ಬ್ರೇಕಿಂಗ್ ನ್ಯೂಸ್
28-09-21 10:40 pm Headline Karnataka News Network ಕರ್ನಾಟಕ
ಬಾಗಲಕೋಟೆ, ಸೆ.28: ಆರೆಸ್ಸೆಸ್ ನವರದ್ದು ತಾಲಿಬಾನಿಗಳದ್ದೇ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಯಾರಿಗೆ ನಂಬಿಕೆ ಇಲ್ಲವೋ, ಪಾರ್ಲಿಮೆಂಟರಿ ಸಿಸ್ಟಮ್ ನಲ್ಲಿ ಯಾರಿಗೆ ನಂಬಿಕೆ ಇಲ್ಲವೋ.. ಅವರೆಲ್ಲ ತಾಲಿಬಾನಿಗಳು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮನುಷ್ಯತ್ವ ಇಲ್ಲದೆ ಇರುವವರು, ರಾಕ್ಷಸಿ ಪ್ರವೃತ್ತಿ ಇರತಕ್ಕಂತವರು ಅವರೆಲ್ಲ ತಾಲಿಬಾನಿಗಳು. ಅದಕ್ಕೆ ಅವರಿಗೆ ತಾಲಿಬಾನಿಗಳು ಅಂತ ಕರೆದಿರೋದು. ಆರ್ ಎಸ್ ಎಸ್ ನವರು ರಾಕ್ಷಸಿ ಪ್ರವೃತ್ತಿ, ಮನುಷ್ಯತ್ವ ಇಲ್ಲದಿರುವವರು ಎಂದು ಸಿದ್ದು ಮೂದಲಿಸಿದರು.
ಬಿಜೆಪಿಯವರಿಗೆ ಮನುಷ್ಯತ್ವವೇ ಇಲ್ಲ. ಪ್ರಜಾಪ್ರಭುತ್ವದಲ್ಲಿ ಅಥವಾ ಸಂವಿಧಾನದಲ್ಲಿ ಅವ್ರಿಗೆ ನಂಬಿಕೆ ಇದಿಯಾ ? ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಕೊಟ್ಟಿದ್ದು, ಅದರ ಪ್ರಕಾರ ಆಡಳಿತ ನಡೆಸಿ ಅಂತೇಳಿ. ಆದ್ರೆ ಆ ಪ್ರಕಾರ ಅವ್ರು ಆಡಳಿತ ನಡೆಸೋದಿಲ್ಲ. ಅದಕ್ಕೆ ಅವ್ರಿಗೆ ತಾಲಿಬಾನಿಗಳು, ಹಿಟ್ಲರ್ ವಂಶಸ್ಥರು ಅಂತಾ ನಾನು ಕರೆಯೋದು ಎಂದು ಕಿಡಿಕಾರಿದರು.
ಆರೆಸ್ಸೆಸ್ ಇರದೇ ಇದ್ದಿದ್ರೆ ಇವ್ರೆಲ್ಲ ನೇತಾಡ್ತಿದ್ರು ಎಂಬ ಸಿಟಿ ರವಿ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದೇಶಕ್ಕೆ ಸ್ವಾತಂತ್ರ್ಯ ಆರ್ ಎಸ್ ಎಸ್ ನಿಂದ ಬಂದಿದಿಯಾ? ಸ್ವಾತಂತ್ರ್ಯ ಬಂದಿದ್ದು ಯಾರಿಂದ ಹೇಳಿ ? ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆರ್ಎಸ್ಎಸ್‌ನಿಂದ ಅಥವಾ ಗೋಳ್ವಲ್ಕರ್ ಅವರಿಂದ ಅಲ್ಲ.. ಮಹಾತ್ಮಾ ಗಾಂಧಿಜಿ, ಗೋಖಲೆ, ತಿಲಕ್, ಲಾಲಾ ಲಜಪತ್ ರಾಯ್, ನೆಹರೂ ಅವ್ರಿಂದ ಸಿಕ್ಕಿದ್ದು ಗೊತ್ತಾಯ್ತಾ.. ಗೋಡ್ಸೆಯಿಂದ ಈ ದೇಶಕ್ಕೆ ಸ್ವಾತಂತ್ರ್ಯ ಬಂದಿದಿಯಾ? ಸಾವರ್ಕರ ಅವ್ರಿಂದ ಸ್ವಾತಂತ್ರ್ಯ ಬಂದಿತ್ತಾ ? ಇತಿಹಾಸ ಗೊತ್ತಿಲ್ಲ ಪಾಪ ಅವುಗಳಿಗೆ..
ಪ್ರಾಣ ಕಳೆದುಕೊಂಡವರು ಯಾರು ? ಸ್ವಾತಂತ್ರ್ಯ ತಂದುಕೊಟ್ಟಿದ್ದರಲ್ಲಿ ಆರೆಸ್ಸೆಸ್ ಪಾತ್ರವೇನು? ಬೇಡ ಬಿಡಿ, ಇವರಲ್ಲಿ ಯಾರಾದ್ರೂ ಒಬ್ರಾದ್ರೂ ದೇಶಕ್ಕೋಸ್ಕರ ಸತ್ತಿದ್ದಾರೆಯೇ ? ನಿಮ್ಮಲ್ಲಿ ದೇಶಕ್ಕಾಗಿ ಯಾರು ಸತ್ತಿದ್ದಾರೆಂದು ಸಿಟಿ ರವಿಗೆ ಕೇಳಿ ನೋಡಿ.. ಮಹಾತ್ಮಾ ಗಾಂಧೀಜಿಯನ್ನು ದಕ್ಷಿಣ ಆಫ್ರಿಕಾದಿಂದ ಕರೆತಂದವ್ರು ಯಾರು? ಗಾಂಧೀಜಿಯವ್ರನ್ನು ಕರೆತಂದವ್ರು ಗೋಖಲೆ ಅವರು. ಆರೆಸ್ಸೆಸ್ ನವ್ರು ಗಾಂಧೀಜಿಯನ್ನು ಕರೆತಂದ್ರಾ ದೇಶಭಕ್ತಿ ಅಂದ್ರೆ ಬಾಯಲ್ಲಿ ಹೇಳೋದಾ. ದೇಶಕ್ಕೋಸ್ಕರ ಪ್ರಾಣ, ಬಲಿದಾನ, ತ್ಯಾಗ ಮಾಡಿದವ್ರು ದೇಶಭಕ್ತರು. ನಾವು ಸಿಟಿ ರವಿ ಅವ್ರಿಂದ ದೇಶಭಕ್ತಿ ಪಾಠ ಕಲಿಬೇಕಾ ಎಂದು ಪ್ರಶ್ನೆ ಮಾಡಿದರು.
Former CM and Leader of Opposition Siddaramaiah defended his statement that the RSS follows Taliban culture. “Yes. I made the statement and I stand by it. RSS does not believe in democratic values. It's leaders and members have no faith in human values. They act like demons while enforcing their communal, divisive ideology. I strongly believe that those who don’t have faith in in democratic values or in a parliamentary democracy or don’t treat other human beings as equals are Talibanis. That is why I described the RSS as Talibanis,” the Congress leader told journalists in Badami in Bagalkot district on September 28.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm