ಎಟಿಎಂ ರಾಬರಿ ಮಾಡಿ 27 ಲಕ್ಷ ದೋಚಿದ ಖತರ್ನಾಕ್ ಖದೀಮರು ಅರೆಸ್ಟ್

26-08-20 10:49 pm       Headline Karnataka News Network   ಕರ್ನಾಟಕ

ನಗರದ ವಿವಿಧ ಕಡೆ ಎಟಿಎಂ ರಾಬರಿ ಮಾಡುತ್ತಿದ್ದ ಸಮರ್ಜೋತ್ ಸಿಂಗ್, ಜಾಫರ್ ಹಾಗೂ ಯಹ್ ಯಾ ಎಂಬ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು, ಆಗಸ್ಟ್ 26: ನಗರದ ವಿವಿಧ ಕಡೆ ಎಟಿಎಂ ರಾಬರಿ ಮಾಡುತ್ತಿದ್ದ ಸಮರ್ಜೋತ್ ಸಿಂಗ್, ಜಾಫರ್ ಹಾಗೂ ಯಹ್ ಯಾ ಎಂಬ ಆರೋಪಿಗಳನ್ನು ಜಾಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ಜೂನ್ ತಿಂಗಳಿನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ ಆರೋಪಿಗಳು, ನಗರದ ಜಾಲಹಳ್ಳಿ ಬಳಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಗ್ಯಾಸ್ ಕಟರ್ ಬಳಸಿ ₹27 ಲಕ್ಷ 82 ಸಾವಿರ ಹಣ ದೋಚಿದ್ದರು.

ಹರಿಯಾಣ ಮೂಲದ ಆರೋಪಿ ಸಮರ್ ಜ್ಯೋತ್ ಸಿಂಗ್ ಈ ಹಿಂದೆ ಎಟಿಎಂ ಕಳ್ಳತನ ಮಾಡಿ ಬ್ಯಾಟರಾಯನಪುರ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ. ಇನ್ನು ಜಾಫರ್ ಹಾಗೂ ಯಹ್ ಯಾ ಗಾಂಜಾ ಕೇಸ್ ನಲ್ಲಿ ಸದಾಶಿವನಗರ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲು ಪಾಲಾಗಿದ್ದರು. ಮೂವರನ್ನು ಸಹ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್​ ಮಾಡಲಾಗಿತ್ತು. ಜೈಲಿನಲ್ಲೇ ಪರಿಚಯವಾದರೊಂದಿಗೆ ಸಮರ್ಜೋತ್ ಸಿಂಗ್ ಎಟಿಎಂ ದರೋಡೆಗೆ ಸ್ಕೆಚ್​ ಹಾಕಿದ್ದ. ಜೈಲಿಂದ ಹೊರ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಆರೋಪಿಗಳು ಕೆನರಾ ಬ್ಯಾಂಕ್​ ಎಟಿಎಂಗೆ ಕನ್ನ ಹಾಗಿ ಮತ್ತೆ ಪೊಲೀಸರ ಅಥಿತಿಯಾಗಿದ್ದಾರೆ.

ಆರೋಪಿಗಳು ಪರಪ್ಪನ ಅಗ್ರಹಾರ, ಸದಾಶಿವನಗರ, ಜಾಲಹಳ್ಳಿ ಹಾಗೂ ಬ್ಯಾಟರಾಯನಪುರ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಹಲವು ಕಡೆ ಎಟಿಎಂ ದರೋಡೆ ನಡೆಸಿದ್ದರು ಎನ್ನಲಾಗಿದೆ.