ಬ್ರೇಕಿಂಗ್ ನ್ಯೂಸ್
25-11-21 02:53 pm HK news Desk ಕರ್ನಾಟಕ
ಬೆಂಗಳೂರು, ನ.25: ದಲಿತರ ಕೇರಿಗಳಿಗೆ ಪೇಜಾವರ ಶ್ರೀಗಳ ಭೇಟಿ ಕುರಿತು ಹೇಳಿಕೆ ಸಂಬಂಧ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖರ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಅವರಿಂದು ವಿಚಾರಣೆಗಾಗಿ ನಗರದ ಬಸವನಗುಡಿ ಠಾಣೆಗೆ ಹಾಜರಾಗಿದ್ದಾರೆ.
ಈ ವೇಳೆ ಅವರಿಗೆ ಬೆಂಬಲಾರ್ಥವಾಗಿ ನಟ ಚೇತನ್ ಅಹಿಂಸಾ ಹಾಗೂ ಕೆಲವು ಸಂಘಟನೆಗಳ ಮುಖಂಡರು ಠಾಣೆಗೆ ಆಗಮಿಸಿದ್ದು, ಇದನ್ನು ವಿರೋಧಿಸಿ ಬಜರಂಗದಳ ಕಾರ್ಯಕರ್ತರು ಕೂಡಾ ಠಾಣೆಯೆದುರು ಜಮಾಯಿಸಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
"ಇಂದು ಬಸವನಗುಡಿ ಠಾಣೆಗೆ ಹಾಜರಾಗಲಿರುವ ಹಂಸಲೇಖ ಜೊತೆಗೆ ನಾನೂ ಇರುತ್ತೇನೆ. ವಾಕ್ಸ್ವಾಂತಂತ್ರ್ಯದ ರಕ್ಷಕರು ಹಾಗೂ ನಾನು ಹಂಸಲೇಖರ ಜೊತೆಗೆ ಠಾಣೆಯಲ್ಲಿ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ ನಮ್ಮೊಂದಿಗೆ ಸೇರಬಯಸುವವರು ಬನ್ನಿ" ಎಂದು ಚೇತನ್ ಅಹಿಂಸಾ ಟ್ವೀಟ್ ಮೂಲಕ ಕರೆ ನೀಡಿದ್ದರು.
ಚೇತನ್ ಅವರ ಈ ಹೇಳಿಕೆಯನ್ನು ವಿರೋಧಿಸಿರುವ ಸಂಘ ಪರಿವಾರದ ಕಾರ್ಯಕರ್ತರು ಇಂದು ಬಸವನಗುಡಿ ಠಾಣೆಯೆದುರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಚೇತನ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಇದಲ್ಲದೆ ಹಂಸಲೇಖ ಹಾಗೂ ಚೇತನ್ ಅವರನ್ನು ಬೆಂಬಲಿಸಿ ಕೆಲವು ಸಂಘಟನೆಗಳ ಕಾರ್ಯಕರ್ತರು ಠಾಣೆಯೆದುರು ಜಮಾಯಿಸಿದ್ದಾರೆ. ಈ ಎಲ್ಲ ಗೊಂದಲಗಳ ನಡುವೆ ವಿಚಾರಣೆಗಾಗಿ ಹಂಸಲೇಖ ಠಾಣೆಗೆ ಹಾಜರಾಗಿದ್ದಾರೆ. ಹಂಸಲೇಖರಿಗೆ ಮಾತ್ರ ಠಾಣೆಗೆ ಹಾಜರಾಗಲು ಬಸವನಗುಡಿ ಪೊಲೀಸರು ಅವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
Kannada composer Hamsalekha arrives at police station despite apology over comment on late seer VHP members protest. Kannada lyricist and composer Gangaraju, better known by his stage name Hamsalekha, found himself at the centre of a controversy after his comments at an award ceremony last week criticising late seer Vishwesha Theertha Swami’s efforts to remove caste barriers caused an uproar. The composer apologised for his remarks on Monday, November 15 after a video clip of his talk was shared widely on social media, and politicians, religious leaders and media personalities raised a furore.
03-08-25 10:52 am
HK News Desk
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 10:51 pm
Mangalore Correspondent
Kallapu Highway News; ಕಲ್ಲಾಪು ಹೆದ್ದಾರಿಯಲ್ಲಿ ಬ...
02-08-25 03:51 pm
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
02-08-25 10:04 pm
Giridhar Shettt, Mangaluru
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm