ಡ್ರಗ್ಸ್ ದಂಧೆ ಭಯೋತ್ಪಾದನೆಯ ಒಂದು ಭಾಗ: ಪ್ರತಾಪ್ ಸಿಂಹ

02-09-20 07:37 pm       Headline Karnataka News Network   ಕರ್ನಾಟಕ

ಒಂದು ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು. ಅವರ ಮುಂದಿನ ಪೀಳಿಗೆ ಸೇರಿ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ

ಮೈಸೂರು, ಸೆಪ್ಟೆಂಬರ್.2: ಒಂದು ದೇಶವನ್ನ ಹಾಳು ಮಾಡಬೇಕಾದರೆ ಬಾಂಬ್ ಹಾಕಬೇಕಿಲ್ಲ. ಆ ದೇಶದ ಯುವಕರನ್ನ ಮಾದಕ ವ್ಯಸನಿಗಳನ್ನಾಗಿ ಮಾಡಿದರೆ ಸಾಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಭಯೋತ್ಪಾದನೆಯ ಒಂದು ಭಾಗವಾಗಿದೆ.  ಅವರ ಮುಂದಿನ ಪೀಳಿಗೆ ಸೇರಿ ಇಡೀ ಕುಟುಂಬವನ್ನ ಸರ್ವನಾಶವಾಗಿಸಿ ಬಿಡುತ್ತದೆ. ಈ ದಂಧೆ ಕೇವಲ ಸ್ಯಾಂಡಲ್‍ವುಡ್ ಬಾಲಿವುಡ್ ಅಷ್ಟೇ ಸೀಮಿತವಾಗಿಲ್ಲ. ಎಲ್ಲ ಕಡೆ ಡ್ರಗ್ಸ್ ಹಾಗೂ ಗಾಂಜಾ ಸಿಗುತ್ತಿದೆ. ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದರು.

ಈ ಘಟನೆಯನ್ನ ಎಚ್ಚರಿಕೆ ಪಾಠವಾಗಿ ಭಾವಿಸಿ ಡ್ರಗ್ಸ್ ನಿರ್ನಾಮ ಮಾಡಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ. ಯಾವ ದೇಶದ ಯಾವ ಪೆಡ್ಲರ್‌ಗಳು ಇದ್ದಾರೆ ಅವರೆಲ್ಲರನ್ನ ಬಂಧಿಸಬೇಕು. ಡ್ರಗ್ಸ್ ಬಗ್ಗೆ ಮಾಹಿತಿ ಇರುವವರು ಮಾಹಿತಿ ಕೊಡಿ. ಎಲ್ಲ ಕಡೆ ರೇಡ್ ಆಗಲಿ, ಡ್ರಗ್ಸ್ ವಿರುದ್ಧ ನಾವೆಲ್ಲರೂ ಹೋರಾಟ ಮಾಡಬೇಕು. ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಗೃಹಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು