ಕೊರೊನಾ ನೈಟ್ ಕರ್ಫ್ಯೂ ; ಏನಿರುತ್ತೆ? ಏನಿರಲ್ಲ?

21-04-21 10:42 am       Headline Karnataka News Network   ಕರ್ನಾಟಕ

ಏಪ್ರಿಲ್ 21ರಿಂದ ಮೇ 4 ರ ತನಕ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಣೆ ಮಾಡಲಾಗಿದ್ದು, ಈ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಸರ್ಕಾರ ಕೋವಿಡ್ ಸೋಂಕು ಹರಡುವಿಕೆ ತಡೆಯಲು ಹೊಸ ಕಠಿಣ ಮಾರ್ಗಸೂಚಿಯನ್ನು ಏಪ್ರಿಲ್ 20ರಂದು ರಾತ್ರಿ ಪ್ರಕಟಿಸಲಾಗಿದೆ. ಏಪ್ರಿಲ್ 21ರಿಂದ ಮೇ 4 ರ ತನಕ ರಾತ್ರಿ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿಗೊಳಿಸುವುದಾಗಿ ಘೋಷಣೆ ಮಾಡಲಾಗಿದ್ದು, ಈ ಕುರಿತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

ನೈಟ್ ಕರ್ಫ್ಯೂ ರಾತ್ರಿ 9 ರಿಂದ 6 ತನಕ ಜಾರಿಯಲ್ಲಿರಲಿದೆ. ವೀಕೆಂಡ್ ಕರ್ಫ್ಯೂ ರಾತ್ರಿ 9 ರಿಂದ ಬೆಳಗ್ಗೆ 6 ರ ತನಕ ಇರಲಿದೆ(ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ)

ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆಗಳನ್ನು ಮತ್ತು ತುರ್ತು ಚಟುವಟಿಕೆಗಳಿಗೆ ಮಾತ್ರ ಅನುಮತಿ ನೀಡಲಾಗಿದ್ದು, ಇನ್ನುಳಿದಂತೆ ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಿದೆ.

  • ರಾತ್ರಿ ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು/ ಹೋಂ ಡೆಲಿವರಿ/ ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
  • ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಎಲ್ಲಾ ಕಾರ್ಖಾನೆ/ ಕಂಪನಿ/ ಸಂಸ್ಥೆಗಳು ಯಥಾರೀತಿ ಕಾರ್ಯ ನಿರ್ವಹಣೆ ಮಾಡಲು ಅನುಮತಿಸಿದೆ.
  • ರಾತ್ರಿ ವೇಳೆಯಲ್ಲಿ ಬಸ್, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿಸಿದೆ. ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಆಧಾರದ ಮೇಲೆ ಆಟೋ/ಕ್ಯಾಬ್ ಇತ್ಯಾದಿಗಳ ಮೂಲಕ ಸಂಚರಿಸಲು ಅನುಮತಿ ನೀಡಿದೆ.
  • ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್
  • ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಟೇಕ್ ಅವೇ, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
  • ಕೈಗಾರಿಕೆ, ವ್ಯವಸ್ಥಾಯ, ದಿನಸಿ ಮಳಿಗೆಗೆ ಅನುಮತಿ, ತರಕಾರಿ ಮಾರುಕಟ್ಟೆ ತೆರೆದ ಪ್ರದೇಶದಲ್ಲಿ ಏ.23ರಿಂದ ಮಾರಾಟ ವ್ಯವಸ್ಥೆ ಮಾಡಲಾಗುತ್ತದೆ.
  • ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆ, ಬಾರ್, ರೆಸ್ಟೋರೆಂಟ್ ಬಂದ್, ಟೇಕ್ ಅವೇಗೆ ಮಾತ್ರ ಅನುಮತಿ* ಖಾಸಗಿ ಸಂಸ್ಥೆ, ಐಟಿ-ಬಿಟಿ ವರ್ಕ್ ಫ್ರಂ ಹೋಂಗೆ ಅನುಮತಿ, ಸರ್ಕಾರಿ ಕಚೇರಿ ಶೇ50ರಷ್ಟು ಹಾಜರಾತಿಗೆ ಅನುಮತಿಪೆಟ್ರೋಲ್, ಡೀಸೆಲ್, ಅಗತ್ಯ ವಸ್ತು ಪೂರೈಕೆ ಸಾಗಾಟಕ್ಕೆ ಅನುಮತಿ
  • ದೇವಸ್ಥಾನಗಳಲ್ಲಿ ಅರ್ಚಕರು ನಿತ್ಯಪೂಜೆ ಸಲ್ಲಿಸಲು ಹೋಗಬಹುದು, ಯಾವುದೇ ಧಾರ್ಮಿಕ ಕೇಂದ್ರಗಳು ತೆರೆಯುವಂತಿಲ್ಲ.* ಕರ್ಫ್ಯೂ ಅವಧಿಯಲ್ಲಿ ಶಾಲೆ, ಕಾಲೇಜು, ವಿದ್ಯಾಸಂಸ್ಥೆಗಳು ಬಂದ್ ಆಗಿರಲಿವೆ.

New COVID-19 guidelines for Karnataka, including the imposition of a night curfew and weekend curfew, was announced on April 20. These guidelines were issued after an all-party meeting was convened by Karnataka Governor Vajubhai Vala.