ಸಿಎಂ ಬೊಮ್ಮಾಯಿಗೂ ಕೊರೊನಾ ಪಾಸಿಟಿವ್ ; ಬಿಜೆಪಿ ಅಧ್ಯಕ್ಷ ನಡ್ಡಾ, ಸಚಿವ ರಾಜನಾಥಗೂ ಸೋಂಕು ದೃಢ

10-01-22 10:31 pm       HK Desk news   ಕರ್ನಾಟಕ

ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಸಿಎಂ ಟ್ವೀಟ್ ಮಾಡಿದ್ದು, ನಾನು ಕೊರೊನಾ ಪಾಸಿಟಿವ್ ಆಗಿದ್ದೇನೆ.

ಬೆಂಗಳೂರು, ಜ.10 : ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊರೊನಾ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಸಿಎಂ ಟ್ವೀಟ್ ಮಾಡಿದ್ದು, ನಾನು ಕೊರೊನಾ ಪಾಸಿಟಿವ್ ಆಗಿದ್ದೇನೆ. ಸಾಧಾರಣ ಲಕ್ಷಣ ಹೊಂದಿದ್ದು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆಯಂತೆ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದವರು ವೈದ್ಯರಲ್ಲಿ ಪರೀಕ್ಷೆ ಮಾಡಿಕೊಳ್ಳಿ. ಜೊತೆಗೆ ಕ್ವಾರಂಟೈನ್ ಇರುವಂತೆ ಸಿಎಂ ಬೊಮ್ಮಾಯಿ ಸಲಹೆ ಮಾಡಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಯವರ ನಿಗದಿಯಾದ ಎಲ್ಲ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಕೂಡ ಕೊರೊನಾ ಪಾಸಿಟಿವ್ ಆಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಸಾಮಾನ್ಯ ಲಕ್ಷಣಗಳಿದ್ದ ಕಾರಣ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವ್ ಆಗಿದ್ದೇನೆ. ಆದರೆ ಆರೋಗ್ಯವಾಗಿದ್ದು ಕ್ವಾರಂಟೈನ್ ಆಗುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಕೊರೊನಾ ಪಾಸಿಟಿವ್ ಆಗಿದ್ದು, ತಾವು ಕೊರೊನಾ ಸೋಂಕಿಗೆ ಒಳಗಾಗಿರುವುದನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದಾರೆ. ಅವರಿಗೂ ಸಾಮಾನ್ಯ ಲಕ್ಷಣಗಳಿದ್ದು, ಹೋಮ್ ಕ್ವಾರಂಟೈನ್ ಆಗಿದ್ದಾರೆ.

Karnataka chief minister Basavaraj Bommai on Monday said he has tested positive for Covid “with mild symptoms". He said his health is fine and he is under home quarantine.