ಉಡುಪಿ ಜಿಲ್ಲಾಧಿಕಾರಿಗೂ ನಕಲಿ ಫೇಸ್ಬುಕ್ ಅಕೌಂಟ್ ಕಾಟ; ಹಣಕ್ಕಾಗಿ ಡಿಮ್ಯಾಂಡ್

11-04-21 07:24 pm       Headline Karnataka News Network   ಕರ್ನಾಟಕ

ಜಿಲ್ಲಾಧಿಕಾರಿ ಜಿ.ಜಗದೀಶ್ ಮಲಾಲಗದ್ದೆ ಹೆಸರಲ್ಲಿ ನಕಲಿ ಫೇಸ್ ಬುಕ್​ ಅಕೌಂಟ್ ಮಾಡಿ ಹಣ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.

ಉಡುಪಿ, ಎ 11: ಜಿಲ್ಲಾಧಿಕಾರಿ ಜಿ.ಜಗದೀಶ್ ಮಲಾಲಗದ್ದೆ ಹೆಸರಲ್ಲಿ ನಕಲಿ ಫೇಸ್ ಬುಕ್​ ಅಕೌಂಟ್ ಮಾಡಿ ಹಣ ಬೇಡಿಕೆ ಇಟ್ಟಿರುವ ಆರೋಪ ಕೇಳಿ ಬಂದಿದೆ.

ಜಿಲ್ಲಾಧಿಕಾರಿ ಅವರದೇ ನಕಲಿ ಅಕೌಂಟ್​ ಮಾಡಿ ಫೋನ್​ ಪೇ ಮೂಲಕ ಹಣ ಪಾವತಿಸಿ ಎಂಬ ಬೇಡಿಕೆ ಇಟ್ಟಿರುವ ಮಾಹಿತಿ ತಿಳಿದುಬಂದಿದೆ.

ಆರೋಪಿಗಳು ಸಂಬಂಧಿಕರ ಅಕೌಂಟಿಗೆ ಹಣ ವರ್ಗಾಯಿಸುವಂತೆ ಮೆಸೇಜ್ ಮಾಡಿದ್ದಾರೆ. ಅಧಿಕಾರಿಗಳನ್ನೇ ಟಾರ್ಗೆಟ್​ ಮಾಡಿ ಹಣ ವಸೂಲಿ ಮಾಡಲು ಮುಂದಾಗಿದ್ದಾರೆ. ಇತ್ತೀಚೆಗೆ ಕೆಲ ಪೊಲೀಸ್ ಅಧಿಕಾರಿಗಳ ಹೆಸರಿನಲ್ಲೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ದೂರು ನೀಡಿದ್ದೇನೆ ಯಾರೂ ಹಣ ಕೊಡಬೇಡಿ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಫೇಸ್ ಬುಕ್ ಮೂಲಕ ವಿನಂತಿಸಿಕೊಂಡಿದ್ದಾರೆ.

ಈ ಮೊದಲು ಸಚಿವ ಸುರೇಶ್​ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆದಿದ್ದರು:

ಸಾರ್ವಜನಿಕರ ಹೆಸರಲ್ಲಿ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದಿರುವುದು ಕೇಳಿದ್ದೇವೆ. ಅದಾದಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳಿಗೇ ಚಳ್ಳೆಹಣ್ಣು ತಿನ್ನಿಸುವಂತೆ ಕೆಲ ಅಧಿಕಾರಿಗಳ ಹೆಸರಿನಲ್ಲಿಯೂ ಫೇಸ್​ಬುಕ್​​ ನಕಲಿ ಖಾತೆಗಳನ್ನು ತೆರೆದು ಒಂದಷ್ಟು ದುಡ್ಡು ಮಾಡಿಕೊಂಡಿದ್ದಾರೆ ಖದೀಮರು! ಸಚಿವರ ಹೆಸರಲ್ಲೂ ಫೇಸ್​ಬುಕ್​​ ನಕಲಿ ಖಾತೆಗಳು ತೆರೆಯುವ ಆಟ ಶುರುವಾಗಿತ್ತು. ಯಾವುದೇ ಆತಂಕ, ಭಯವಿಲ್ಲದೇ ಈ ರೀತಿಯ ಕೆಲಸಗಳು ನಡೆಯುತ್ತಿದ್ದು,  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆಯನ್ನು ತೆರೆದಿದ್ದರು. ನಕಲಿ ಖಾತೆಗಳನ್ನು ತೆರೆದು ಸಾಮಾನ್ಯವಾಗಿ ವಂಚಕರು ದುಡ್ಡನ್ನು ಬೇಡಿಕೆ ಇಡುತ್ತಾರೆ. ಅದರಂತೆ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಖಾತೆ ತೆರೆದ ಖಾತೆದಾರರು ಇದೇ ರೀತಿಯ ಬೇಡಿಕೆಯನ್ನು ಇಟ್ಟಿರುವುದು ಈ ಹಿಂದೆ ತಿಳಿದುಬಂದಿತ್ತು.

A fake Facebook account has been created in the name of Udipi DC Jagadish demanding money through phonepay by using messenger.