ಕೋಟಿ ಕೋಟಿ ವಂಚನೆ ಕೇಸ್ ನಲ್ಲಿ ಸಚಿವ ಶ್ರೀರಾಮುಲು ಪಿಎ ಅಂದರ್ ...!

02-07-21 11:18 am       Headline Karnataka News Network   ಕರ್ನಾಟಕ

ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪಿಎ ರಾಜಣ್ಣ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ.

ಬೆಂಗಳೂರು, ಜುಲೈ 02; ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಪಿಎ ರಾಜಣ್ಣ ಎಂಬಾತನನ್ನು ಬೆಂಗಳೂರಿನ ಸಿಸಿಬಿ ಪೋಲಿಸರು ವಂಚನೆ ಆರೋಪದ ಮೇಲೆ ಬಂಧಿಸಿದ್ದಾರೆ.

ಸಚಿವರು, ಸಿಎಂ ಕಚೇರಿ ಹೆಸರಿನಲ್ಲಿ ಹಲವರಿಗೆ ವಂಚನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಬಂಧಿಸಲಾಗಿದೆ. ಸಚಿವ ಶ್ರೀರಾಮುಲು ಮತ್ತು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು ಸ್ವತ 
ವಿಜಯೇಂದ್ರ ಈ ಕುರಿತು ದೂರು ನೀಡಿದ್ದರು.

ಎರಡು ದಿನಗಳ ಹಿಂದೆ ರಾಜಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬೆಂಗಳೂರಿನಲ್ಲಿ ಗುರುವಾರ ಸಚಿವ ಶ್ರೀರಾಮುಲು ಅವರ ನಿವಾಸದಲ್ಲಿ ರಾಜಣ್ಣನನ್ನು  ಬಂಧಿಸಲಾಗಿದೆ. ಪೊಲೀಸರು ಬಂಧಿಸಲು ಹೋದಾಗ ರಾಜಣ್ಣ ಹೈಡ್ರಾಮ ಮಾಡಿರುವ ಪ್ರಸಂಗವೂ ನಡೆದಿದೆ. 

ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲುಗೆ ಕುಟುಂಬದ ಜೊತೆ ಹಲವು ವರ್ಷಗಳಿಂದ ರಾಜಣ್ಣ ನಿಕಟ ಸಂಪರ್ಕ ಹೊಂದಿದ್ದರು. ಹಿಂದೆ ಬಿಜೆಪಿ ಸರ್ಕಾರದಲ್ಲಿ ಶ್ರೀರಾಮುಲು ಸಚಿವರಾಗಿದ್ದಾಗಲೂ ಪಿಎ ಆಗಿದ್ದರು.

ಕೆಲಸದ ಆಮಿಷ, ವರ್ಗಾವಣೆ ಭರವಸೆ ನೀಡಿ ಹಲವರಿಂದ ಹಣವನ್ನು ಪಡೆದು ರಾಜಣ್ಣ ವಂಚನೆ ಮಾಡಿದ್ದಾರೆ ಎಂಬುದು ಆರೋಪವಾಗಿದೆ. ಈ ಮೊದಲು ರಾಜಣ್ಣ ಜನಾರ್ದನ ರೆಡ್ಡಿ ಆರಂಭಿಸಿದ್ದ ಎನೋಬಲ್ ಇಂಡಿಯಾದಲ್ಲಿ ಕೆಲಸ ಮಾಡಿದ್ದರು.

ಬಳ್ಳಾರಿಯಲ್ಲಿ ರಾಜಣ್ಣ ಕುಡಿಯುವ ನೀರಿನ ಬಾಟಲ್ ಪ್ಲಾಂಟ್ ಮತ್ತು ಮೊಬೈಲ್ ಶಾಪ್‌ಗಳನ್ನು ಹೊಂದಿದ್ದಾರೆ. ಹಲವಾರು ವರ್ಷಗಳಿಂದ ಬಿ. ಶ್ರೀರಾಮುಲು ಜೊತೆ ಗುರುತಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರ ವಿಚಾರಣೆ ಬಳಿಕ ವಂಚನೆ ಆರೋಪದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬರಲಿದೆ.

35 ವರ್ಷದ ರಾಜು ಅಲಿಯಾಸ್ ರಾಜಣ್ಣ ಬಿ. ವೈ. ವಿಜಯೇಂದ್ರ ತನಗೆ ಆಪ್ತರೆಂದು ಹೇಳಿಕೊಳ್ಳುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ಉದ್ಯಮಿಯೊಬ್ಬರ ಬಳಿ ಕೆಲವೇ ದಿನಗಳ ಹಿಂದೆ ಹಣ ಪಡೆದಿದ್ದರು.

ವರ್ಗಾವಣೆ ಮಾಡಿಸಿಕೊಡುವುದಾಗಿ ಹಲವಾರು ಅಧಿಕಾರಿಗಳ ಬಳಿ ಹಣ ಪಡೆದಿದ್ದಾರೆ ಎಂಬ ಆರೋಪ ಸಹ ಇದೆ. ಉದ್ಯಮಿಯೊಬ್ಬರ ಜೊತೆ ರಾಜಣ್ಣ ನಡೆಸಿದ ಮಾತುಕತೆಯ ಆಡಿಯೋ ಕೆಲವು ದಿನಗಳ ಹಿಂದೆ ಲೀಕ್ ಆಗಿತ್ತು.

ವಿಜಯೇಂದ್ರ ಮೂಲಕವೇ ನಿಮಗೆ ಹಣ ಕೊಡಿಸುತ್ತೇನೆ ಎಂದು ಆಡಿಯೋದಲ್ಲಿ ಹೇಳಿದ್ದರು. ಇದನ್ನು ನಂಬಿದ್ದ ಉದ್ಯಮಿ ಹಣವನ್ನು ಸಹ ನೀಡಿದ್ದರು. ಇದು ವಿಜಯೇಂದ್ರ ಗಮನಕ್ಕೆ ಬಂದ ಬಳಿಕ ದೂರನ್ನು ನೀಡಲಾಗಿತ್ತು.

Central Crime Branch sleuths arrested Social Welfare Minister B Sriramulu's PA for misusing the CM's son BY Vijendra name and cheating people worth crores. It is said that Rajanna had taken money from a number of people on the pretext of getting their work done and he allegedly used the names of Minister Sriramulu and CM's son Vijayendra saying that he shares good equations with them.