ರಾಜ್ಯದಲ್ಲಿ ದಿಢೀರ್ ಲಾಕ್ಡೌನ್ ; ನಾಳೆ ಸಂಜೆಯಿಂದಲೇ 14 ದಿನ ಕರ್ಫ್ಯೂ ಹೇರಿಕೆ : ಸಂಪುಟ ಸಭೆಯ ಬಳಿಕ ಸಿಎಂ ಘೋಷಣೆ

26-04-21 02:31 pm       Headline Karnataka News Network   ಕರ್ನಾಟಕ

ಕೊರೊನಾ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ದಿಢೀರ್ 14 ದಿನಗಳ ಕಾಲ ಲಾಕ್ಡೌನ್ ಹೇರಲಾಗಿದೆ. 

Photo credits : ANI @ ANI

ಬೆಂಗಳೂರು, ಎ.26: ಕೊರೊನಾ ಸೋಂಕು ತೀವ್ರ ಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿ ರಾಜ್ಯದಾದ್ಯಂತ ದಿಢೀರ್ 14 ದಿನಗಳ ಕಾಲ ಲಾಕ್ಡೌನ್ ಹೇರಲಾಗಿದೆ. 

ಏಪ್ರಿಲ್ 27ರಿಂದ 14 ದಿನ ಬೆಂಗಳೂರು ಸೇರಿ ಇಡೀ ರಾಜ್ಯದಲ್ಲಿ ಲಾಕ್‌ಡೌನ್ ಆಗಲಿದೆ. ಗಾರ್ಮೆಂಟ್ಸ್‌ ಮತ್ತು ಉತ್ಪಾದಕ ಕ್ಷೇತ್ರಕ್ಕೆ ಲಾಕ್ ಡೌನ್‌ನಿಂದ ವಿನಾಯಿತಿ ನೀಡಿಲ್ಲ, ಉತ್ಪಾದನಾ ವಲಯ, ಕಟ್ಟಡ ನಿರ್ಮಾಣ ,ಕೃಷಿ ಚಟುವಟಿಕೆಗೆ ವಿನಾಯಿತಿ ನೀಡಲಾಗಿದೆ.

ಕೆಎಸ್ಸಾರ್ಟಿಸಿ, ಬಿಎಂಟಿಸಿ, ನಮ್ಮ ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ 14 ದಿನಗಳ ಕಾಲ ಬಂದ್ ಆಗಲಿದೆ. ಅಂತಾರಾಜ್ಯ ಬಸ್ ಸಂಚಾರವೂ ಸ್ಥಗಿತ. ಖಾಸಗಿ ವಾಹನಗಳಲ್ಲಿ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ.

  • ಕರ್ಫ್ಯೂ ಅವಧಿಯಲ್ಲಿ ಅತ್ಯವಶ್ಯಕ ಸೇವೆಗಳನ್ನು ಒದಗಿಸುವಂತಹ ವಾಹನಗಳು/ ಸರಕು ಸಾಗಾಣಿಕೆ ವಾಹನಗಳು/ ಹೋಂ ಡೆಲಿವರಿ/ ಇ-ಕಾಮರ್ಸ್ ಮತ್ತು ಖಾಲಿ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಅಂತಾರಾಜ್ಯ ಸರಕು ಸಾಗಣೆ ಸಂಚಾರಕ್ಕೂ ಅನುಮತಿ.
  • ಸಿನಿಮಾ ಹಾಲ್, ಜಿಮ್, ಕ್ರೀಡಾಂಗಣ, ಆಡಿಟೋರಿಯಂ, ಈಜುಕೊಳ ಎಲ್ಲವೂ ಬಂದ್.
  • ಹೋಟೆಲ್, ರೆಸ್ಟೋರೆಂಟ್ ಬಂದ್ ಆಗಿರಲಿದ್ದು, ಟೇಕ್ ಅವೇ, ಪಾರ್ಸೆಲ್ ವ್ಯವಸ್ಥೆಗೆ ಅನುಮತಿ ಇರಲಿದೆ.
  • ಬೆಳಗ್ಗಿನ ಸಮಯದಲ್ಲಿ 6ರಿಂದ 10 ಗಂಟೆ ವರೆಗೆ ಮದ್ಯ ಮಳಿಗೆಯಲ್ಲಿ ಪಾರ್ಸೆಲ್ ವ್ಯವಸ್ಥೆ, ಬಾರ್, ರೆಸ್ಟೋರೆಂಟ್ ಬಂದ್, ಟೇಕ್ ಅವೇಗೆ ಮಾತ್ರ ಅನುಮತಿ
  • ರಾಜ್ಯದಲ್ಲಿ 14 ದಿನಗಳ ಕಾಲ ಲಾಕ್ಡೌನ್ ಹೇರಿಕೆ 
  • ಬೆಳಗ್ಗೆ 6ರಿಂದ 10 ಗಂಟೆ ವರೆಗೆ ಅಗತ್ಯ ಸಾಮಗ್ರಿ ಖರೀದಿಗೆ ಅವಕಾಶ 
  • ಸಾರಿಗೆ, ಇನ್ನಿತರ ವಾಹನ ಓಡಾಟಕ್ಕೆ ಅವಕಾಶ ಇಲ್ಲ 
  • ಕೃಷಿ ಚಟುವಟಿಕೆಗೆ ಯಾವುದೇ ತೊಂದರೆ ಇಲ್ಲ 
  • ಉತ್ಪಾದನೆ ವಲಯ, ಕೃಷಿ ವಲಯಕ್ಕೆ ಲಾಕ್ಡೌನ್ ಇರಲ್ಲ 
  • ಆಕ್ಸಿಜನ್ ಕೊರತೆ ಇಲ್ಲ, ಕೇಂದ್ರದಿಂದ ರೆಮಿಡಿಸಿವಿರ್ ಔಷಧಿ ಹೆಚ್ಚುವರಿ ಪೂರೈಕೆ 
  • ಜನ, ವಾಹನ ಸಂಚಾರಕ್ಕೆ ಅವಕಾಶ ಇರಲ್ಲ 
  • ಎರಡು ವಾರಗಳಲ್ಲಿ ಸ್ಥಿತಿ ಸುಧಾರಿಸದಿದ್ದರೆ ಮತ್ತೆ ಒಂದು ವಾರ ಲಾಕ್ ವಿಸ್ತರಣೆ 
  • ಹೊರ ರಾಜ್ಯಕ್ಕೆ ವಾಹನ ಸಾಗಾಟಕ್ಕೆ ಅವಕಾಶ ಇಲ್ಲ 
  • ಸಾರಿಗೆ, ಮೆಟ್ರೋ ರೈಲು ಸಂಚಾರ ಇಲ್ಲ 
  • ಎರಡು ವಾರ ರಾಜ್ಯಾದ್ಯಂತ ಬಿಗಿ ಕ್ರಮ ಹೇರಿಕೆ 
  • ರಾಜ್ಯದ ಜನ ಸಹಕರಿಸುವಂತೆ ಸಿಎಂ ಯಡಿಯೂರಪ್ಪ ಕೋರಿಕೆ
  • ಸ್ಕೂಲ್ ಕಾಲೇಜ್‌ಗಳು ಇಲ್ಲ
  • ಚುನಾವಣೆಗಳನ್ನು ಮುಂದೂಡಲು ಶಿಫಾರಸು
  • ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ

14-day lockdown in Karnataka from tomorrow orders B. S. Yediyurappa after a meeting held with leaders in Cabinet at Bangalore.