ಬ್ರೇಕಿಂಗ್ ನ್ಯೂಸ್
28-04-21 09:28 pm HK Crime Correspondent ಕರ್ನಾಟಕ
ಮಂಗಳೂರು, ಎ.28: ಹಾಸನ ಜಿಲ್ಲೆಯ ಆಲೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣ ಈಗ ಆಲೂರು ಠಾಣೆ ಪೊಲೀಸರ ಕುತ್ತಿಗೆ ಹಿಡಿಯುವ ಸಾಧ್ಯತೆ ಕಂಡುಬಂದಿದೆ. ರೇವ್ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಹಾಸನ ಎಸ್ಪಿ ಶ್ರೀನಿವಾಸ ಗೌಡ ದಾಳಿ ನಡೆಸಿ, 130 ಮಂದಿಯನ್ನು ಬಂಧಿಸಿದ್ದರು. ಇದೇ ವೇಳೆ, ಮಂಗಳೂರಿನ ಲೇಡಿ ಪೊಲೀಸ್ ಕಾನ್ಸ್ ಟೇಬಲ್ ಶ್ರೀಲತಾ ಪಾರ್ಟಿಯಲ್ಲಿ ಭಾಗವಹಿಸಿದ್ದು ದಾಳಿಯ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಬಂಧಿಸಿದ್ದು ಆಬಳಿಕ ಈ ವಿಷ್ಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಲೇ ಮಂಗಳೂರು ಪೊಲೀಸ್ ಆಯುಕ್ತರಿಂದ ಆಕೆ ಅಮಾನತಿಗೆ ಒಳಗಾಗಿದ್ದೂ ನಡೆದಿತ್ತು.
ಆದರೆ, ಆಲೂರು ಠಾಣೆ ವ್ಯಾಪ್ತಿಯ ನಂದೀಪುರ ಎಸ್ಟೇಟ್ ನಲ್ಲಿ ಮೋಟಾರ್ ಡೈರೀಸ್ ಎನ್ನುವ ಹೆಸರಲ್ಲಿ ಪಾರ್ಟಿಗೆ ಆಲೂರು ಠಾಣೆಯ ಪೊಲೀಸರೇ ಅನುಮತಿ ನೀಡಿದ್ದರು ಅನ್ನೋದ್ರ ದಾಖಲೆ ಪ್ರತಿಗಳು ಹೆಡ್ ಲೈನ್ ಕರ್ನಾಟಕಕ್ಕೆ ಲಭ್ಯವಾಗಿವೆ. ಎ.10ರಂದು ರಾತ್ರಿ ವೇಳೆ ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಕಾರ್ಯಕ್ರಮ ಆಯೋಜಕರು ಆಲೂರು ಠಾಣೆ ಪೊಲೀಸರಿಂದ ಅನುಮತಿಗಾಗಿ ಪತ್ರ ಬರೆದಿದ್ದರು. ಮಲ್ಲೇಶ್ ಎನ್ನುವ ವ್ಯಕ್ತಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಮತ್ತು ಧ್ವನಿವರ್ಧಕ ಬಳಕೆಗೆ ಅನುಮತಿ ಕೋರಿ ಎ.9ರಂದು ಪತ್ರ ಬರೆದಿದ್ದು, ಪೊಲೀಸರು ಅದನ್ನು ಪರಿಗಣಿಸಿ ಎ.10ರಂದು ಪರವಾನಗಿ ಕೊಟ್ಟಿದ್ದರು.
ವಿಶೇಷ ಅಂದ್ರೆ, ಕೋವಿಡ್ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ರಾಜ್ಯಾದ್ಯಂತ ಎ.10ರಿಂದಲೇ ಜಾರಿಯಾಗಿತ್ತು. ಕೋವಿಡ್ ನಿಯಮ ಪ್ರಕಾರ ರಾತ್ರಿ ವೇಳೆ ಯಾವುದೇ ಜನ ಸೇರುವ ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಹಾಗಿದ್ದರೂ, ಆಲೂರು ಠಾಣೆಯ ಪೊಲೀಸರು ಧ್ವನಿವರ್ಧಕ ಬಳಸಲು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಲಿಖಿತ ಅನುಮತಿ ನೀಡಿದ್ದು ಹೇಗೆ ಎನ್ನುವ ಪ್ರಶ್ನೆ ಉದ್ಭವಿಸಿದೆ. ಹಾಗಾದ್ರೆ, ನಂದೀಪುರ ಎಸ್ಟೇಟಿನಲ್ಲಿ ನಡೆಯುವ ಪಾರ್ಟಿ ಬಗ್ಗೆ ಅಲ್ಲಿನ ಪೊಲೀಸರಿಗೆ ಮೊದಲೇ ಗೊತ್ತಿತ್ತು. ಅಲ್ಲದೆ, ಕೋವಿಡ್ ಕರ್ಫ್ಯೂ ನೀತಿಯನ್ನು ಉಲ್ಲಂಘಿಸಿಯೇ ಪಾರ್ಟಿಗೆ ಅನುಮತಿ ನೀಡಿದ್ದರು.
ಇದಲ್ಲದೆ ಅಲ್ಲಿನ ಪಾರ್ಟಿ ಯಾವ ರೀತಿಯದ್ದು ಎನ್ನುವುದೂ ಪೊಲೀಸರಿಗೆ ಗೊತ್ತಿತ್ತು. ಮೂಲಗಳ ಪ್ರಕಾರ, ಅಲ್ಲಿನ ಪಾರ್ಟಿಗೆ ಅಬಕಾರಿ ಇಲಾಖೆಯಿಂದಲೂ ಪರವಾನಗಿ ನೀಡಲಾಗಿತ್ತು. ಅಬಕಾರಿ ಇಲಾಖೆಯವರಿಗೆ ಅದಕ್ಕಾಗಿ ಅಗತ್ಯ ಶುಲ್ಕವನ್ನು ಕೂಡ ನೀಡಲಾಗಿತ್ತು ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ದಾಳಿ ನಡೆದ ವೇಳೆಯಲ್ಲಿ ಸಾಕಷ್ಟು ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ಇದೇ ವೇಳೆ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಮೂರು ಮಂದಿಯಲ್ಲಿ ಸ್ವಲ್ಪ ಪ್ರಮಾಣದ ಡ್ರಗ್ಸ್ ಅನ್ನೂ ಪತ್ತೆ ಮಾಡಲಾಗಿತ್ತು. ಇದೆಲ್ಲವೂ ಆಲೂರು ಠಾಣೆ ಪೊಲೀಸರು ಮತ್ತು ಪಾರ್ಟಿ ಆಯೋಜಕರ ನಡುವೆ ಕೊಡುಕೊಳ್ಳುವಿಕೆಯ ಒಪ್ಪಂದದ ಮೇರೆಗೆ ನಡೆದಿತ್ತು ಅನ್ನುವುದಕ್ಕೆ ಸಾಕ್ಷಿಗಳು ಲಭಿಸುತ್ತಿವೆ.
ಕೆಲವರ ಪ್ರಕಾರ, ಇದಕ್ಕಾಗಿ ಪೊಲೀಸರಿಗೂ ಒಂದಷ್ಟು ಸಂದಾಯ ಆಗಿತ್ತು ಎಂದು ಹೇಳಲಾಗುತ್ತಿದೆ. ಪಾರ್ಟಿ ಆಯೋಜಕರು ಹಣ ಹಾಕಿರುವ ಬಗ್ಗೆ ಗೂಗಲ್ ಪೇ ಮಾಡಿರುವ ಸಾಕ್ಷ್ಯಗಳು ಕೂಡ ಜಾಲತಾಣದಲ್ಲಿ ಹರಿದಾಡಿದ್ದವು. ಆದರೆ, ಈ ಮೊತ್ತಗಳ ಪೈಕಿ ಎಷ್ಟು ಯಾರಿಗೆ ಸಂದಾಯ ಆಗಿದೆ ಅನ್ನೋದನ್ನು ಹೇಳಕ್ಕಾಗಲ್ಲ. ಇನ್ನು ಕೆಲವರ ಪ್ರಕಾರ, ಎಸ್ಟೇಟ್ ಮಾಲೀಕರು ತಮ್ಮ ವ್ಯಾಪ್ತಿಯಲ್ಲಿ ಮಲೆನಾಡಿನಲ್ಲಿ ಆಗಾಗ ನಡೆಸುತ್ತಾರೆ. ಕಾರ್ಯಕ್ರಮ ನಡೆಯುತ್ತಿದ್ದ ನಂದೀಪುರ ಎಸ್ಟೇಟ್ ಮಾಲೀಕ ಗಗನ್ ಬಗ್ಗೆ ಆಗದವರು ಪೊಲೀಸರಿಗೆ ಹೇಳಿ ರೈಡ್ ಮಾಡಿಸಿದ್ದಾರೆ ಎನ್ನುವ ಮಾತೂ ಕೇಳಿಬರುತ್ತಿದೆ.
ರೇವ್ ಪಾರ್ಟಿ ನಡೆದಿಲ್ಲ, ಬಿಂಬಿಸಿದ್ದಷ್ಟೇ..
ಇನ್ನು ಪಾರ್ಟಿಯಲ್ಲಿ ಪಾಲ್ಗೊಂಡಿದ್ದಾರೆ ಎನ್ನಲಾದ ಆರೋಪದಲ್ಲಿ ಸಸ್ಪೆಂಡ್ ಆಗಿರುವ ಮಂಗಳೂರಿನ ನಾರ್ಕೋಟಿಕ್ ಮತ್ತು ಇಕನಾಮಿಕ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಪ್ರಕಾರ, ಅಲ್ಲಿ ಯಾವುದೇ ರೇವ್ ಪಾರ್ಟಿ ನಡೆದಿಲ್ಲ. ಮಾಧ್ಯಮಗಳು ಮಾತ್ರ ಅಲ್ಲಿ ರೇವ್ ಪಾರ್ಟಿ ನಡೆದಿದ್ದಾಗಿ ಬಿಂಬಿಸಿದೆಯಂತೆ. ಅದಲ್ಲದೆ, ಶ್ರೀಲತಾ ಅವರು ಪಾರ್ಟಿಯಲ್ಲಿ ಪಾಲ್ಗೊಳ್ಳುವುದಕ್ಕಾಗಿ ಅಲ್ಲಿಗೆ ತೆರಳಿಲ್ಲ. ಆಕೆಯ ಮಗ, ಅತುಲ್ ನನ್ನು ಕರೆತರುವುದಕ್ಕಾಗಿ ಮಂಗಳೂರಿನಲ್ಲಿ ಡ್ಯೂಟಿ ಮುಗಿಸ್ಕೊಂಡು ರಾತ್ರಿ ತೆರಳಿದ್ದರಂತೆ.
ಮಗನ ಕರೆತರಲು ತೆರಳಿದ್ದೆ : ಶ್ರೀಲತಾ
ಅತುಲ್ ಬೆಂಗಳೂರಿನಲ್ಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಕಲಾವಿದರನ್ನು ಕರೆತಂದಿದ್ದ. ಕಾರ್ಯಕ್ರಮ ಮುಗಿದ ಬಳಿಕ ಅವನನ್ನು ಮಂಗಳೂರಿಗೆ ಕರೆತರಲೆಂದು ತೆರಳಿದ್ದೆ. ಆದರೆ, ಅಲ್ಲಿಗೆ ತಲುಪಿದಾಗ ರಾತ್ರಿಯಾಗಿದ್ದು ನನ್ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ಅವನನ್ನು ಕಾಂಟ್ಯಾಕ್ಟ್ ಮಾಡಲು ಸಾಧ್ಯವಾಗಲಿಲ್ಲ. ಕಾರ್ಯಕ್ರಮ ನಡೆಯುವ ಹೊರಭಾಗದಲ್ಲಿ ಬೌನ್ಸರ್ ಗಳಿದ್ದು ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ನಾನು ಕನ್ವಿನ್ಸ್ ಮಾಡಿದರೂ, ಒಳಗೆ ಬಿಟ್ಟಿರಲಿಲ್ಲ. ಇದೇ ವೇಳೆ, ಎಸ್ಪಿ ನೇತೃತ್ವದಲ್ಲಿ ಪೊಲೀಸರು ಬಂದಿದ್ದಾರೆ. ನಾನು ಮಂಗಳೂರಿನಲ್ಲಿ ಪೊಲೀಸ್ ಎಂದು ಅವರಿಗೆ ಹೇಳಿದರೂ ಕೇಳಲಿಲ್ಲ. ಅವಾಚ್ಯವಾಗಿ ನಿಂದಿಸುತ್ತಾ ನನ್ನನ್ನು ತಳ್ಳಿಕೊಂಡು ಒಳಗೆ ನುಗ್ಗಿದ್ದು, ಎಲ್ಲರನ್ನೂ ನಡುರಾತ್ರಿಯಿಂದ ಮರುದಿನ ಮಧ್ಯಾಹ್ನದ ವರೆಗೂ ಕೂಡಿ ಹಾಕಿದ್ದಾರೆ. ಆಬಳಿಕ ಬ್ಲಡ್ ಟೆಸ್ಟ್ ಮಾಡಿಸಿ, ನಮ್ಮನ್ನು ಬಿಟ್ಟು ಕಳಿಸಿದ್ದಾರೆ. ನಾನು ತಪ್ಪು ಮಾಡದೇ ಇದ್ದರೂ, ನನ್ನ ಬಗ್ಗೆ ಹಾಸನ ಪೊಲೀಸರು ರಿಪೋರ್ಟ್ ಹಾಕಿದ್ದಾರೆ. ನಾನೇ ಆಯೋಜಕಿ ಎಂದು ಬಿಂಬಿಸಿ ಮಾಧ್ಯಮಗಳಲ್ಲಿ ಸುದ್ದಿ ಬಂದಿರುವುದು ನೋವು ತರಿಸಿದೆ ಎಂದು ಶ್ರೀಲತಾ ಅಲವತ್ತುಕೊಂಡಿದ್ದಾರೆ.
ಡ್ರಗ್ಸ್ ವಿರುದ್ಧ ಅಭಿಯಾನ ನಡೆಸಿದ್ದರು
ಶ್ರೀಲತಾ ಮಂಗಳೂರು ಸೇರಿದಂತೆ ಹಲವೆಡೆ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದಲ್ಲಿ ಪಾಲ್ಗೊಂಡಿದ್ದು ಅದಕ್ಕಾಗಿ ಹಲವಾರು ಪ್ರಶಸ್ತಿ, ಗೌರವಗಳನ್ನು ಪಡೆದಿದ್ದರು. ಇಂಥ ಹೆಗ್ಗಳಿಕೆ ಹೊಂದಿರುವ ಸಿಬಂದಿ ಹಾಸನದ ನಿಗೂಢ ಜಾಗದಲ್ಲಿ ನಡೆದಿರುವ ಪಾರ್ಟಿಯಲ್ಲಿ ಸಿಕ್ಕಿಬಿದ್ದಿರುವುದು ಸಹಜವಾಗೇ ಅವರ ಬಗ್ಗೆ ಸಂಶಯ ಮೂಡುವಂತಾಗಿದೆ. ಇನ್ನು ತನ್ನ ಮಗನನ್ನು ಹಾಸನ ಪೊಲೀಸರು ಡ್ರಗ್ ಪೆಡ್ಲರ್ ಎನ್ನುವ ರೀತಿ ಬಿಂಬಿಸಿದ್ದಾಗಿ ಶ್ರೀಲತಾ ಆಕ್ಷೇಪಿಸಿದ್ದಾರೆ. ಆತ ಅಂಥ ವ್ಯಕ್ತಿಯಲ್ಲ. ಈ ಹಿಂದೆ ಆತನ ವಿರುದ್ಧ ಯಾವುದೇ ರೀತಿಯ ಪ್ರಕರಣ ಆಗಿಲ್ಲ. ಅಮೆರಿಕದಲ್ಲಿ ಪ್ರಮುಖ ಕಂಪನಿ ಒಂದರಲ್ಲಿ ಆತನಿಗೆ ಕೆಲಸ ಆಗಿದ್ದು, ಅಲ್ಲಿಗೆ ತೆರಳಲು ರೆಡಿಯಾಗುತ್ತಿದ್ದ. ಮೊನ್ನೆ ಹಾಸನದ ಕಾರ್ಯಕ್ರಮಕ್ಕೆ ಕಲಾವಿದರನ್ನು ಕರೆತಂದು ರಾತ್ರಿಯಾಗುವ ಮೊದಲೇ ಹಿಂತಿರುಗಿ ಹೋಗಿದ್ದ. ನನ್ನ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತ ಅಲ್ಲಿಂದ ತೆರಳಿರುವುದು ಗೊತ್ತಿಲ್ಲದೆ ತೆರಳಿದ್ದೆ. ಆದರೆ, ಸ್ಥಳದಲ್ಲೇ ಇರದ ನನ್ನ ಮಗನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ.
A big twist in Hassan Rave Party. The party was organised with clear permission of Alur police station and the said documents have been released. It was not a rave party but it was a cultural program with permission to consume liquor but the media had projected it as Rave Party says Srilata the suspended lady police from Mangalore. She also clarified that she was not involved in the program but had been to pick her son from the dance program held there.
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 11:08 pm
HK News Desk
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
ಆಪರೇಷನ್ ಸಿಂಧೂರ ಬಗ್ಗೆ ಹೇಳಿಕೆ, ದೇಶವಿರೋಧಿ ಪೋಸ್ಟ್...
14-05-25 04:45 pm
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
14-05-25 08:05 pm
Mangalore Correspondent
Lokayuta, Arrest, Bantwal, Mangalore: ಗಂಡನ ಪಿ...
14-05-25 06:33 pm
Harish Injadi, President of Kukke Subrahmanya...
14-05-25 01:42 pm
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
14-05-25 10:22 pm
HK News Desk
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm