ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಗ್ಯಾಸ್ ಗೀಸರ್ ಲೀಕ್ ; ತಾಯಿ, ಮಗು ದುರಂತ ಸಾವು ! 

16-01-22 08:57 pm       HK Desk news   ಕರ್ನಾಟಕ

ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ- ಮಗಳು ಸಾವನಪ್ಪಿದ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ.‌ 

ಬೆಂಗಳೂರು, ಜ.16 : ಮಗುವನ್ನು ಸ್ನಾನ ಮಾಡಿಸುತ್ತಿದ್ದಾಗ ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾಗಿ ತಾಯಿ- ಮಗಳು ಸಾವನಪ್ಪಿದ ಘಟನೆ ಚಿಕ್ಕಬಾಣಾವರದಲ್ಲಿ ನಡೆದಿದೆ.‌ 

ಚಿಕ್ಕಬಾಣಾವರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಂಗಳಾ(35) ಹಾಗೂ ಅವರ ಮಗು ಗೌತಮಿ (7) ಮೃತರು. ಮೂಲತಃ ರಾಮನಗರ ಜಿಲ್ಲೆಯ ನಿವಾಸಿಯಾಗಿರುವ ಮಂಗಳಾ, ಪತಿ ನರಸಿಂಹಮೂರ್ತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಚಿಕ್ಕ ಬಾಣಾವರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ನರಸಿಂಹಮೂರ್ತಿ ಅವರು ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದ್ದು ತಾಯಿ, ಮಗಳು ಸಾವನ್ನಪ್ಪಿದ್ದು ಯಾರಿಗೂ ತಿಳಿಯಲೇ ಇಲ್ಲ. 

ಗ್ಯಾಸ್ ಗೀಸರ್ ಆನ್ ಮಾಡಿ ತಾಯಿ, ತನ್ನ ಮಗಳನ್ನು ಬೀಸಿ ನೀರಿನಿಂದ ಸ್ನಾನ ಮಾಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಗೀಸರ್‌ನಿಂದ ಕಾರ್ಬನ್‌ ಮೋನಾಕ್ಸೈಡ್ ಸೋರಿಕೆಯಾಗಿದೆ ಎನ್ನಲಾಗುತ್ತಿದ್ದು, ಇಡೀ ಕೊಠಡಿ ಆವರಿಸಿತ್ತು. ಉಸಿರು ಕಟ್ಟಿ ಸ್ನಾನದ ಕೊಠಡಿಯಲ್ಲೇ ತಾಯಿ– ಮಗಳು ಪ್ರಜ್ಞೆ ತಪ್ಪಿ ಬಿದ್ದಿದ್ದು ಅಲ್ಲಿಯೇ ಸಾವು ಕಂಡಿದ್ದಾರೆ. 

ಆಗಾಗ ಮನೆಯಿಂದ ಹೊರಗೆ ಬರುತ್ತಿದ್ದ ಮಂಗಳಾ, ಶನಿವಾರ ಸಂಜೆಯಾದರೂ ಮನೆಯಿಂದ ಹೊರಗೆ ಬಂದಿರಲಿಲ್ಲ. ಹೀಗಾಗಿ  ಪಕ್ಕದಲ್ಲೇ ಇದ್ದ ಮನೆ ಮಾಲೀಕರ ಮನೆಯವರು ಮನೆ ಒಳಗೆ ತೆರಳಿ ನೋಡಿದಾಗ ಸ್ನಾನದ ಕೊಠಡಿಯಲ್ಲಿ ತಾಯಿ, ಮಗು ಬಿದ್ದಿದ್ದರು.‌

Bangalore, the case has once again proved that it is not possible to say in what form javaraya is waiting for. as usual, those who went for a bath at home were found dead. The tragic death of mother and daughter by suffocation took place at chikkabanawara in bengaluru north taluk. the mother and daughter who entered the bath house have joined the house of death.