ಡಿಜಿಪಿ ಆರ್.ಪಿ. ಶರ್ಮಾಗೆ ಗುಂಡೇಟು ; ಮಿಸ್ ಫೈರ್ ಆಗಿತ್ತಾ ?! ಬೇರೆ ಕಾರಣ ಇದ್ಯಾ ? 

03-09-20 10:10 am       Bangalore Correspondent   ಕರ್ನಾಟಕ

ಹಿರಿಯ ಐಪಿಎಸ್ ಅಧಿಕಾರಿ, ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿ ಆಗಿರುವ ಆರ್.ಪಿ ಶರ್ಮಾ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 3: ಹಿರಿಯ ಐಪಿಎಸ್ ಅಧಿಕಾರಿ, ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿ ಆಗಿರುವ ಆರ್.ಪಿ ಶರ್ಮಾ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ. ನಿನ್ನೆ ಸಂಜೆ ಘಟನೆ ನಡೆದಿದ್ದು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಅವರನ್ನು ದಾಖಲು ಮಾಡಲಾಗಿದೆ. 

ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸದಲ್ಲಿ ಶರ್ಮಾ ಇದ್ದ ವೇಳೆ, ಅವರಿಗೆ ಗುಂಡು ತಗುಲಿದೆ. ಸಂಜೆ ವೇಳೆಗೆ ಮನೆಯಿಂದ ಗುಂಡಿನ ಶಬ್ದ ಕೇಳಿಬಂದಿದ್ದು ಸಹಾಯಕ ಸಿಬಂದಿ ತೆರಳಿ ನೋಡಿದಾಗ ಶರ್ಮಾ ರಕ್ತದಿಂದ ತೋಯ್ದು ಹೋಗಿದ್ದರು. ಕೂಡಲೇ ಶರ್ಮಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ವೇಳೆ ಅವರ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗ್ತಿದೆ. 

ಅಧಿಕಾರಿ ವಿರುದ್ಧ ಶಿಸ್ತು ಕ್ರಮಕ್ಕೆ ಸಿಎಂ ಸೂಚನೆ

ಆರ್ ಪಿ ಶರ್ಮ ಅವರಿಗೆ ಗುಂಡೇಟು ತಗುಲಿದ ಪ್ರಕರಣದಲ್ಲಿ ಸಿಎಂ ಶಿಸ್ತು ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಇಲಾಖೆಯ ಉನ್ನತ ಮೂಲಗಳ  ಮಾಹಿತಿ ಪ್ರಕಾರ, ಶರ್ಮಾ ಅವರು ತಮ್ಮ ಪಿಸ್ತೂಲ್ ಸ್ವಚ್ಛಗೊಳಿಸುತ್ತಿದ್ದಾಗ ಮಿಸ್ ಫೈರ್ ಆಗಿದೆ ಎನ್ನಲಾಗುತ್ತಿದೆ. ಹೀಗಾಗಿ ಐಪಿಎಸ್ ಅಧಿಕಾರಿಯ ನಿರ್ಲಕ್ಷ್ಯದ ಬಗ್ಗೆ ಶಿಸ್ತು ಕ್ರಮಕ್ಕೆ ಸಿಎಂ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ. 

ಸದ್ಯ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಶರ್ಮಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪೊಲೀಸ್ ಹೌಸಿಂಗ್ ಬೋರ್ಡ್‌ ಮುಖ್ಯಸ್ಥರಾಗಿದ್ದ ಆರ್‌. ಪಿ. ಶರ್ಮಾ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗ್ತಿದೆ. ಹೀಗಾಗಿ ಮಿಸ್ ಫೈರ್ ಆಗಿದೆಯೋ, ಸುಸೈಡ್ ಎಟಂಪ್ಟ್ ಆಗಿತ್ತೇ ಅಥವಾ ಘಟನೆಯಲ್ಲಿ ಇನ್ಯಾರದ್ದೇ ಕೈವಾಡ ಇದ್ದಿರಬಹುದೇ ಎನ್ನುವ ಬಗ್ಗೆಯೂ ತನಿಖೆ ನಡೆಯಲಿದೆ.

Join our WhatsApp group for latest news updates