ಬ್ರೇಕಿಂಗ್ ನ್ಯೂಸ್
30-10-21 05:55 pm Headline Karnataka News Network ಕರ್ನಾಟಕ
ಬೆಂಗಳೂರು, ಅ.30: ಕನ್ನಡ ಚಿತ್ರರಂಗ ಮರೆಯಲಾಗದ ಮಾಣಿಕ್ಯ ಮರೆಯಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳ ಪಾಲಿನ ಅಪ್ಪು ಬಾರದ ಲೋಕಕ್ಕೆ ಹೋಗಿದ್ದಾರೆ. ಆದರೆ, ಕೊನೆಯ ಬಾರಿಗೆ ನಿನ್ನೆ ಶುಕ್ರವಾರ ಬೆಳಗ್ಗೆ 11.20ಕ್ಕೆ ಪುನೀತ್ ತನ್ನ ಪತ್ನಿಯ ಜೊತೆ ಫ್ಯಾಮಿಲಿ ಡಾಕ್ಟರ್ ರಮಣ ರಾವ್ ಬಳಿ ಬಂದಿದ್ದರು. ಆಗ ಚೆನ್ನಾಗಿಯೇ ಇದ್ದ ಪುನೀತ್ ಆನಂತರ ಬದುಕಿದ್ದು ಕೇವಲ ಹತ್ತು ನಿಮಿಷ ಆಗಿತ್ತು. ಈ ಬಗ್ಗೆ ಡಾಕ್ಟರ್ ರಮಣ ರಾವ್ ಏನು ಹೇಳ್ತಾರೆ ನೋಡಿ..
ಪುನೀತ್ ಬರುತ್ತಲೇ ಏನೋ ಬೆವರುತ್ತಿದೆ ಎಂದು ಹೇಳಿದ್ರು. ಆಗಲೇ ಗಂಟೆ 11.20 ಆಗಿತ್ತು. ಬೆಳಗ್ಗಿನಿಂದ ಯಾವತ್ತಿನ ರೀತಿಯಲ್ಲೇ ಜಿಮ್ ಅಭ್ಯಾಸದಲ್ಲಿದ್ದೆ. ನಿನ್ನೆಯಿಂದಲೂ ಸ್ವಲ್ಪ ಬೆವರು ಜಾಸ್ತಿಯಿದೆ ಎಂದಿದ್ರು. ಕೂಡಲೇ ಇಸಿಜಿ ಮಾಡಿದ್ದೇನೆ. ನೋಡಿದರೆ, ಬಿಪಿ, ಬೇರೆಲ್ಲಾ ನಾರ್ಮಲ್ ಆಗೇ ಇತ್ತು. ಆದರೆ, ತೀವ್ರ ಬೆವರುತ್ತಿದ್ದುದರಿಂದ ಹಾರ್ಟ್ ಏನೋ ತುಂಬ ಸ್ಟ್ರೈನ್ ಇದ್ದುದು ಕಂಡುಬಂದಿತ್ತು. ಕೂಡಲೇ ಹಾಸ್ಟಿಟಲ್ ಆಗಬೇಕೆಂದು ಹೇಳಿದ್ದೇನೆ. ಹೊರಬರುತ್ತಲೇ ಅಪ್ಪು ಹೇಳಿದ್ರು, ತನಗೇನೋ ನಡೆಯೋಕೆ ಆಗ್ತಾ ಇಲ್ಲ. ಆಯಾಸ ಆಗ್ತಿದೆ ಎಂದಿದ್ರು.
ಕೂಡಲೇ ಕಾರಿನಲ್ಲಿ ಅವರನ್ನು ಮಲಗಿಸಿಯೇ ವಿಕ್ರಂ ಆಸ್ಪತ್ರೆಗೆ ಒಯ್ಯಲಾಗಿತ್ತು. ಕೇವಲ ಐದು ನಿಮಿಷದಲ್ಲಿ ಅವರು ಆಸ್ಪತ್ರೆ ಮುಟ್ಟಿದ್ದಾರೆ. ಆದರೆ, ಅದಾಗಲೇ ಡೆತ್ ಆಗಿತ್ತು. ಅವರಿಗೆ ಬೇರಾವುದೇ ತೊಂದರೆ ಇರಲಿಲ್ಲ. ಶುಗರ್ ಇನ್ನಿತರ ಯಾವುದೇ ಪ್ರಾಬ್ಲಂ ಇರಲಿಲ್ಲ. ಅಪ್ಪು ತಮ್ಮ ಬಾಡಿಯನ್ನು ಸೂಪರ್ ಆಗಿ ಮೇಂಟೇನ್ ಮಾಡಿಕೊಂಡಿದ್ದರು. ಆದರೆ, ಈ ಸಡನ್ ಡೆತ್ ಅನ್ನುವುದು ಯಾವ ಸಂದರ್ಭದಲ್ಲಿಯೂ ಆಗಬಹುದು. ಅದು ಹಾರ್ಟ್ ಅಟ್ಯಾಕ್ ಅಲ್ಲ. ಹಾರ್ಟ್ ಅಟ್ಯಾಕ್ ಆಗಿದ್ದರೆ ತುಂಬ ನೋವು ಬರುತ್ತದೆ. ಡಯಾಬಿಟೀಸ್ ಇದ್ದರೆ ಅಷ್ಟು ನೋವು ಇರೋದಿಲ್ಲ. ಆದರೆ ಅಪ್ಪುವಿಗೆ ಅದೇನೂ ಇರಲಿಲ್ಲ. ಕಾರ್ಡಿಯಾಕ್ ಅರೆಸ್ಟ್ ಆಗೋ ಮೂಲಕ ಹೃದಯ ಸ್ತಂಭನ ಆಗಿರಬೇಕು ಅನಿಸ್ತಿದೆ.
ಈ ರೀತಿಯ ಸಡನ್ ಡೆತ್ ಆಗುವಾಗ ಯಾವುದೇ ಮುನ್ಸೂಚನೆ ಇರೋದಿಲ್ಲ. ಒಮ್ಮೆಲೇ ಅತಿ ಹೆಚ್ಚು ಆಕ್ಟಿವಿಟಿ ಮಾಡಿದ್ರೆ, ಹೃದಯ ಕವಾಟಗಳಿಗೆ ಪೆಟ್ಟು ಬಿದ್ದು ಈ ರೀತಿ ಆಗುತ್ತದೆ. ಹಾರ್ಟ್ ಒಳಗಿನ ಕವಾಟ ಒಡೆದು ರಕ್ತ ಸೋರಿಕೆಯಾಗಿ ಒಂದೆರಡು ಗಂಟೆಯಲ್ಲಿ ನಿಧಾನಕ್ಕೆ ಡೆತ್ ಆಗುತ್ತದೆ. ಅದರಲ್ಲಿ ಯಾವುದೇ ರೀತಿಯ ಲಕ್ಷಣ ಕಂಡುಬರುವುದಿಲ್ಲ. ಕಾರ್ಡಿಯಾಕ್ ಅರೆಸ್ಟ್ ಅನ್ನುವುದು ಅಷ್ಟೇ ಎಂದು ರಮಣ ರಾವ್ ಹೇಳುತ್ತಾರೆ.
ಆದರೆ, ಪುನೀತ್ ದಿನವೂ ಜಿಮ್ ಇನ್ನಿತರ ತರಬೇತಿ ಮಾಡಿಕೊಳ್ಳುತ್ತಿದ್ದರು. ದೇಹವನ್ನು ಸಮತೂಕದಲ್ಲಿ ಇರಿಸಲು ಕಸರತ್ತು ಮಾಡುತ್ತಿದ್ದ ವ್ಯಕ್ತಿಗೇ ಈ ರೀತಿ ಸಾಧ್ಯವೇ ಎನ್ನುವ ಪ್ರಶ್ನೆಗೆ ಡಾಕ್ಟರ್ ಹೇಳೋದು ಹೀಗೆ.. ಅಪ್ಪು ದೇಹವನ್ನು ತುಂಬ ದಂಡಿಸುತ್ತಿದ್ದರು. ಅದಲ್ಲದೆ ದೇಹದ ಬಗ್ಗೆ ತುಂಬ ಕೇರ್ ಇಟ್ಟುಕೊಳ್ಳುತ್ತಿದ್ದರು. ಅವರಿಗೆ ಈ ರೀತಿ ಆಗಿದ್ದು ನಮಗೂ ಅಚ್ಚರಿ ತಂದಿದೆ. ಆದರೆ, ಕಾರ್ಡಿಯಾಕ್ ಅರೆಸ್ಟ್ ಅನ್ನುವುದು ಯಾರಿಗೂ ಆಗಬಹುದು. ಇಂಥದ್ದೇ ಕಾರಣ ಎಂದು ಹೇಳೋಕೆ ಬರಲ್ಲ.
ಪುನೀತ್ ಅವರು ಕೊರೊನಾ ಬಗ್ಗೆಯೂ ಕಾಳಜಿ ಹೊಂದಿದ್ದರು. ಅದಕ್ಕಾಗಿ ಮೊದಲೇ ಲಸಿಕೆಯನ್ನೂ ಪಡೆದಿದ್ದರು. ಕೊರೊನಾ ನಿರ್ವಹಣೆ ವಿಚಾರದಲ್ಲಿ ಪುನೀತ್ ಇತರರಿಗೆ ಮಾದರಿ ಅನ್ನುವಂತಿದ್ದರು. ಮತ್ತು ಪುನೀತ್ ಗೆ ಯಾವುದೇ ಹಾರ್ಟ್ ಇನ್ನಿತರ ಸಮಸ್ಯೆಗಳೂ ಇರಲಿಲ್ಲ. ಪುನೀತ್ ಅಗಲಿಕೆಯನ್ನು ನಾವು ನಂಬೋಕೇ ಆಗುತ್ತಿಲ್ಲ. ನನ್ನ ಇಡೀ ಲೈಫ್ ನಲ್ಲಿ ಪುನೀತ್ ಸಾವು ಕಂಡಿದ್ದು ಅರಗಿಸೋಕೇ ಆಗಲ್ಲ. ದಿನವೂ ಆತನ ಬಗ್ಗೆ ಮಾತಾಡ್ತಿದ್ದೆವು. ಕ್ಲಿನಿಕ್, ಮನೆಯಲ್ಲಿ ಎಲ್ಲ ಅಪ್ಪುನದ್ದೇ ಮಾತು ಎಂದು ಅವರ ತಂದೆ ರಾಜಕುಮಾರ್ ಅವರಿಗೂ ಚಿಕಿತ್ಸೆ ನೀಡುತ್ತಿದ್ದ ಡಾ. ರಮಣ ರಾವ್ ಹೇಳುತ್ತಾರೆ.
Puneeth Rajkumar’s heart beat and blood pressure (BP) were normal when he went to his personal physician B. Ramana Rao around 11.20 a.m. on October 29. Dr. Rao, who referred Puneeth to Vikram Hospital after noticing a ‘strain’ in his ECG, said the actor complained of ‘weakness’ when he came to consult him. “He, along with his wife Ashwini, walked into my clinic. He said he had a little weakness. His blood pressure was 150/92, which is normal. He was sweating a bit. When I asked about the sweating, he said it was normal as he had exercised and had come straight from the gym,” Dr. Rao said. “He did not complain of pain, and his heart beat was normal. His lungs were clear. He said he had done his routine exercise, boxing, and had taken a little extra steam.”
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 10:46 pm
Mangalore Correspondent
Mines, Krishnaveni Mangalore, Dinesh gundrao;...
08-02-25 01:08 pm
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
08-02-25 10:16 pm
Bangalore Correspondent
ಕಲಬುರಗಿ | ಪರಸ್ತ್ರೀ ಜೊತೆ ಸುತ್ತಾಡುತ್ತಿದ್ದ ಪತಿಯ...
08-02-25 06:21 pm
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am