ನೋ ಲಾಕ್​ಡೌನ್.. ನೋ ಲಾಕ್​ಡೌನ್ ; ಆರ್​. ಅಶೋಕ್ ಸ್ಪಷ್ಟನೆ

18-04-21 04:23 pm       Headline Karnataka News Network   ಕರ್ನಾಟಕ

ನಗರದಲ್ಲಿ ಟಫ್‌ ರೂಲ್ಸ್ ಜಾರಿ ಮಾಡಲೇಬೇಕು. ಆದ್ರೆ  ಲಾಕ್​ಡೌನ್ ಮಾಡೋದಿಲ್ಲ ಅಂತ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, ಎ 18: ನಗರದಲ್ಲಿ ಟಫ್‌ ರೂಲ್ಸ್ ಜಾರಿ ಮಾಡಲೇಬೇಕು. ಆದ್ರೆ  ಲಾಕ್​ಡೌನ್ ಮಾಡೋದಿಲ್ಲ ಅಂತ ಕಂದಾಯ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಕೊರೊನಾ ಸೋಂಕು ಹೆಚ್ಚಳವಾಗ್ತಿರೋ ಹಿನ್ನೆಲೆ ಇಂದು ಅಶೋಕ್, ಬಿಬಿಎಂಪಿ ವ್ಯಾಪ್ತಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಬೆಂಗಳೂರಿನ ಕುಮಾರಕೃಪಾದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತ‌, ಆರೋಗ್ಯ ಇಲಾಖೆ ಪ್ರಧಾನ‌ ಕಾರ್ಯದರ್ಶಿ ಜಾವೇದ್ ಆಕ್ತರ್ ಭಾಗಿಯಾಗಿದ್ರು.

Coronavirus India Live Updates: 2,61,500 Fresh Coronavirus Cases In India  In Biggest-Ever One-Day Spike

ಕೊರೊನಾ ನಿಯಂತ್ರಣದ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ  ಮಾತನಾಡಿದ ಅಶೋಕ್, There is no lockdown, no lockdown, no lockdown ಎಂದು ಪುನರುಚ್ಛರಿಸಿದ್ರು. ದಿನನಿತ್ಯದ ಜೀವನಕ್ಕೆ ಯಾವುದೇ ತೊಂದರೆಯಾಗದೇ ವ್ಯವಸ್ಥೆಯನ್ನ ನಾವು ನಿರ್ಮಾಣ ಮಾಡಬೇಕು. ಕೆಲವೊಂದು ಕ್ಷೇತ್ರದಲ್ಲಿ ಎಸಿಗಳಲ್ಲೇ ಕಾರ್ಯನಿರ್ವಹಿಸುವವರಿಗೆ ಕಠಿಣ ಕ್ರಮ ಆಗಬೇಕಿದೆ ಎಂದರು. ಅಕ್ಕಪಕ್ಕದ ರಾಜ್ಯಗಳನ್ನು ನೋಡಿ.. ಮಹಾರಾಷ್ಟ್ರ, ದೆಹಲಿ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದೆ. ಅದನ್ನು ಗಮನಿಸಿ ನಾವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಹೇಳಿದ್ರು.

Coronavirus India Updates: Record Spike In Infections Take Active Cases  Above 13.5 Lakh

ನಾಳೆ ಬೆಂಗಳೂರಿನ ಮಟ್ಟಿಗೆ ಸರ್ವಪಕ್ಷ ಮುಖಂಡರ ಸಭೆ ಕರೆಯಲಾಗಿದೆ. ಹೀಗಾಗಿ ನಾಳೆ ಬೆಂಗಳೂರಿನ ಪಾಲಿಗೆ ಮಹತ್ವದ ದಿನ ನಿಜ. ಕೊರೊನಾ ಸೋಂಕು ತಡೆಗಟ್ಟಲು ಟಫ್ ‌ರೂಲ್ಸ್ ಜಾರಿ ಮಾಡುವ ಉದ್ದೇಶದಿಂದಲೇ ಸಭೆ ಕರೆಯಲಾಗಿದೆ. ಇದನ್ನು ಬಿಟ್ಟು ಲಾಕ್‌ಡೌನ್ ಮಾಡುವ ಉದ್ದೇಶ ಸರ್ಕಾರಕ್ಕಿಲ್ಲ. ಲಾಕ್‌ಡೌನ್ ಮಾಡುವುದಿಲ್ಲ. ಲಾಕ್‌ಡೌನ್ ಮಾಡಿ, ಜನಸಾಮಾನ್ಯರಿಗೆ ಸಂಕಷ್ಟಕ್ಕೆ ದೂಡುವುದಿಲ್ಲ. ಕಳೆದ ಲಾಕ್‌ಡೌನ್ ಮಾಡಿದಾಗ ಏನೆಲ್ಲಾ ಘಟನೆಗಳು ಸಂಭವಿಸಿದೆ ಎಂಬುದು ತಿಳಿದಿದೆ. ಯಾವುದೇ ಕಾರಣಕ್ಕೂ ಲಾಕ್‌ಡೌನ್ ಮಾತ್ರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ರು.

India's double whammy, Covid-19 cases up but vaccines run out in several  states | Deccan Herald

ನಾಳೆ ವಿಪತ್ತು ನಿರ್ವಹಣಾ ತಂಡದಿಂದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿಗಳು ವಿಪತ್ತು ನಿರ್ವಹಣಾ ದಳದ ಅಧ್ಯಕ್ಷರಾಗಿರುತ್ತಾರೆ, ಕಂದಾಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಸಿಎಂ ಅನುಪಸ್ಥಿತಿಯಲ್ಲಿ ನಾಳೆ ನಾನು ಸಭೆ ನಡೆಸಲಿದ್ದೇನೆ. ಬೆಂಗಳೂರಿನ ಮಟ್ಟಿಗೆ ನಾಳೆ ಮಹತ್ವದ ದಿನ.ನಾಳೆ ಸರ್ವಪಕ್ಷ ಮುಖಂಡರ ಸಭೆಯಲ್ಲಿ ಎಲ್ಲಾ ಪಕ್ಷಗಳ ನಾಯಕರ ಮಾತನ್ನು ಪರಿಗಣಿಸಲಾಗುತ್ತದೆ. ಬಳಿಕ ಟಫ್‌ರೂಲ್ಸ್ ಜಾರಿ ಹೇಗಿರಲಿದೆ? ಎಂಬುದನ್ನು ತಿಳಿಸುತ್ತೇವೆ ಎಂದು ಹೇಳಿದ್ರು.

Covid second wave but no lockdown in Karnataka clarified minister R Ashok to media persons here in Bangalore.