ಡಿಕೆಶಿಯವರೇ ಅಕ್ಕನನ್ನು ಮುಂದಿಟ್ಟು ರಾಜಕಾರಣ ನಡೆಸುತ್ತಿದ್ದಾರೆ ; ಸೋದರ ಆರೋಪ

27-03-21 08:45 pm       Headline Karnataka News Network   ಕರ್ನಾಟಕ

ಸಿಡಿ ಪ್ರಕರಣ ಸಂಬಂಧ ಯುವತಿಯ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇಂದು ಎಸ್ಐಟಿ ತಂಡದ ಅಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗಿದ್ದ ಪೋಷಕರು, ಹೊರಬಂದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಬೆಂಗಳೂರು, ಮಾ.27: ಸಿಡಿ ಪ್ರಕರಣ ಸಂಬಂಧ ಯುವತಿಯ ಪೋಷಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ. ಇಂದು ಎಸ್ಐಟಿ ತಂಡದ ಅಧಿಕಾರಿಗಳ ಮುಂದೆ ತನಿಖೆಗೆ ಹಾಜರಾಗಿದ್ದ ಪೋಷಕರು, ಹೊರಬಂದ ಬಳಿಕ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಡಿಕೆ ಶಿವಕುಮಾರ್ ನನ್ನ ಅಕ್ಕನನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಎಸ್ಸಿ ಹುಡುಗಿಯನ್ನು ಮುಂದಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಅಕ್ಕ ಮತ್ತು ಅವರ ತಂಡವನ್ನು ಗೋವಾದಲ್ಲಿ ಅಡಗಿಕೊಳ್ಳುವಂತೆ ಡಿಕೆಶಿ ಸೂಚಿಸಿದ್ದಾಗಿ ಹೇಳಿದ್ದಾಳೆ. ಅವರೇ ಅಕ್ಕನನ್ನು ಒತ್ತೆಯಾಳಾಗಿರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆಕೆಯ ಸೋದರ ಆರೋಪಿಸಿದ್ದಾನೆ.

ಸೀಡಿ ಕೇಸ್ : ಯುವತಿಗೆ ರಕ್ಷಣೆಗೆ ನಿಂತ ಬಿಜೆಪಿ ನಾಯಕಿ | CD Case Its Our  Responsibility To Give Protection to Lady Says Minister Shashikala Jolle  Supports CD Lady snr

ಯುವತಿಯ ತಂದೆ ಪ್ರಕಾಶ್ ಮಾತನಾಡಿ, ನಮ್ಮ ಕುಟುಂಬಕ್ಕೆ ಹಾಗೂ ನನ್ನ ಮಗಳಿಗೆ ಡಿಕೆಶಿ ಅವರಿಂದ ಬೆದರಿಕೆಯಿದೆ. ನನ್ನ ಮಗಳನ್ನು ಎಲ್ಲಿದ್ದಾಳೆಂದು ಹುಡುಕಿ ತಂದು ಒಪ್ಪಿಸಿ. ಅವಳು ಎಲ್ಲಿದ್ದಾಳೆಂದು ನಮಗೆ ಗೊತ್ತಿಲ್ಲ ಎಂದರು.

ಎಸ್ಐಟಿ ಅಧಿಕಾರಿಗಳು ಆಡುಗೋಡಿ ಬಳಿಯಿರುವ ಟೆಕ್ನಿಕಲ್ ಕಚೇರಿಯಲ್ಲಿ ತಂದೆ, ತಾಯಿ ಮತ್ತು ಸೋದರನನ್ನು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಡಿಸಿಪಿ ಅನುಚೇತ್, ರವಿಕುಮಾರ್, ಶರಣಪ್ಪ ನೇತೃತ್ವದ ತಂಡ ಪೋಷಕರ ಹೇಳಿಕೆಯನ್ನು ದಾಖಲು ಮಾಡಿಕೊಂಡು ಸಂಜೆ 5 ಗಂಟೆಗೆ ಹೊರಗೆ ಕಳಿಸಿತ್ತು.

CD Lady's brother alleges that DK Shivakumar is playing politics with the women.