಆರೋಪಿಗಳು ಮೀಯಪದವಿನತ್ತ ಪರಾರಿಯಾಗಿದ್ದು ಅಲ್ಲಿ ಅಡ್ಡಹಾಕಿದಾಗ ಪೊಲೀಸರ ಮೇಲೆ ಫೈರ್ ಮಾಡಲು ಯತ್ನಿಸಿದ್ದಾರೆ. ಪೊಲೀಸರು ಪ್ರತಿದಾಳಿ ನಡೆಸಿದ್ದು ಕಾರು ಬಿಟ್ಟು ನಾಲ್ವರು ಪರಾರಿಯಾಗಿದ್ದರು. ಬಳಿಕ ಕೆಲವು ಗೂಂಡಾಗಳು ಸೇರಿಕೊಂಡು ಕಾರನ್ನು ಮರಳಿ ವಶಕ್ಕೆ ಪಡೆಯಲು ಯತ್ನಿಸಿದ್ದು ಪೊಲೀಸರು ಅದಕ್ಕೆ ಅವಕಾಶ ಕೊಡಲಿಲ್ಲ. ಕಾರನ್ನು ವಶಕ್ಕೆ ಪಡೆದು ಠಾಣೆಗೆ ಒಯ್ದಿದ್ದರೆ, ಹೆಚ್ಚುವರಿ ಪೊಲೀಸರನ್ನು ಕರೆಸಿ ಕಾರ್ಯಾಚರಣೆಗೆ ಮುಂದಾಗಿದ್ದರು.

ಬಳಿಕ ಕಾಸರಗೋಡು ಜಿಲ್ಲೆಯಿಂದ ಆರೋಪಿಗಳು ಪರಾರಿಯಾಗುತ್ತಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಹಾಕಲು ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರಿಗೆ ಮನವಿ ಮಾಡಿದ್ದರು. ಅದರಂತೆ, ವಿಟ್ಲ ಪೊಲೀಸರು ನಿನ್ನೆ ರಾತ್ರಿ ಸಾಲೆತ್ತೂರು ಬಳಿ ಬ್ಯಾರಿಕೇಡ್ ಇಟ್ಟು ರಸ್ತೆಗೆ ಅಡ್ಡ ಹಾಕಿದ್ದರು.
ಆರೋಪಿಗಳು ಹುಂಡೈ ಕಾರಿನಲ್ಲಿ ಆಗಮಿಸಿದ್ದು ನಿಲ್ಲಿಸಲು ಸೂಚಿಸಿದಾಗ ಲೆಕ್ಕಿಸದೆ ಬ್ಯಾರಿಕೇಡ್ ಗೆ ಡಿಕ್ಕಿಯಾಗಿಸಿದ್ದಾರೆ. ಈ ವೇಳೆ, ಬಂಧಿಸಲು ಯತ್ನಿಸಿದ ಎಸ್ಐ ವಿನೋದ್ ರೆಡ್ಡಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಆರೋಪಿಗಳು ಕಾರನ್ನು ಬ್ಯಾರಿಕೇಡ್ ಗೆ ಡಿಕ್ಕಿಯಾಗಿಸಿದ್ದರಿಂದ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆಂದು ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. ಅಲ್ಲದೆ ಘಟನೆ ವೇಳೆ ಎಸ್ಐ ವಿನೋದ್ ರೆಡ್ಡಿ ಮೇಲೆ ಫೈರ್ ಆಗಿಲ್ಲ ಎಂದು ಖಚಿತ ಪಡಿಸಿದ್ದಾರೆ.
ವಾರದ ಹಿಂದೆ, ಮಂಜೇಶ್ವರ ಠಾಣೆ ಪೊಲೀಸರು ರೌಡಿಸಂ ತೋರಿದ್ದ ನಾಲ್ವರನ್ನು ಬಂಧಿಸಿದ್ದರು. ಗನ್ ಹಿಡಿದು ಸ್ಟೇಟಸ್ ಹಾಕಿದ್ದಕ್ಕಾಗಿ ಬಂಧನ ನಡೆದಿತ್ತು. ಇದರ ಮುಂದುವರಿದ ಭಾಗ ಎನ್ನುವಂತೆ, ಅದೇ ತಂಡದ ಒಬ್ಬಾತ ಸ್ಥಳೀಯ ಒಬ್ಬರಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದ. ಈ ಪ್ರಕರಣಕ್ಕೂ ಚುನಾವಣಾ ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
In a shocking incident miscreants opened fire on Vittal sub-inspector (SI) Vinod Reddy. Four from Manjeshwar, Kasargod arrested regarding the incident.
11-12-25 10:57 pm
Bangalore Correspondent
Kalaburgi Accident, Three Killed: ರಾಜ್ಯದಲ್ಲಿ...
11-12-25 10:47 pm
ಗಾಂಜಾಕ್ಕಾಗಿ ಕಾರವಾರ ಜೈಲಿನಲ್ಲಿ ಕೈದಿಗಳ ಗಲಾಟೆ ; ಜ...
11-12-25 08:03 pm
Padubidri, Accident: ಪಡುಬಿದ್ರಿಯಲ್ಲಿ ಮತ್ತೊಂದು...
11-12-25 03:29 pm
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಪರೀಕ್ಷೆ ಬರೆದ ವಿದ್ಯಾರ...
11-12-25 12:44 pm
11-12-25 04:24 pm
HK News Desk
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
ಭಾರತೀಯರಿಗೆ ಸಂತಸದ ಸುದ್ದಿ ; ಯುನೆಸ್ಕೋ ಪಟ್ಟಿಗೆ ದೀ...
10-12-25 01:17 pm
11-12-25 10:55 pm
Mangalore Correspondent
ದೈವದ ಚಾಕರಿ ಮಾಡುವವರಿಗೆ ಮಾಸಾಶನ, ಸರ್ಕಾರಿ ಸವಲತ್ತು...
11-12-25 04:21 pm
ದ್ವೇಷ ಭಾಷಣ ಪ್ರಕರಣ ; ಕಡೆಗೂ ಆರೆಸ್ಸೆಸ್ ಮುಖಂಡ ಪ್ರ...
10-12-25 11:04 pm
ಮಂಗಳೂರಿನಲ್ಲಿ ಆರು ತಿಂಗಳಿನಿಂದ ಡ್ರಗ್ಸ್ ಬೇಟೆ ; ಕಾ...
10-12-25 10:51 pm
Bharath Kumdel, Instagram, Target Group: ಭರತ್...
10-12-25 08:45 pm
11-12-25 09:53 pm
HK News Desk
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm
ಪುತ್ತೂರಿನಲ್ಲಿ ನಿಲ್ಲಿಸಿದ್ದ ಲಾರಿಯಿಂದ 21 ಲಕ್ಷ ಮೌ...
09-12-25 04:33 pm
ಚಿನ್ನ ಅಡವಿಟ್ಟು ನಕಲಿ ಷೇರು ಮಾರುಕಟ್ಟೆಗೆ 31 ಲಕ್ಷ...
09-12-25 11:58 am