ಮಂಗಳೂರು - ಬೆಂಗಳೂರು ರೈಲು ಯಾನಕ್ಕೆ ಗ್ರೀನ್ ಸಿಗ್ನಲ್

04-09-20 12:19 pm       Headline Karnataka News Network   ಕರ್ನಾಟಕ

ಕೊರೋನಾ ಲಾಕ್ ಡೌನ್ ಬಳಿಕ ಮಂಗಳೂರಿನಿಂದ ಬೆಂಗಳೂರು ಮಧ್ಯ ಸಂಚರಿಸುವ ರೈಲಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ .

ಮಂಗಳೂರು, ಸೆಪ್ಟೆಂಬರ್ 4 : ಕೊರೊನಾ ಲಾಕ್ ಡೌನ್ ಬಳಿಕ ಸ್ಥಗಿತಗೊಂಡಿದ್ದ ರೈಲು ಯಾನವನ್ನು ಮತ್ತೆ ಪುನರಾರಂಭಿಸಲು ರೈಲ್ವೇ ಸಚಿವಾಲಯ ಅನುಮತಿ ನೀಡಿದೆ. ಆದರೆ, ಆರಂಭದಲ್ಲಿ ಹಿಂದಿನ ವೇಳಾಪಟ್ಟಿಯ ಬದಲು ಪರೀಕ್ಷಾರ್ಥ ರೈಲು ಸಂಚಾರ ನಡೆಯಲಿದೆ. 

ಅದರಂತೆ, ಬೆಂಗಳೂರು - ಮಂಗಳೂರು ಮಧ್ಯ ಸಂಚರಿಸುವ ರೈಲಿಗೆ ಗ್ರೀನ್ ಸಿಕ್ಕಿದೆ. ಯಶವಂತಪುರ - ಕಾರವಾರ ವಯಾ ಮಂಗಳೂರು ರೈಲು ಇಂದು (ಸೆ.4) ಸಂಜೆ 6.45ಕ್ಕೆ ಬೆಂಗಳೂರಿನ ಯಶವಂತಪುರದಿಂದ ಹೊರಡಲಿದೆ. ಹಾಗೆಯೇ ರೈಲು ಸಂಖ್ಯೆ 06515 ಬೆಂಗಳೂರು ಸಿಟಿ - ಮಂಗಳೂರು (ವಾರದಲ್ಲಿ 4 ದಿನ) ಸೆ.4ರಿಂದ ಹಾಗೂ ಮಂಗಳೂರು - ಬೆಂಗಳೂರು ಸಂಚರಿಸುವ ರೈಲು (ಸಂಖ್ಯೆ 06516 ) ಸೆ.6ರಿಂದ ಸಂಚಾರ ನಡೆಸಲಿದೆ. ಪರೀಕ್ಷಾರ್ಥ ನಡೆಯುವ ಈ ವಿಶೇಷ ರೈಲು ಯಾನ ಮುಂದಿನ ಆದೇಶದ ವರೆಗೆ ರೈಲು ಸೇವೆ ನೀಡಲಿದೆ.

ಅಲ್ಲದೆ, ಈ ರೈಲಿನಲ್ಲಿ ಪ್ರಯಾಣಿಸಲು ಮುಂಗಡ ಬುಕ್ಕಿಂಗ್ ಮಾಡುವುದು ಅಗತ್ಯವಾಗಿದೆ. ರೈಲು ಯಾನದಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಯಾಣದಲ್ಲಿ ತೊಂದರೆ ಕಂಡುಬರದಿದ್ದಲ್ಲಿ ರೈಲು ಸೇವೆ ಇನ್ನು ಕೆಲವೇ ದಿನಗಳಲ್ಲಿ ಯಥಾಸ್ಥಿತಿಗೆ ಬರುವ ನಿರೀಕ್ಷೆಯಿದೆ.

Join our WhatsApp group for latest news updates