ಡಿಕೆಶಿಗೆ ಬೆಳಗಾವಿಯಲ್ಲಿ ಯಾರೂ ಚಪ್ಪಲಿ ಎಸೆದಿಲ್ಲ ; ಗೃಹ ಸಚಿವರ ಸ್ಪಷ್ಟನೆ

28-03-21 10:23 pm       Headline Karnataka News Network   ಕರ್ನಾಟಕ

ಡಿ‌.ಕೆ‌.ಶಿವಕುಮಾರ್ ಅವರಿಗೆ ಬೆಳಗಾವಿಯಲ್ಲಿ ಯಾರೂ ಚಪ್ಪಲಿ ಎಸೆದಿಲ್ಲ. ಹಿಂದುಗಡೆಯಲ್ಲಿದ್ದ ಕೊನೆಯ ಭಾಗದ ವಾಹನಕ್ಕೆ ಎಸೆದಿರಬಹುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ‌

ಮಂಗಳೂರು, ಮಾ.28: ಡಿ‌.ಕೆ‌.ಶಿವಕುಮಾರ್ ಅವರಿಗೆ ಬೆಳಗಾವಿಯಲ್ಲಿ ಯಾರೂ ಚಪ್ಪಲಿ ಎಸೆದಿಲ್ಲ. ಹಿಂದುಗಡೆಯಲ್ಲಿದ್ದ ಕೊನೆಯ ಭಾಗದ ವಾಹನಕ್ಕೆ ಎಸೆದಿರಬಹುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ‌

ಮಂಗಳೂರು ವಿಮಾನ ನಿಲ್ದಾಣದಲ್ಲಿ ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಲ್ಲಿಯ ಕಮಿಷನರ್ ಗೆ ಈಗಾಗ್ಲೇ ಸೂಚನೆ ಕೊಟ್ಟಿದ್ದೇನೆ‌. ಬೆಳಗಾವಿಯಲ್ಲಿ ಯಾವುದೇ ಸಣ್ಣ ಘಟನೆ ಕೂಡ ಆಗಬಾರದು‌.‌ ಬೆಳಗಾವಿಗೆ ಯಾರೆಲ್ಲಾ ಬರ್ತಾರೆ, ಅವರಿಗೆಲ್ಲಾ ಭದ್ರತೆ ನೀಡಬೇಕು. ಯಾರು ಕಾನೂನು ಕೈಗೆತ್ತಿಕೊಳ್ತಾರೆ, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

karnatak, congress, bjp

ಕಾಂಗ್ರೆಸ್ ನವರು ಆರೋಪ ಮಾಡುತ್ತಿರುವ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಕಾಂಗ್ರೆಸ್ ನವರು ಏನು ಹೇಳ್ತಾರೆ. ಇನ್ನೊಬ್ಬರು ಏನ್ ಹೇಳ್ತಾರೆ. ಅದು ಇಂಪಾರ್ಟಂಟ್ ಅಲ್ಲ.‌ ಕಾನೂನು ಬದ್ದವಾಗಿ ನಾವು ತನಿಖೆ ಮಾಡುತ್ತೇವೆ.
ಯಾರೂ ಏನು ಹೇಳಿಕೆ ಕೊಟ್ರು ಅದು ನಮಗೆ ಸಂಬಧಪಟ್ಟಿದ್ದಲ್ಲ.‌ ಕಾಂಗ್ರೆಸ್ ನವರು ಈ ಹಿಂದೆ ಮೇಟಿ ಪ್ರಕರಣದಲ್ಲಿ ಹೇಗೆ ನಡ್ಕೊಂಡ್ರು ಎನ್ನೋದು ಚೆನ್ನಾಗಿ ಗೊತ್ತು. 

CD gate: Woman's parents slam Congress's DK Shivakumar, say he used her for  'dirty politics'- The New Indian Express

ಪ್ರಕರಣದಲ್ಲಿ ಕೇಸ್ ಕೂಡ ಬುಕ್ ಮಾಡಲಿಲ್ಲ. ಹೀಗಾಗಿ ಕಾಂಗ್ರೆಸ್ ನವರ ಹೇಳಿಕೆಗೆ ನಾನು ಮಹತ್ವ ಕೊಡೋದಿಲ್ಲ. ಎಸ್ಐಟಿ ಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ‌, ಕಾನೂನುಬದ್ದವಾಗಿ ಕೆಲಸ ಮಾಡುತ್ತಾರೆ‌. ಯಾರ ಪ್ರಭಾವಕ್ಕೆ ಮಣಿದು ಕೆಲಸ ಮಾಡೋದಿಲ್ಲ. ಹಲವಾರು ಸಿಡಿ, ವೀಡಿಯೋ, ಆಡಿಯೋ ಬಂದಿದೆ. ಅದೆಲ್ಲವನ್ನು ವೈಜ್ಞಾನಿಕ ತನಿಖೆಗೆ ಒಳಪಡಿಸಿದ್ದೇವೆ. ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ನಾನು ಏನೂ ಹೇಳಲು ಇಚ್ಚೆಪಡಲ್ಲ.‌ ಆದ್ರೆ ಒಟ್ಟಾರೆ ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗಲ್ಲ ಅನ್ನೋದು ಸ್ಪಷ್ಟ ಪಡಿಸುತ್ತೇನೆ ಎಂದು ಹೇಳಿದರು.

Karnataka home minister Basavaraj Bommai said that chappals were not hurled at the car of KPCC president DK Shivakumar in Belagavi.