ಇವತ್ತು ರಾಜ್ಯದಲ್ಲಿ 25 ಸಾವಿರ ಜನರಿಗೆ ಪಾಸಿಟಿವ್ ; ದಕ್ಷಿಣ ಕನ್ನಡದಲ್ಲಿ 625 ಕೇಸ್ 

13-01-22 10:22 pm       HK Desk news   ಕರ್ನಾಟಕ

ಕರ್ನಾಟಕದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 25,005 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

ಬೆಂಗಳೂರು, ಜ.13 : ಕರ್ನಾಟಕದಲ್ಲಿ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. 25,005 ಹೊಸ ಪ್ರಕರಣಗಳು ದಾಖಲಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದೆ.

ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಗುರುವಾರ ಈ ಕುರಿತು ಟ್ವೀಟ್ ಮಾಡಿದ್ದಾರೆ. 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 18,374 ಹೊಸ ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 24 ಗಂಟೆಯಲ್ಲಿ 2,363 ಜನರು ಡಿಸ್ಚಾರ್ಜ್‌ ಆಗಿದ್ದಾರೆ. 8 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದ ಪಾಟಿಸಿವಿಟಿ ದರ ಶೇ 12.39ಕ್ಕೆ ಏರಿಕೆಯಾಗಿದೆ.

ಕರ್ನಾಟಕದ ಕೋವಿಡ್ ವರದಿ;

24 ಗಂಟೆಯಲ್ಲಿ 2363 ಜನರು ಡಿಸ್ಚಾರ್ಜ್. 24 ಗಂಟೆಯಲ್ಲಿ 25,005 ಹೊಸ ಪ್ರಕರಣ ದಾಖಲು. 24 ಗಂಟೆಯಲ್ಲಿ 8 ಜನರು ಸಾವು. ಪಾಸಿಟಿವಿಟಿ ದರ ಶೇ 12.39 ಮರಣ ಪ್ರಮಾಣ ಶೇ 0.03.

ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 2970365. ರಾಜ್ಯದ ಒಟ್ಟು ಸಕ್ರಿಯ ಪ್ರಕರಣಗಳು 115733. ಒಟ್ಟು ಮೃತಪಟ್ಟವರ ಸಂಖ್ಯೆ 38397. ರಾಜ್ಯದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 3124524.

ಯಾವ ಜಿಲ್ಲೆಯಲ್ಲಿ ಎಷ್ಟು?;

ಬಳ್ಳಾರಿ 185, ಬೆಳಗಾವಿ 276, ಬೆಂಗಳೂರು ಗ್ರಾಮಾಂತರ 390, ಬೀದರ್ 97, ಚಾಮರಾಜನಗರ 176, ಚಿಕ್ಕಬಳ್ಳಾಪುರ 119, ಚಿಕ್ಕಮಗಳೂರು 90, ಚಿತ್ರದುರ್ಗ 78, ದಕ್ಷಿಣ ಕನ್ನಡ 625, ದಾವಣಗೆರೆ 92, ಧಾರವಾಡ 399, ಗದಗ 69, ಹಾಸನ 490, ಹಾವೇರಿ 19, ಕಲಬುರಗಿ 346, ಕೊಡಗು 72 ಪ್ರಕರಣಗಳು ದಾಖಲಾಗಿವೆ.

ಕೋಲಾರ 293, ಕೊಪ್ಪಳ 32, ಮಂಡ್ಯ 406, ಮೈಸೂರು 695, ರಾಯಚೂರು 122, ಶಿವಮೊಗ್ಗ 212, ತುಮಕೂರು 547, ಉಡುಪಿ 379, ಉತ್ತರ ಕನ್ನಡ 250, ವಿಜಯಪುರ 39, ಯಾದಗಿರಿ 16 ಹೊಸ ಪ್ರಕರಣ ದಾಖಲಾಗಿದೆ.

Bangalore Active Covid-19 Cases, Bengaluru, Karnataka Omicron, Reporting yet another spike, Karnataka on Wednesday registered 21,390 fresh cases of Covid-19 and 10 fatalities.