‘‘ಗುತ್ತಿಗಾರಿನ ಮನೆಕೆಲಸ ಹೆಸರಲ್ಲಿ ತೇಜೋವಧೆ ಬೇಡ, ನನ್ನದೇನು ತಪ್ಪಿಲ್ಲ..’’

04-04-21 04:55 pm       Headline Karnataka News Network   ಕರ್ನಾಟಕ

ಗುತ್ತಿಗಾರಿನ ನಾಲ್ಕೂರು ಗ್ರಾಮದ ಸಾಲ್ತಡಿ ಎಂಬಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಗೆ ಮನೆ ಕಟ್ಟಿಕೊಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಗುತ್ತಿಗಾರು ಗ್ರಾಪಂ ಮಾಜಿ ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು ಸ್ಪಷ್ಟನೆ ಕೊಟ್ಟಿದ್ದಾರೆ.

ಸುಳ್ಯ, ಎ.4: ಗುತ್ತಿಗಾರಿನ ನಾಲ್ಕೂರು ಗ್ರಾಮದ ಸಾಲ್ತಡಿ ಎಂಬಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಲ್ಲಿ ಪರಿಶಿಷ್ಟ ಸಮುದಾಯದ ಮಹಿಳೆಗೆ ಮನೆ ಕಟ್ಟಿಕೊಡುವ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಬಗ್ಗೆ ಗುತ್ತಿಗಾರು ಗ್ರಾಪಂ ಮಾಜಿ ಅಧ್ಯಕ್ಷ ಅಚ್ಚುತ್ತ ಗುತ್ತಿಗಾರು ಸ್ಪಷ್ಟನೆ ಕೊಟ್ಟಿದ್ದಾರೆ.

ನನ್ನ ಬಗ್ಗೆ ಆಗದವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ಮನೆಯ ಕೆಲಸಕ್ಕಾಗಿ ಮೂರು ಲಕ್ಷ ಅಷ್ಟೇ ಹಣ ಬಿಡುಗಡೆಯಾಗಿತ್ತು. ಅದಕ್ಕೆ ಪಂಚಾಯತಿ ಕಚೇರಿಯಲ್ಲಿ ದಾಖಲೆಯೂ ಇದೆ. ಮೂರು ಲಕ್ಷ ರೂ. ಹಣದಲ್ಲಿ ಲಿಂಟಲ್ ವರೆಗೆ ಮನೆಯ ಕಾಮಗಾರಿ ನಡೆಸಲಾಗಿತ್ತು. ಇನ್ನು ಸುದ್ದಿಯಲ್ಲಿ ಬಿಂಬಿಸಿದಂತೆ, ನಾನು ಮನೆಯನ್ನು ಕಂಟ್ರಾಕ್ಟ್ ಪಡೆದು ನಿರ್ಮಿಸುತ್ತಿಲ್ಲ. ರಾಕೇಶ್ ಮೆಟ್ಟಿನಡ್ಕ ಎಂಬವರು ಕಂಟ್ರಾಕ್ಟ್ ಪಡೆದು ಕೆಲಸ ಮಾಡುತ್ತಿದ್ದಾರೆ. ಬಡ ಮಹಿಳೆಗೆ ಸಹಾಯ ಆಗಲೆಂದು ಹಿಂದಿನ ತಹಸೀಲ್ದಾರ್ ಕುಂಞ ಅಹ್ಮದ್ ಬಳಿ ಮಾತನಾಡಿ, ಅರ್ಜಿ ಹಾಕಿದ್ದೆವು.

ಜಿಪಿಎಸ್ ಸಿಸ್ಟಮ್ ಟ್ಯಾಲಿ ಆಗದ ಕಾರಣ ಮುಂದಿನ ಕಂತು ಹಣ ಬಂದಿಲ್ಲ. ಪಂಚಾಯತ್ ಅಧಿಕಾರಿಗಳು ಬಂದು ಜಿಪಿಎಸ್ ಮಾಡಿದ್ದಾರೆ. ಏನೋ ಪೆಂಡಿಂಗ್ ಆಗಿದೆ, ಆದರೂ ಹಣ ಬರುತ್ತದೆ. ಈಗ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದು ಕೆಲಸ ಆರಂಭಿಸಿದ್ದಾರೆ. ಮನೆಗೆ ಎರಡು ಲೋಟ್ ಕೆಂಪು ಕಲ್ಲು ಬಂದಿದೆ. ಲಿಂಟಲ್ ಮೇಲೆ ಎರಡು ಸಾಲು ಕಲ್ಲು ಕಟ್ಟಲಿದ್ದು, ಆನಂತರ ಸ್ಲಾಬ್ ಹಾಕಬೇಕು. ಮೂರು ಲಕ್ಷದಲ್ಲಿ ಸ್ಲಾಬ್ ವರೆಗೆ ಕೆಲಸ ಆಗಬೇಕಿತ್ತು. ಏನಿದ್ದರೂ, ಈಗಿನ ಮಳೆಗಾಲದ ಒಳಗೆ ಸ್ಲಾಬ್ ಕೆಲಸ ಮುಗಿಸುತ್ತೇವೆ. ನನ್ನ ಬಗ್ಗೆ ತೇಜೋವಧೆ ಮಾಡುವ ಸಲುವಾಗಿ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಪಂಚಾಯತ್ ಚುನಾವಣೆಯಲ್ಲಿನ ದ್ವೇಷದಲ್ಲಿ ವಿಶ್ವನಾಥ್ ಎಂಬವರು ಈ ರೀತಿ ಮಾಡುತ್ತಿದ್ದಾರೆ ಎಂದು ಅಚ್ಚುತ್ತ ಗುತ್ತಿಗಾರು ಹೆಡ್ ಲೈನ್ ಕರ್ನಾಟಕಕ್ಕೆ ಕರೆ ಮಾಡಿ ತಿಳಿಸಿದ್ದಾರೆ.

ಸಬೂಬು ಯಾಕೆ, ಕೆಲಸ ಮಾಡಿಸಿ..

ಅಚ್ಚುತ್ತ ಗುತ್ತಿಗಾರು ಪಂಚಾಯತ್ ಮಾಜಿ ಅಧ್ಯಕ್ಷರಾಗಿ ಜಿಪಿಎಸ್ ಸಿಸ್ಟಮ್, ಮತ್ತೊಂದು ಎಂದು ಸಬೂಬು ಹೇಳಬಾರದು. ಎರಡು ವರ್ಷಗಳಿಂದ ಬಡಪಾಯಿ ಮಹಿಳೆ ಮನೆಗಾಗಿ ಗೋಳಿಡುತ್ತಿದ್ದಾರೆ. ಈಗ ವಿಚಾರ ಜಾಲತಾಣದಲ್ಲಿ ಸುದ್ದಿಯಾದ ಬಳಿಕ ಎಚ್ಚತ್ತುಕೊಂಡು ಕಲ್ಲು ತಂದು ಸುರಿಯುವ ಕೆಲಸ ಮಾಡಿದ್ದಾರೆ. ಅಲ್ಲಿನ ಮನೆಯ ಹೊರಭಾಗ ನೋಡಿದರೆ, ಭಾರೀ ದೊಡ್ಡ ಮನೆಯನ್ನೇ ಕಟ್ಟಲು ಹೊರಟಂತಿದೆ. 5 ಲಕ್ಷ ಪಾಸ್ ಆಗುವುದಿದ್ದರೆ, ಸಾಧಾರಣ ಮಟ್ಟಿನಲ್ಲಿ ಮನೆ ಮಾಡಿ ಮುಗಿಸಬಹುದಿತ್ತು. ಅದಕ್ಕೆಂದು ದೊಡ್ಡ ಸ್ಕೆಚ್ ಹಾಕಿ, ಅತ್ತ ಮನೆಯೂ ಇಲ್ಲ. ಕೆಲಸವೂ ಇಲ್ಲ ಎನ್ನುವಂತಾಗಿ ಓದು ಬರಹ ಇಲ್ಲದ ಬಡಪಾಯಿ ಮಹಿಳೆ ಆಕಾಶ ನೋಡುತ್ತಾ ಟರ್ಪಾಲಿನ ಗುಡಿಸಲಲ್ಲಿ ಕಳೆಯುವ ಸ್ಥಿತಿ ತರುವುದಲ್ಲ.

ಪರಿಹಾರದ ಹಣವನ್ನೇ ತಿಂದು ಹಾಕಿದ್ರಾ ಗುತ್ತಿಗಾರಿನ ಜನಪ್ರತಿನಿಧಿಗಳು ? ಎಸ್ಸಿ ಮಹಿಳೆಗೆ  ಮನೆ ಕಟ್ಟಿಕೊಡುವುದೇ ಬಿಜೆಪಿ ಆಡಳಿತ !

Headline Karnataka had reported on Sullia Guthigar Panchyath President of misue of construction funds. The president Speaks that he wasn't involved in any activities as such.