ಬ್ರೇಕಿಂಗ್ ನ್ಯೂಸ್
03-07-21 12:05 pm Headline Karnataka News Network ಕರ್ನಾಟಕ
ಚಿಕ್ಕಮಗಳೂರು, ಜುಲೈ 3: ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮತ್ತು ಶಾಸಕ ಎಂ.ಪಿ ಕುಮಾರಸ್ವಾಮಿ ಅವರನ್ನು ಮೂಡಿಗೆರೆ ತಾಲೂಕಿನ ಮಲೆಮನೆಯ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
2019ರಲ್ಲಿ ಮಹಾಮಳೆಗೆ ಗುಡ್ಡ ಕುಸಿದು ಮನೆಗಳು ಮತ್ತು ಅಪಾರ ಆಸ್ತಿಯನ್ನು ಕಳಕೊಂಡಿದ್ದ ನಿವಾಸಿಗಳು ತಮಗೆ ಮನೆ ಕಟ್ಟಿ ಕೊಡದ ಸರಕಾರಿ ಅಧಿಕಾರಿಗಳ ಸಚಿವರು ಮತ್ತು ಶಾಸಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂರು ವರ್ಷವಾದರೂ ಮನೆಕಟ್ಟಿ ಕೊಟ್ಟಿಲ್ಲ. ಪ್ರತಿ ಬಾರಿ ಅಧಿಕಾರಿಗಳಿಗೆ, ಶಾಸಕರಿಗೆ ಮನವಿ ಕೊಡುವುದೇ ಆಯ್ತು. ಅಂದು ಸಿಎಂ ಬಂದು ಆಶ್ವಾಸನೆ ಕೊಟ್ಟು ಹೋಗಿದ್ದರು. ಯಾವುದೇ ಪರಿಹಾರವೂ ಸಿಕ್ಕಿಲ್ಲ. ಮನೆ ಕಟ್ಟಿ ಕೊಡುತ್ತೇವೆ ಎಂದಿದ್ದೂ ಆಗಿಲ್ಲ. ಆಗಲ್ಲ ಅಂದ್ರೆ ಹಾಗೇ ಹೇಳಿ. ಹೇಗೋ ಭಿಕ್ಷೆ ಬೇಡಿ ಬದುಕುತ್ತೇವೆ. ನೀವು ಮತ್ತೆ ಆಶ್ವಾಸನೆಯ ಮಾತುಗಳನ್ನು ಆಡಬೇಡಿ ಎಂದು ಸಂತ್ರಸ್ತರು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
2019ರಲ್ಲಿ ಮಳೆಗಾಲದಲ್ಲಿ ಮಲೆಮನೆ, ಮಧುಗಿರಿ ಬೆಟ್ಟಗಳು ಕುಸಿದು ಅಲ್ಲಿನ ತಪ್ಪಲು ಭಾಗದಲ್ಲಿದ್ದ 5 ಮನೆಗಳು ಮತ್ತು 40 ಎಕರೆ ಜಮೀನು ಸಂಪೂರ್ಣ ಕೊಚ್ಚಿ ಹೋಗಿತ್ತು. ಪ್ರವಾಹದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ್ದ ಸಿಎಂ ಯಡಿಯೂರಪ್ಪ ಮನೆ ಕಟ್ಟಿಕೊಡುವ ಭರವಸೆ ನೀಡಿ ಹೋಗಿದ್ದರು. ಆದರೆ ಇಲ್ಲಿಯವರೆಗೂ ಸಂತ್ರಸ್ತರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದ ಕಾರಣ, ಈ ಬಾರಿ ಹೊಸತಾಗಿ ಸಚಿವರಾಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಅಂಗಾರ ಅವರಲ್ಲಿ ಜನರು ತಮ್ಮ ಅಹವಾಲು ಹೇಳಿಕೊಂಡಿದ್ದಾರೆ.
ಎತ್ತಿನಹೊಳೆ ಯೋಜನೆಯೇ ಕಾರಣ !
ಅಂದು ಕೊಡಗು, ಚಿಕ್ಕಮಗಳೂರು ಮತ್ತು ಬೆಳ್ತಂಗಡಿ ಭಾಗದಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು ಭಾರೀ ಭೂಕುಸಿತ ರೀತಿಯ ಘಟನೆಗಳು ನಡೆದಿದ್ದು ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜನರನ್ನು ಆತಂಕಕ್ಕೆ ಈಡು ಮಾಡಿತ್ತು. ಆನಂತರ ಈ ಬಗ್ಗೆ ಅಧ್ಯಯನ ನಡೆಸಿದ್ದ ತಜ್ಞರು ಪಶ್ಚಿಮ ಘಟ್ಟಗಳಲ್ಲಿ ಮಾನವ ಕೃತ ಯೋಜನೆಗಳೇ ಈ ರೀತಿಯ ಅನಾಹುತಕ್ಕೆ ಕಾರಣ ಎಂದಿದ್ದರು. ಪರೋಕ್ಷವಾಗಿ ಎತ್ತಿನಹೊಳೆ ಯೋಜನೆ ಬಗ್ಗೆ ಬೊಟ್ಟು ಮಾಡಿದ್ದರು. ಈ ಯೋಜನೆ ಕೈಗೆತ್ತಿಕೊಂಡು ಸಾವಿರಾರು ಹೆಕ್ಟೇರ್ ವ್ಯಾಪ್ತಿಯಲ್ಲಿ ಅರಣ್ಯ ನಾಶ ಮಾಡಿದ್ದು ಮತ್ತು ಅಲ್ಲಿನ ಬೆಟ್ಟಗಳನ್ನು ಅಗೆದು ಅಣೆಕಟ್ಟು ಕಟ್ಟಿ ಅರಣ್ಯ ಭಾಗದ ಸಹಜ ನೀರಿನ ಇಂಗುವಿಕೆಗೆ ತಡೆ ಹಾಕಿದ್ದು ಈ ರೀತಿಯ ವೈಪರೀತ್ಯಕ್ಕೆ ಕಾರಣವಾಗಿತ್ತು. ಸರಕಾರದ ಅವೈಜ್ಞಾನಿಕ ನೀತಿಗಳ ಪರಿಣಾಮ ಸಾಮಾನ್ಯ ಜನರು ಬೆಲೆ ತೆರುವಂತಾಗಿದೆ. ಈಗ ಶಾಸಕರು, ಸಚಿವರಿಗೆ ಅದರ ಬಿಸಿ ಮುಟ್ಟತೊಡಗಿದ್ದರೆ ಅದರಲ್ಲಿ ಅಚ್ಚರಿಯಿಲ್ಲ. ಪ್ರತಿ ಮಳೆಗಾಲದಲ್ಲಿ ಅಲ್ಲಿನ ಜನರು ಆತಂಕದಲ್ಲಿ ಜೀವನ ನಡೆಸುವ ಸ್ಥಿತಿ ಎದುರಾಗಿದ್ದರೆ ಅದಕ್ಕೆ ಸರಕಾರದ ಅವೈಜ್ಞಾನಿಕ ನೀತಿಗಳು ಮತ್ತು ನಿರ್ಲಜ್ಜ ಅಧಿಕಾರಸ್ಥರೇ ಕಾರಣ ಎನ್ನುವ ಸತ್ಯ ಸಾಬೀತಾಗುತ್ತಿದೆ.
Video:
Chikmagalur Malemane hill cracks public slam Minister Angara and Kumaraswamy for showing negligence over reconstructing houses which are damaged after the dall of rocks on houses.
11-02-25 11:12 pm
Bangalore Correspondent
R Ashok, CM Siddaramaiah, Mysuru Fight: ಒಳಿತು...
11-02-25 10:57 pm
Bjp Sandeep Reddy, Dr Sudhakar: ನಿನ್ನ ಅಕ್ರಮಗಳ...
11-02-25 10:34 pm
Mysuru Fight, Crime Update: ಉದಯಗಿರಿ ಠಾಣೆಗೆ ಖಾ...
11-02-25 03:40 pm
NAACbribery case: ನ್ಯಾಕ್ ಮಾನ್ಯತೆಗಾಗಿ ಭ್ರಷ್ಟಾಚ...
11-02-25 02:21 pm
11-02-25 04:19 pm
HK News Desk
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
ಮೆಕ್ಸಿಕೋ ; ಟ್ರಕ್ ಡಿಕ್ಕಿ ಹೊಡೆದು ಹೊತ್ತಿ ಉರಿದ ಬಸ...
09-02-25 09:32 pm
Delhi Election Results 2025, BJP Win; ದೆಹಲಿಯಲ...
08-02-25 02:23 pm
11-02-25 07:44 pm
Mangalore Correspondent
Ashok Rai, Temple, Nalin Kateel : ನಳಿನ್ ಅವರೇ...
11-02-25 04:50 pm
Mangalore, Brijesh Chowta, Wenlock hospital:...
10-02-25 11:09 pm
Drone, Puttur Konark Rai, Indian Army: ಆಕಾಶದಿ...
10-02-25 10:34 pm
Mangalore News, Wenlock hospital, operation:...
09-02-25 11:03 pm
11-02-25 06:41 pm
HK News Desk
Mangalore Police, Crime: ಕೊಲೆ ಅಪರಾಧಿಗೆ ಆಶ್ರಯ...
09-02-25 07:35 pm
Bangalore, Udupi crime, Fraud: ಕ್ಯಾಸಿನೋ, ಬಿಟ್...
08-02-25 10:16 pm
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm