ಮಾಜಿ ಪ್ರಧಾನಿ ದೇವೇಗೌಡ ದಂಪತಿಗೆ ಕೊರೊನಾ ಸೋಂಕು

31-03-21 03:35 pm       Headline Karnataka News Network   ಕರ್ನಾಟಕ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗಲಿದೆ.

ಬೆಂಗಳೂರು, ಮಾ.31: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮತ್ತು ಅವರ ಪತ್ನಿಗೆ ಕೊರೊನಾ ಸೋಂಕು ತಗಲಿದೆ. ಈ ಬಗ್ಗೆ ದೇವೇಗೌಡರೇ ಸ್ವತಃ ತಮ್ಮ ಟ್ವಿಟರ್ ಖಾತೆಯಲ್ಲಿ ದೃಢಪಡಿಸಿದ್ದಾರೆ.

ದೇವೇಗೌಡರಿಗೆ ಕೆಲವು ದಿನಗಳಿಂದ ಶೀತದ ಲಕ್ಷಣಗಳಿದ್ದವು. ಹೀಗಾಗಿ ಗೌಡರು ಮತ್ತು ಅವರ ಪತ್ನಿ ಚೆನ್ನಮ್ಮ ಅವರ ಗಂಟಲಿನ ದ್ರವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬುಧವಾರ ಬೆಳಗ್ಗೆ ಪರೀಕ್ಷಾ ವರದಿ ಬಂದಿದ್ದು, ಇಬ್ಬರದ್ದೂ ಪಾಸಿಟಿವ್ ಕಂಡುಬಂದಿದೆ.

ದೇವೇಗೌಡರು ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಚೆನ್ನಮ್ಮ ಅವರಿಗೆ ಯಾವುದೇ ಲಕ್ಷಣಗಳು ಇಲ್ಲದ ಕಾರಣ ಅವರನ್ನು ಮನೆಯಲ್ಲೇ ಕ್ವಾರಂಟೈನ್ ಇರಿಸಿ, ವೈದ್ಯಕೀಯ ನಿಗಾ ವಹಿಸಲಾಗುವುದು ಎಂದು ದೇವೇಗೌಡರ ಕುಟುಂಬದ ಮೂಲಗಳು ತಿಳಿಸಿವೆ.

ಟ್ವಿಟರ್ ನಲ್ಲಿ ಈ ಬಗ್ಗೆ ಹೇಳಿಕೊಂಡಿರುವ ಗೌಡರು, ಕಾರ್ಯಕರ್ತರು ಆತಂಕಕ್ಕೆ ಒಳಗಾಗಬೇಕಿಲ್ಲ. ಕೆಲವು ದಿನಗಳಲ್ಲಿ ನನ್ನ ಜೊತೆಗೆ ಸಂಪರ್ಕದಲ್ಲಿದ್ದವರು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. 

Former Prime Minister and JD(S) leader HD Devegowda and his wife Chennamma have tested positive for Covid-19 on Wednesday. Devegowda took to Twitter to inform about his health.