ಬ್ರೇಕಿಂಗ್ ನ್ಯೂಸ್
03-11-21 10:35 pm Headline Karnataka News Desk ಕರ್ನಾಟಕ
ಬೆಂಗಳೂರು, ನ.3: ಖ್ಯಾತ ನಟ ಪುನೀತ್ ರಾಜಕುಮಾರ್ ಹಠಾತ್ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಿಮ್ ಸೆಂಟರ್ ಗಳಿಗೆ ಹೃದಯಾಘಾತದ ಸಂದರ್ಭ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಸುಧಾಕರ್, ಜಿಮ್ ಸೆಂಟರ್ ಗಳಲ್ಲಿ ಹೃದಯ ಸಂಬಂಧಿತ ತೊಂದರೆಗಳು ಎದುರಾದಲ್ಲಿ ಯಾವ ರೀತಿಯ ಪ್ರಾಥಮಿಕ ಚಿಕಿತ್ಸೆ ತೆಗೆದುಕೊಳ್ಳಬೇಕು ಮತ್ತು ತರಬೇತುದಾರರು ತುರ್ತು ಅಗತ್ಯಕ್ಕಾಗಿ ಏನೆಲ್ಲಾ ಪರಿಕರಗಳನ್ನು ಹೊಂದಿರಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಲಾಗುವುದು ಎಂದು ಹೇಳಿದ್ದಾರೆ.
ಪುನೀತ್ ಸಾವು ವಿಪರೀತ ಜಿಮ್ ತರಬೇತಿ ಮಾಡುತ್ತಿದ್ದ ಕಾರಣ ಕಾರ್ಡಿಯಾಕ್ ಅರೆಸ್ಟ್ ಆಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ, ಪುನೀತ್ ಸಾವಿನ ಬಳಿಕ ಅನೇಕರು ನನ್ನಲ್ಲಿ ಆರೋಗ್ಯದ ವಿಚಾರದಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಜಿಮ್ ನಲ್ಲಿ ಅಭ್ಯಾಸಗಳನ್ನು ಮಾಡಬಹುದೇ ಅನ್ನುವ ಬಗ್ಗೆ ಆತಂಕದಿಂದ ಕೇಳುತ್ತಿದ್ದಾರೆ. ಇಂಥ ಒಂದೆರಡು ಪ್ರಕರಣದ ಕಾರಣಕ್ಕೆ ಜಿಮ್ ಮಾಡಬಾರದು, ಅದು ಉತ್ತಮವಲ್ಲ ಎಂಬ ನಿರ್ಧಾರಕ್ಕೆ ಬರುವುದು ತಪ್ಪಾಗುತ್ತದೆ. ಈ ಬಗ್ಗೆ ಹೃದಯ ತಜ್ಞರಲ್ಲಿ ಸಂಪೂರ್ಣ ಮಾಹಿತಿ ಕೇಳಿದ್ದು ಹೃದಯಾಘಾತದ ಸಂದರ್ಭ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ತರಿಸಿಕೊಳ್ಳುತ್ತೇನೆ. ಅದರ ಪ್ರಕಾರ ರಾಜ್ಯಾದ್ಯಂತ ಗೈಡ್ ಲೈನ್ಸ್ ತರಲಿದ್ದು ಪ್ರಾಥಮಿಕ ಚಿಕಿತ್ಸೆಗಾಗಿ ಯಾವೆಲ್ಲ ಪರಿಕರ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಲಾಗುವುದು. ಅಲ್ಲದೆ, ತರಬೇತುದಾರರಿಗೆ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತಿಯನ್ನೂ ನೀಡಲಾಗುವುದು ಎಂದು ಹೇಳಿದರು.
ಪುನೀತ್ ಸಾವಿನ ಬಳಿಕ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಫ್ಯಾಮಿಲಿ ಡಾಕ್ಟರ್ ಡಾ. ರಮಣ ರಾವ್, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ವೇಳೆ ಜಿಮ್ ಅಭ್ಯಾಸದಿಂದ ಪುನೀತ್ ಸಾವನ್ನಪ್ಪಿದ್ದಾರೆ ಎಂಬ ಸಾರ್ವಜನಿಕ ಶಂಕೆಯನ್ನು ನಿರಾಕರಿಸಿದ್ದರು. ಪುನೀತ್ ಯಾವುದೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರಲಿಲ್ಲ. ಅಲ್ಲದೆ, ಆತ ಜಿಮ್ ಅಭ್ಯಾಸ ನಡೆಸುವುದು ಇದು ಮೊದಲೂ ಅಲ್ಲ. ಇದೇ ರೀತಿ ಕಳೆದ ಹತ್ತು ವರ್ಷಗಳಿಂದಲೂ ತರಬೇತಿ ಮಾಡಿಕೊಂಡು ಬಂದಿದ್ದರು. ವಿಪರೀತ ತರಬೇತಿ ಮಾಡಿಕೊಂಡಿದ್ದು ಪುನೀತ್ ಸಾವಿಗೆ ಕಾರಣ ಎಂಬ ಮಾತನ್ನು ರಮಣ ರಾವ್ ನಿರಾಕರಿಸಿದ್ದರು. ಆದರೆ ಸಾರ್ವಜನಿಕ ವಲಯದಲ್ಲಿ ಜಿಮ್ ಅಭ್ಯಾಸದ ಬಗ್ಗೆ ಭಾರೀ ಸಂಶಯ ಎದ್ದಿದೆ. ಯಾವುದೇ ಲಕ್ಷಣವೇ ಇಲ್ಲದೆ ಈ ರೀತಿಯಲ್ಲೂ ಸಾವು ಸಂಭವಿಸುತ್ತದೆ ಎನ್ನುವ ಮಾತು ಜಿಮ್ ಅಭ್ಯಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ಕಾರಣಕ್ಕೆ ಆರೋಗ್ಯ ಸಚಿವ ಸುಧಾಕರ್, ಜಿಮ್ ಸೆಂಟರ್ ಗಳಿಗೆಂದೇ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಗಸೂಚಿ ತರುವುದಾಗಿ ಹೇಳಿದ್ದಾರೆ.
Following the death of popular Kannada actor Puneeth Rajkumar, Karnataka Health Minister K Sudhakar indicated that the Karnataka government was working to formulate a comprehensive guideline for gyms and fitness centers. Speaking to reporters, Sudhakar said that the guidelines will dictate what equipment would be present and also ensure that the instructors would be given training on how to perform first aid whenever such heart related emergencies arise
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm