ಬ್ರೇಕಿಂಗ್ ನ್ಯೂಸ್
27-12-21 01:53 pm HK Desk news ಕರ್ನಾಟಕ
ಬೆಂಗಳೂರು, ಡಿ.27 : ಯುಜಿಸಿಯಿಂದ ಕನ್ನಡದ ಉಪನ್ಯಾಸಕರಿಗಾಗಿ ಹಮ್ಮಿಕೊಂಡಿದ್ದ ಎನ್ಇಟಿ ಅರ್ಹತಾ ಪರೀಕ್ಷೆಯಲ್ಲಿ ಭಾರೀ ಎಡವಟ್ಟು ನಡೆದಿದೆ. ಕನ್ನಡ ಪತ್ರಿಕೆಯನ್ನು ಹಿಂದಿ ಭಾಷೆಯಲ್ಲಿ ಮುದ್ರಿಸಿ ಕೊಟ್ಟು ಅಧಿಕಾರಿಗಳು ಎಡವಟ್ಟು ಮಾಡಿದ್ದು, ಅಭ್ಯರ್ಥಿಗಳು ಪ್ರತಿಭಟನೆ ವ್ಯಕ್ತಪಡಿಸಿ ಪರೀಕ್ಷೆಯನ್ನೇ ಬಾಯ್ಕಾಟ್ ಮಾಡಿದ್ದಾರೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅಭ್ಯರ್ಥಿಯೊಬ್ಬರು ಯುಜಿಸಿ ಕೇಂದ್ರ ಸರಕಾರದ ಅಧೀನದಲ್ಲಿದ್ದು, ಕನ್ನಡ ಪರೀಕ್ಷೆಯಲ್ಲೂ ಹಿಂದಿ ಭಾಷೆಯನ್ನು ಹೇರಲು ಹೊರಟಂತಾಗಿದೆ. ಕನ್ನಡದ ಪ್ರಶ್ನೆಪತ್ರಿಕೆಯನ್ನು ಹಿಂದಿಯಲ್ಲಿ ಮುದ್ರಿಸಿದ್ದನ್ನು ನೋಡಿ ನಮಗೆ ಶಾಕ್ ಆಯ್ತು.. ಇಂಥ ಎಡವಟ್ಟು ಆಗುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದಿಂದ ಆದಿತ್ಯವಾರ ಬೆಳಗ್ಗೆ 9ರಿಂದ 12 ಗಂಟೆ ವರೆಗೆ ಯುಜಿಸಿ- ಎನ್ಇಟಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಮೊದಲ ಪತ್ರಿಕೆ 50 ಅಂಕದ್ದಾಗಿದ್ದರೆ, ದ್ವಿತೀಯ ಪ್ರಶ್ನೆ ಪತ್ರಿಕೆ 100 ಅಂಕಗಳದ್ದಾಗಿತ್ತು. ದ್ವಿತೀಯ ಪತ್ರಿಕೆಯಲ್ಲಿ ಕೇವಲ 10 ಪ್ರಶ್ನೆಗಳು ಮಾತ್ರ ಕನ್ನಡದಲ್ಲಿದ್ದವು. ಉಳಿದ 90 ಪ್ರಶ್ನೆಗಳು ಹಿಂದಿಯಲ್ಲಿ ಮುದ್ರಿತ ಆಗಿದ್ದವು. ಇದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೆ ಒಳಗಾಗಿದ್ದರು. ಪರೀಕ್ಷೆ ಬರೆಯುವುದೋ, ಬಿಡುವುದೋ ಅನ್ನುವ ಗೊಂದಲಕ್ಕೀಡಾಗಿದ್ದರು.
ಪರೀಕ್ಷೆ ಸಮಯ 12 ಗಂಟೆಗೆ ಮುಗಿಯಬೇಕಿತ್ತು. ಈ ನಡುವೆ, ಅಭ್ಯರ್ಥಿಗಳು ಸರಿಯಾದ ಪ್ರಶ್ನೆ ಪತ್ರಿಕೆ ನೀಡುವಂತೆ ಯುಜಿಸಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದರು. ಮಧ್ಯಾಹ್ನ ಎರಡು ಗಂಟೆ ವರೆಗೆ ಪರೀಕ್ಷಾ ಹಾಲ್ ನಲ್ಲಿ ಇರುವಂತೆ ಹೇಳಿ, ಪ್ರಶ್ನೆ ಪತ್ರಿಕೆ ಸರಿಪಡಿಸುವ ಭರವಸೆ ನೀಡಲಾಗಿತ್ತು. ಆದರೆ ಎರಡು ಗಂಟೆ ಕಳೆದರೂ ಸಮಸ್ಯೆ ಸರಿಯಾಗದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಪರೀಕ್ಷಾ ಕೊಠಡಿಯಿಂದ ಹೊರಗೆ ಬಂದು ಪ್ರತಿಭಟನೆ ನಡೆಸಿದ್ದಾರೆ.
ಆನಂತರ ಸಂಜೆ 5 ಗಂಟೆಗೆ ಯುಜಿಸಿ ಹಿರಿಯ ಅಧಿಕಾರಿ ಡಾ.ಸಾಧನಾ ಪರಾಶರ್ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದ್ದು, ಕನ್ನಡ ಎನ್ಇಟಿ ಪರೀಕ್ಷೆಯನ್ನು ಮುಂದೂಡಲಾಗುವುದು. ಹೊಸತಾಗಿ ಪರೀಕ್ಷಾ ವೇಳಾಪಟ್ಟಿಯನ್ನು ನೀಡಲಾಗುವುದು. ಯುಜಿಸಿ ವೆಬ್ ಸೈಟ್ ಪರಿಶೀಲನೆ ಮಾಡುತ್ತಿರುವಂತೆ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.
Candidates who appeared for the National Teachers’ Eligibility Test for Kannada language, boycotted the examinations as the University Grant Commission (UGC) made blunder of printing the Kannada question papers in Hindi language. The candidates expressed their rage and said, “As UGC is under the limits of union government, plot is being hatched to impose Hindi even in the Kannada language question paper. We are shocked to see Kannada language question paper printed in Hindi. What is the reason behind this?”
18-07-25 10:31 pm
Bangalore Correspondent
Accident in Chitradurga: ಟಾಟಾ ಏಸ್ ಗಾಡಿ ಹರಿದು...
18-07-25 08:01 pm
ಸಿಎಂ ಸಿದ್ದರಾಮಯ್ಯ ನಿಧನ ; ಫೇಸ್ಬುಕ್ ಅವಾಂತರಕ್ಕೆ...
18-07-25 07:11 pm
Dharmasthala Case, SIT, CM Siddaramaiah: ಧರ್ಮ...
18-07-25 04:48 pm
Mangalore South ACP Vijayakranti: ಮಂಗಳೂರು ದಕ್...
18-07-25 03:38 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
18-07-25 10:11 pm
Mangalore Correspondent
Mangalore, Floodwater, Kumpala death: ಎಡೆಬಿಡದ...
18-07-25 03:19 pm
Mangalore Rain, Thokottu: ಧಾರಕಾರ ಮಳೆ ; ತೊಕ್ಕೊ...
18-07-25 02:36 pm
"Celebrating Excellence: 37 Achievers Felicit...
17-07-25 06:30 pm
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
18-07-25 12:40 pm
Mangalore Correspondent
Mangalore Fraud, WhatsApp, crime: ಕಂಪನಿಯ ಎಂಡಿ...
18-07-25 12:01 pm
Mangalore Kadri Police, Crime, Snake; ಹೆಬ್ಬಾವ...
18-07-25 11:36 am
Crore Fraud, Roshan Saldanha Arrest, Mangalor...
17-07-25 10:42 pm
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm