ಕೇರಳದ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಧ್ಯಕ್ಷ ಸುರೇಂದ್ರನ್‌ಗೆ ಹಿನ್ನಡೆ

02-05-21 12:29 pm       Headline Karnataka News Network   ಕರ್ನಾಟಕ

ಕೇರಳದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರಿಗೆ ಹಿನ್ನಡೆಯಾಗಿದೆ.

ತಿರುವನಂತಪುರಂ, ಮೇ 02: ಕೇರಳದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ಅವರಿಗೆ ಹಿನ್ನಡೆಯಾಗಿದೆ.

ಕೆ ಸುರೇಂದ್ರನ್ ಅವರು ಕೊನ್ನಿ ಹಾಗೂ ಮಂಜೇಶ್ವರ ಎರಡು ಕ್ಷೇತ್ರಗಳಲ್ಲಿ ಸುರೇಂದ್ರನ್ ಸ್ಪರ್ಧಿಸಿದ್ದರು. ಕೊನ್ನಿಯಲ್ಲಿ ಸುರೇಂದ್ರನ್ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಶಾಸಕ ಸಿಪಿಎಂನ ಜನೀಶ್ 1807 ಮತಗಳನ್ನು ಪಡೆದಿದ್ದರೆ, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಬಿನ್ ಪೀಟರ್ ಇದ್ದಾರೆ.

ಇನ್ನು ಮಂಜೇಶ್ವರದಲ್ಲಿ ಪಿಕೆಂ ಆಶ್ರಫ್ ಮುನ್ನಡೆ ಸಾಧಿಸಿದ್ದಾರೆ, ಪಟ್ಟಣಂತಿಟ್ಟದಲ್ಲಿ ಎಲ್‌ಡಿಎಫ್ ಐದು ಕ್ಷೇತ್ರಗಳಲ್ಲಿ ಐದರಲ್ಲೂ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಕಾಸರಗೋಡಿನಲ್ಲಿ ಐದು ಕ್ಷೇತ್ರಗಳಲ್ಲಿ ಯುಡಿಎಫ್ ಮೂರು ಸ್ಥಾನಗಳಲ್ಲಿ, ಎಲ್‌ಡಿಎಫ್ ಎರಡು ಸ್ಥಾನಗಳಲ್ಲಿ ಮುಂದಿದೆ.

ಕೇರಳ ಚುನಾವಣೆಯಲ್ಲಿ ಎಲ್‌ಡಿಎಫ್ ಮತ್ತೊಮ್ಮೆ ಗೆಲುವು ಸಾಧಿಸುವ ಸಾಧ್ಯತೆಯಿದೆ ಬಹುತೇಕ ಎಲ್ಲಾ ಸಮೀಕ್ಷೆಗಳು ಹೇಳಿವೆ. ಬಿಜೆಪಿ ಒಂದು ಸ್ಥಾನಗಳಿಸಿದರೆ ಹೆಚ್ಚು ಅಬ್ಬಬ್ಬಾ ಎಂದರೆ 2 ಸ್ಥಾನ ಗಳಿಸಬಹುದು ಎಂದು ಸಮೀಕ್ಷೆಗಳು ತಿಳಿಸಿವೆ.

ಒಟ್ಟು 140 ವಿಧಾನಸಭಾ ಕ್ಷೇತ್ರಗಳುಇರುವ ಕೇರಳದಲ್ಲಿ ಸರಳ ಬಹುಮತಕ್ಕೆ 71 ಸ್ಥಾನಗಳನ್ನು ಗೆಲ್ಲಬೇಕು, ಕಳೆದ ಚುನಾವಣೆಯಲ್ಲಿ ಎಲ್‌ಡಿಎಫ್ 91 ಸ್ಥಾನಗಳನ್ನು ಗೆದ್ದಿತ್ತು.

BJP state president K Surendran is trailing against CPM candidate KU Jenish Kumar in the assembly seat that was at the heart of the recent Sabarimala movement. As per election commission data Surendran has got 11611 votes so far while incumbent MLA Jenish Kumar has secured 24595 votes so far.