ಪುತ್ರಿಯನ್ನು ಕೊಂದು ಇಡೀ ಕುಟುಂಬದ ಹತ್ಯೆಗೆ ಪ್ಲಾನ್ ಹಾಕಿದ್ದ ಭೂಪ ಕಾರವಾರದಲ್ಲಿ ಸಿಕ್ಕಿಬಿದ್ದ !

19-04-21 09:23 pm       Headline Karnataka News Network   ಕರ್ನಾಟಕ

ಆತ ಸಾಲದ ಶೂಲದಿಂದ ಪಾರಾಗಲು ಇಡೀ ಕುಟುಂಬವನ್ನೇ ಮುಗಿಸಲು ಪ್ಲಾನ್ ಹಾಕಿದ್ದ. ಆದರೆ, ವಿಧಿಯಾಟ ಬೇರೆಯೇ ಆಗಿತ್ತು.

ಕೊಚ್ಚಿ, ಎ.19: ಆತ ಸಾಲದ ಶೂಲದಿಂದ ಪಾರಾಗಲು ಇಡೀ ಕುಟುಂಬವನ್ನೇ ಮುಗಿಸಲು ಪ್ಲಾನ್ ಹಾಕಿದ್ದ. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. 13 ವರ್ಷದ ಪುತ್ರಿಯನ್ನು ನದಿಗೆ ದೂಡಿ ಕೊಂದು ಹಾಕಿದ್ದ ತಂದೆ ಆನಂತರ ಒಂದು ತಿಂಗಳ ಕಾಲ ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ತಲೆಮರೆಸಿಕೊಂಡು ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.

ಆತನ ಹೆಸರು ಸಾನು ಮೋಹನ್. ಕೇರಳದ ಆಲಪ್ಪುಳ ಜಿಲ್ಲೆಯ ಕಕ್ಕನಾಡ್ ನಿವಾಸಿ. ಪುಣೆ, ಕೊಯಂಬತ್ತೂರು, ಚೆನ್ನೈನಲ್ಲಿ ವ್ಯವಹಾರ ಹೊಂದಿದ್ದ ಸಾನು ಮೋಹನ್, ಅದರಲ್ಲಿ ನಷ್ಟಗೊಂಡು ಪೊಲೀಸ್ ಕೇಸು ಎದುರಿಸುತ್ತಿದ್ದ. ಇದೇ ಕಾರಣಕ್ಕೆ ಕಕ್ಕನಾಡ್ ಸಮೀಪದ ಕಂಗರಪ್ಪಾಡಿ ಎಂಬಲ್ಲಿ ಫ್ಲಾಟ್ ಒಂದರಲ್ಲಿ ಐದು ವರ್ಷಗಳಿಂದ ತಲೆ ತಪ್ಪಿಸಿಕೊಂಡು ವಾಸಿಸುತ್ತಿದ್ದ. ಆದರೆ, ಮಾ.21ರಂದು ರಾತ್ರಿ ಪತ್ನಿಯನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಮಗಳ ಜೊತೆ ಕಾರಿನಲ್ಲಿ ತೆರಳಿದ್ದ ಸಾನು ಆಬಳಿಕ ನಾಪತ್ತೆಯಾಗಿದ್ದ.

Chargesheet filed against woman's friend

ಆದರೆ, 13 ವರ್ಷದ ಪುತ್ರಿ ವೈಗಾ ಎನ್ನುವ ಸ್ಫುರದ್ರೂಪಿ ಹುಡುಗಿಯ ಶವ ಮಾ.22ರಂದು ಕಕ್ಕನಾಡ್ ಸಮೀಪದ ಮುಟ್ಟಾರ್ ಹೊಳೆಯಲ್ಲಿ ಪತ್ತೆಯಾಗಿತ್ತು. ಶವವನ್ನು ಪೋಸ್ಟ್ ಮಾರ್ಟಂ ಪರೀಕ್ಷೆಗೆ ಒಳಪಡಿಸಿದಾಗ ನದಿಗೆ ಬಿದ್ದು ಮೃತಪಟ್ಟಿದ್ದು ಕಂಡುಬಂದಿತ್ತು. ಶವದಲ್ಲಿ ಯಾವುದೇ ಇತರೇ ಕಲೆಗಳು ಕಂಡುಬರಲಿಲ್ಲ. ಆದರೆ ಫಾರೆನ್ಸಿಕ್ ರಿಪೋರ್ಟ್ ನಲ್ಲಿ ಆಕೆಯ ಹೊಟ್ಟೆಯಲ್ಲಿ ಮದ್ಯದ ಅಂಶ ಇದ್ದುದು ಪತ್ತೆಯಾಗಿತ್ತು. ಇದೇ ವೇಳೆ, ಆಕೆಯ ತಂದೆ ಸಾನು ನಾಪತ್ತೆಯಾಗಿದ್ದು ಪೊಲೀಸರ ಶಂಕೆಗೆ ಕಾರಣವಾಗಿತ್ತು. ಪತ್ನಿ ಮತ್ತು ಸಂಬಂಧಿಕರು ಸಾನು ಮೋಹನ್ ನಾಪತ್ತೆ ಬಗ್ಗೆ ಕೇಸು ದಾಖಲಿಸಿದ್ದರು.

35,669 Handcuffs Stock Photos, Pictures & Royalty-Free Images - iStock

ಪೊಲೀಸರು ತನಿಖೆ ಆರಂಭಿಸಿದಾಗ, ಸಾನು ಮೋಹನ್ ಕಾರಿನಲ್ಲಿ ಕೊಚ್ಚಿಯಿಂದ ತಮಿಳ್ನಾಡಿನ ಕೊಯಂಬತ್ತೂರಿಗೆ ತೆರಳಿದ್ದು ಸಿಸಿಟಿವಿಯಲ್ಲಿ ಪತ್ತೆಯಾಗಿತ್ತು. ಆನಂತರ ಅಲ್ಲಿಂದ ಕೇರಳದ ಮೂಲಕ ಕರ್ನಾಟಕದ ಗಡಿ ಪ್ರವೇಶ ಮಾಡಿರುವುದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿವಿಧ ಕಡೆಯ ಸಿಸಿಟಿವಿಗಳನ್ನು ಪರಿಶೀಲಿಸಿದಾಗ ಕಂಡುಬಂದಿದ್ದರಿಂದ ಪೊಲೀಸರು ಹುಡುಕಾಟ ನಡೆಸಿದ್ದರು. ಇದೇ ವೇಳೆ, ಎಪ್ರಿಲ್ 10ರಿಂದ 16ರ ವರೆಗೆ ಸಾನು ಮೋಹನ್ ಉಡುಪಿ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಕೊಲ್ಲೂರಿನಲ್ಲಿ ಲಾಡ್ಜ್ ಒಂದರಲ್ಲಿ ಇದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೇರಳ ಪೊಲೀಸರು ಕೊಲ್ಲೂರು ಪೊಲೀಸರ ನೆರವು ಪಡೆದು ಸಾನುವನ್ನು ಬಂಧಿಸಲು ಮುಂದಾಗಿದ್ದರು. ಆರು ದಿನಗಳಿಂದ ಲಾಡ್ಜ್ ನಲ್ಲಿದ್ದ ಸಾನು ಎ.16ರಂದು ಬೆಳಗ್ಗೆ ಹೊಟೇಲ್ ಬಿಲ್ ಕೂಡ ಕೊಡದೆ ಅಲ್ಲಿಂದ ದಿಢೀರ್ ನಾಪತ್ತೆಯಾಗಿದ್ದ.

UP: 'Scolded' by mother over studies teen girl 'jumps' to death | Cities  News,The Indian Express

ಕೊಲ್ಲೂರು, ಕುಂದಾಪುರದಿಂದ ಉಡುಪಿಗೆ ಬಸ್ಸಿನಲ್ಲಿ ತೆರಳಿದ್ದ ಸಾನು ಅಲ್ಲಿಂದ ಮತ್ತೆ ಕಾರವಾರಕ್ಕೆ ತೆರಳಿದ್ದ. ಪೊಲೀಸರು ಇದನ್ನು ತಿಳಿದು ಬೆನ್ನತ್ತಿ ಹೋಗಿದ್ದರು. ಕಾರವಾರದಲ್ಲಿ ಬೀಚ್ ಬಳಿ ನಡೆದು ಹೋಗುತ್ತಿದ್ದ ಸಾನು ಮೋಹನನ್ನು ಭಾನುವಾರ ಪೊಲೀಸರು ಪತ್ತೆ ಮಾಡಿದ್ದು ಬಂಧಿಸಿ ಕೊಚ್ಚಿಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ವಿಚಾರಣೆ ವೇಳೆ ಪುತ್ರಿಯನ್ನು ನದಿಗೆ ದೂಡಿ ಹಾಕಿ ಕೊಲೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ, ತಾನು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಪ್ಲಾನ್ ಹಾಕಿದ್ದೆ. ಆದರೆ ಸಾಧ್ಯವಾಗಲಿಲ್ಲ ಎಂದಿದ್ದಾನೆ.

The nearly one-month-long mystery over the suspicious death of a 13-year old girl at Kochi in Kerala was partially solved after the girl's father, who was nabbed after a long hase in Kollur, Karnataka, confessed to police that he killed her.