ಬ್ರೇಕಿಂಗ್ ನ್ಯೂಸ್
10-04-21 02:47 pm Headline Karnataka News Network ಕರ್ನಾಟಕ
ಮಂಗಳೂರು, ಎ.9: ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನ ಜೊತೆ ಎರಡು ದಿನಗಳಿಂದ ಸಂಪರ್ಕದಲ್ಲಿದ್ದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಲಹೆಯನ್ನೂ ಮಾಡಿದ್ದಾರೆ.
#COVID19 Positive ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು Covid-19 ಟೆಸ್ಟ್ ಮಾಡಿಸಿಕೊಳ್ಳಿ.@BJP4Karnataka @BjpMangaluru @BJP4Udupi
— Kota Shrinivas Poojari (@KotasBJP) April 10, 2021
ಕಳೆದ ಮಾ.29ರಂದು ಕೋಟ ಶ್ರೀನಿವಾಸ ಪೂಜಾರಿಯವರು ಉಡುಪಿಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಆದರೂ ಸಚಿವರಿಗೆ ಒಂದೇ ವಾರದಲ್ಲಿ ಕೊರೊನಾ ಸೋಂಕು ತಗುಲಿದ್ದು, ಚರ್ಚೆಗೆ ಕಾರಣವಾಗಿದೆ. ವಿಶೇಷ ಅಂದ್ರೆ, ಕೋಟ ಶ್ರೀನಿವಾಸ ಪೂಜಾರಿಯವರು ಜಿಲ್ಲಾ ಉಸ್ತುವಾರಿ ಸಚಿವರ ನೆಲೆಯಲ್ಲಿ ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಎಲ್ಲ ಸಚಿವರ ಜೊತೆಗೂ ಕಾಣಿಸಿಕೊಂಡಿದ್ದರು.
ಎಪ್ರಿಲ್ 8 ಮತ್ತು 9ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ತರವಾಡು ಮನೆಯ ಸವಣೂರು ಸಮೀಪದ ಕುಂಜಾಡಿಯಲ್ಲಿ ನಡೆದಿದ್ದ ಧರ್ಮನೇಮಕ್ಕೆಂದು ಹಲವು ಗಣ್ಯರು ಭಾಗವಹಿಸಿದ್ದರು. ಸಚಿವರಾದ ಈಶ್ವರಪ್ಪ, ಮುರುಗೇಶ್ ನಿರಾಣಿ, ಪ್ರಭು ಚೌಹಾಣ್, ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಶಾಸಕರು, ಬಿಜೆಪಿ ನಾಯಕರು ಪಾಲ್ಗೊಂಡಿದ್ದು ಎಲ್ಲರ ಜೊತೆಗೂ ಕೋಟ ಶ್ರೀನಿವಾಸ ಪೂಜಾರಿಯವರು ಕಾಣಿಸಿಕೊಂಡಿದ್ದರು. ಹಿಂದಿನ ನಿಯಮಗಳ ಪ್ರಕಾರ, ಪ್ರಾಥಮಿಕ ಸಂಪರ್ಕಿತರನ್ನೆಲ್ಲ ಜಿಲ್ಲಾಧಿಕಾರಿಗಳು ಕ್ವಾರಂಟೈನ್ ಮಾಡಬೇಕಿದೆ.
ಎ.8ರಂದು ಸಂಜೆ ಮಂಗಳೂರಿನಲ್ಲಿ ಈಶ್ವರಪ್ಪ ಸುದ್ದಿಗೋಷ್ಠಿ ಕರೆದಿದ್ದ ವೇಳೆಯಲ್ಲೂ ಸಚಿವ ಕೋಟ ಮತ್ತು ಇತರೇ ಮುಖಂಡರು ಜೊತೆ ಜೊತೆಯಾಗಿ ಕುಳಿತು ಮಾಧ್ಯಮಕ್ಕೆ ಮಾಹಿತಿ ನೀಡಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಸೂಚನೆ ಹೊರತಾಗಿಯೂ ಧರ್ಮನೇಮಕ್ಕೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಮತ್ತು ರಾಜ್ಯ ಸರಕಾರದ ಕೋವಿಡ್ ನಿಯಮಗಳನ್ನು ಧರ್ಮನೇಮದ ನೆಪದಲ್ಲಿ ಉಲ್ಲಂಘಿಸಲಾಗಿತ್ತು.
ಧರ್ಮನೇಮಕ್ಕೆ ತೆರಳಿದ್ದ ಗಣ್ಯರು, ಸಾರ್ವಜನಿಕರಲ್ಲಿ ಹೆಚ್ಚಿನವರು ಕೋವಿಡ್ ನಿಮಯಗಳನ್ನು ಪಾಲಿಸಿರಲಿಲ್ಲ. ಮುಖಕ್ಕೆ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗಣ್ಯರು ಜೊತೆ ಜೊತೆಯಾಗಿ ಕುಳಿತುಕೊಂಡಿದ್ದು ಹಾರ ಹಾಕಿಸಿಕೊಂಡಿದ್ದ ಫೋಟೋಗಳು ಪತ್ರಿಕೆಗಳಲ್ಲೂ ಬಂದಿದ್ದವು. ಜಾಲತಾಣದಲ್ಲಿಯೂ ಪ್ರಕಟವಾಗಿತ್ತು. ಇದೀಗ ಧರ್ಮನೇಮದ ಮರುದಿನವೇ ಇಡೀ ಜಿಲ್ಲೆಯ ಉಸ್ತುವಾರಿ ಹೊಂದಿರುವ ಸಚಿವರಿಗೇ ಕೋವಿಡ್ ಸೋಂಕು ಕಂಡುಬಂದಿದೆ. ತನ್ನ ಜೊತೆಗಿದ್ದವರೆಲ್ಲ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಚಿವರು ಸಲಹೆ ಮಾಡಿದ್ದಾರೆ. ಇದರರ್ಥ ಧರ್ಮನೇಮಕ್ಕೆ ತನ್ನ ಜೊತೆಗೆ ಬಂದವರೆಲ್ಲ ಟೆಸ್ಟ್ ಮಾಡಿಸಿಕೊಳ್ಳಿ ಅಂತಲೇ ಅಲ್ಲವೇ ಉಸ್ತುವಾರಿಗಳೇ ?
ಹಾಗಾದರೆ, ಕೋವಿಡ್ ನಿಯಮಗಳು ಜನಸಾಮಾನ್ಯರಿಗೆ ಮಾತ್ರ ಅನ್ವಯವೇ.. ಸಾಮಾನ್ಯ ಜನರ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಮಾತ್ರ ಕೋವಿಡ್ ನಿಯಮಗಳನ್ನು ಹೇರಲಾಗ್ತಿದ್ಯಾ ಅನ್ನುವ ಸಾರ್ವಜನಿಕರ ಪ್ರಶ್ನೆಗಳಿಗೆ ಈಗ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರು, ಸಚಿವರು ಉತ್ತರ ಕೊಡಬೇಕಾಗಿದೆ. ಯಾಕಂದ್ರೆ, ವಾರದ ಹಿಂದೆಯಷ್ಟೇ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಕೋವಿಡ್ ಮಾರ್ಗಸೂಚಿ ಹೊರಡಿಸಿ, ಹೊರಾವರಣದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳಿಗೆ 500ರಿಂದ ಹೆಚ್ಚು ಜನ ಪಾಲ್ಗೊಳ್ಳುವಂತಿಲ್ಲ. ಒಳಾಂಗಣದ ಸಭೆ, ಸಮಾರಂಭಗಳಿಗೆ 200 ಜನ ಮಾತ್ರ ಪಾಲ್ಗೊಳ್ಳಬಹುದು ಎಂದು ಆದೇಶ ಹೊರಡಿಸಿದ್ದರು.
Minister of Muzrai from Revenue Department of Karnataka Kota Srinivas Poojary Tested Positive for Covid-19 in Mangalore.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm