ಚುಚ್ಚುಮದ್ದಿನ ಅಡ್ಡ ಪರಿಣಾಮ ಶಂಕೆ ; ನಾಲ್ಕು ತಿಂಗಳ ಮಗು ಮೃತ್ಯು !

08-04-21 08:46 pm       Headline Karnataka News Network   ಕರ್ನಾಟಕ

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದ್ದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದ್ದು ಈ ಬಗ್ಗೆ ಮಗುವಿನ ತಂದೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾರ್ಕಳ, ಎ. 8 : ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಿದ್ದ ಚುಚ್ಚು ಮದ್ದಿನ ಅಡ್ಡ ಪರಿಣಾಮದಿಂದ ನಾಲ್ಕೂವರೆ ತಿಂಗಳ ಮಗು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದ್ದು ಈ ಬಗ್ಗೆ ಮಗುವಿನ ತಂದೆ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ತಿಂಗಳ ಚುಚ್ಚು ಮದ್ದು ನೀಡಲಾಗಿತ್ತು. ನಂತರ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮಧ್ಯಾಹ್ನ 3 ಗಂಟೆಯ ವೇಳೆ ಮಗುವಿನ ಬಾಯಿಯಲ್ಲಿ ನೊರೆ ಬಂದ್ದು ಅಸ್ವಸ್ಥಗೊಂಡಿತ್ತು ಎನ್ನಲಾಗಿದೆ. ಮನೆಯವರು ಕೂಡಲೇ ಮಗುವನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

Telangana: Woman, 2-month-old girl fall in open pit, saved by passers-by |  Hyderabad News - Times of India

ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ನೀಡಿದ್ದ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದಲೇ ಮಗು ಮೃತಪಟ್ಟಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಮಗುವಿನ ತಂದೆ ಸುಧಾಕರ ಆರ್. ಶೆಟ್ಟಿ ದೂರು ನೀಡಿದ್ದಾರೆ.

In a tragic incident, a four-month-old child died hours after it was administered a regular vaccine. The father of the child Sudhakar R Shetty has filed complaint in this regard at Karkala town police station.