ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ; ಸಿಎಂ ಬೊಮ್ಮಾಯಿ ಡಿಕೆಶಿಗೆ ಪತ್ರ, ರಾಮನಗರದಲ್ಲಿ ನಾಯಕರ ತುರ್ತು ಸಭೆ   

13-01-22 12:53 pm       HK Desk news   ಕರ್ನಾಟಕ

ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಭಾರೀ ಅಪಸ್ವರ ಎದ್ದಿರುವಾಗಲೇ ಕಾಂಗ್ರೆಸ್ ಹೈಕಮಾಂಡ್, ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿದೆ.

ಬೆಂಗಳೂರು, ಜ.13 : ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಭಾರೀ ಅಪಸ್ವರ ಎದ್ದಿರುವಾಗಲೇ ಕಾಂಗ್ರೆಸ್ ಹೈಕಮಾಂಡ್, ಪಾದಯಾತ್ರೆ ನಿಲ್ಲಿಸುವಂತೆ ಸೂಚನೆ ನೀಡಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕರೆ ಮಾಡಿದ್ದು, ಕಾಂಗ್ರೆಸ್ ಪಾದಯಾತ್ರೆ ವಿಚಾರ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗ್ತಿದೆ. ಕೊರೊನಾ ಸಂದರ್ಭದಲ್ಲಿ ಪಾದಯಾತ್ರೆ ನಡೆಸುವುದು ಸರಿಯಲ್ಲ. ಇಷ್ಟಕ್ಕೆ ನಿಲ್ಲಿಸಿ ಎಂದು ಸೂಚನೆ ನೀಡಿದ್ದಾರೆ.

ಇತ್ತ ಹೈಕೋರ್ಟ್ ಚಾಟಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಾಂಗ್ರೆಸ್ ಪಾದಯಾತ್ರೆಗೆ ಬ್ರೇಕ್ ಹಾಕಲು ಎಲ್ಲ ತಯಾರಿ ನಡೆಸಿತ್ತು. ರಾಮನಗರದಲ್ಲಿ ಪೂರ್ತಿಯಾಗಿ ಪೊಲೀಸ್ ಪಡೆಯನ್ನು ನಿಯೋಜಿಸಿದ್ದು, ಕಾಂಗ್ರೆಸ್ ನಾಯಕರನ್ನು ಬಂಧಿಸಲು ಸೂಚನೆ ನೀಡಿದೆ. ಮಂಡ್ಯ, ಮೈಸೂರಿನಿಂದ ರಾಮನಗರಕ್ಕೆ ಬರುವ ವಾಹನಗಳನ್ನು ಅಲ್ಲಲ್ಲಿ ತಡೆದು ಜನ ಸೇರದಂತೆ ಬ್ರೇಕ್ ಹಾಕಲಾಗಿದೆ. ಪೊಲೀಸರ ಮೂಲಕ ಬಲಪ್ರಯೋಗದ ವಿಚಾರ ಅರಿತಿರುವ ಕಾಂಗ್ರೆಸ್ ನಾಯಕರು, ರಾಮನಗರದಲ್ಲಿ ತುರ್ತು ಸಭೆ ನಡೆಸಿದ್ದಾರೆ.

ಹತ್ತು ದಿನಗಳ ಪಾದಯಾತ್ರೆಯನ್ನು ಇಷ್ಟಕ್ಕೆ ನಿಲ್ಲಿಸುವುದಾ ಅಥವಾ ಮುಂದೂಡಿಕೆ ಮಾಡುವುದಾ ಅನ್ನುವ ಬಗ್ಗೆ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಚರ್ಚೆ ನಡೆಸುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶ ಮಾಡಿದೆ ಎನ್ನಲಾಗುತ್ತಿದ್ದು, ರಣದೀಪ್ ಸುರ್ಜೇವಾಲಾ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಇದಲ್ಲದೆ, ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಬಹಿರಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ಪತ್ರ ಬರೆದು ಪಾದಯಾತ್ರೆ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.

ಕೊರೊನಾ ತೀವ್ರವಾಗಿ ಹರಡುತ್ತಿರುವ ಸಂದರ್ಭದಲ್ಲಿ ಪಾದಯಾತ್ರೆ ನೆಪದಲ್ಲಿ ಜನರನ್ನು ಸೇರಿಸಿ, ಸೋಂಕು ಇನ್ನಷ್ಟು ಹರಡಲು ಕಾರಣವಾಗಬೇಡಿ. ಸದ್ಯಕ್ಕೆ ಪಾದಯಾತ್ರೆ ನಿಲ್ಲಿಸಿ ಎಂದು ಬೊಮ್ಮಾಯಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಬರೆದಿರುವ ಪತ್ರವನ್ನು ಮಾಧ್ಯಮಕ್ಕೂ ಬಿಡುಗಡೆ ಮಾಡಲಾಗಿದೆ.

The number of corona infections is increasing day by day in karnataka state. the government has enacted stringent rules to control the third wave of corona. meanwhile, congress leaders had marched for 11 days demanding the mekedatu project in violation of corona rules. the fifth day of the march was to take place today (jan 13). yesterday, however, the high court took the government to task for not taking action against the congress leaders who were hiking. however, opposition leader siddaramaiah and kpc president d k sivakumar were adamant that they would continue the march. ramanagara held a meeting at the congress office on the issue. after holding the meeting, it has been decided to stop the yatra for the fifth day as per the instructions of the high court.