65ರ ಅಜ್ಜಿಯನ್ನು ವರಿಸಿದ 85ರ ಅಜ್ಜ ! ಇಳಿವಯಸ್ಸಿನಲ್ಲಿ ಜೊತೆಯಾದ ವೃದ್ಧ ಜೋಡಿ ! ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ ಮದುವೆ 

23-01-22 12:59 pm       HK Desk news   ಕರ್ನಾಟಕ

ಮದುವೆಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಇಲ್ಲೊಬ್ಬರು ಅಜ್ಜ - ಅಜ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಮಾಜಕ್ಕೆ ಹೊಸ ಪಾಠ ಹೇಳಿಕೊಟ್ಟಿದ್ದಾರೆ. 65 ವರ್ಷದ ಫಾತಿಮಾ ಬೇಗಂ ಎಂಬ ಅಜ್ಜಿಯನ್ನು ಮುಸ್ತಫಾ ಎಂಬ 85 ವರ್ಷದ ಮುದುಕನೊಬ್ಬ ಕೈಹಿಡಿದು ಅಚ್ಚರಿ ಮೂಡಿಸಿದ್ದಾರೆ. 

Photo credits : Headline Karnataka

ಮೈಸೂರು, ಜ.23 : ಮದುವೆಗೆ ವಯಸ್ಸು ಅಡ್ಡಿಯಾಗಲ್ಲ ಎಂದು ಇಲ್ಲೊಬ್ಬರು ಅಜ್ಜ - ಅಜ್ಜಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಮಾಜಕ್ಕೆ ಹೊಸ ಪಾಠ ಹೇಳಿಕೊಟ್ಟಿದ್ದಾರೆ. 65 ವರ್ಷದ ಫಾತಿಮಾ ಬೇಗಂ ಎಂಬ ಅಜ್ಜಿಯನ್ನು ಮುಸ್ತಫಾ ಎಂಬ 85 ವರ್ಷದ ಮುದುಕನೊಬ್ಬ ಕೈಹಿಡಿದು ಅಚ್ಚರಿ ಮೂಡಿಸಿದ್ದಾರೆ. 

ಮೈಸೂರಿನ ಉದಯಗಿರಿಯ ಗೌಸಿಯಾನಗರದಲ್ಲಿ ವೃದ್ಧ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ಪರಸ್ಪರ ಕೈಹಿಡಿದು ಹಾರ ಬದಲಾಯಿಸಿಕೊಂಡು ಸತಿ ಪತಿ ಆಗಿದ್ದಾರೆ. ಕುರಿ ಸಾಕಾಣಿಕೆ ಮಾಡುತ್ತಾ ತನ್ನ 9 ಮಕ್ಕಳಿಗೆ ಮದುವೆ ಮಾಡಿರುವ ಹಾಜಿ ಮುಸ್ತಫಾ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 

ಎರಡು ವರ್ಷಗಳ ಹಿಂದೆ ಪತ್ನಿ ಖುರ್ಷಿದ್ ಬೇಗಂರನ್ನು ಕಳೆದುಕೊಂಡಿದ್ದ ಮುಸ್ತಫಾ ಗೌಸಿಯಾನಗರದಲ್ಲಿ ಒಂಟಿಯಾಗಿ ವಾಸವಿದ್ದರು. ಮಕ್ಕಳಿಗೆಲ್ಲ ಮದುವೆಯಾಗಿದ್ದರಿಂದ ಒಂಟಿ ಜೀವನ ಬೇಡ ಎಂದು ಜಂಟಿಯಾಗಲು ಬಯಸಿದ್ದರು.‌ ಇದೇ ವೇಳೆ, ಅದೇ ಏರಿಯಾದ ಫಾತಿಮಾ ಬೇಗಂ, ಮುಸ್ತಫಾ ಕಣ್ಣಿಗೆ ಬಿದ್ದಿದ್ದಳು. ಗೌಸಿಯಾ ನಗರದಲ್ಲೇ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ 65 ವರ್ಷದ ವೃದ್ದೆ ಫಾತಿಮಾ ಬೇಗಂ ಅವರನ್ನು ಮದುವೆಯಾಗಲು ಮುಸ್ತಫಾ ಮುಂದಾಗಿದ್ದು ಮದುವೆ ಪ್ರಸ್ತಾಪ ಇಟ್ಟಿದ್ದರು. ಮುಸ್ತಫಾ ಆಸೆಗೆ ನಿರಾಸೆ ಮಾಡದೆ ಫಾತಿಮಾ ಬೇಗಂ ಮದುವೆಗೆ ಒಪ್ಪಿದ್ದು ತಮ್ಮ ಇಳಿ ವಯಸ್ಸಿನಲ್ಲಿ ಜೋಡಿಯಾಗಲು ಮುಂದಾಗಿದ್ದಾರೆ. 

ತಂದೆಯ ಹೊಸ ಇನ್ನಿಂಗ್ಸ್ ಆರಂಭಕ್ಕೆ ಮಕ್ಕಳು ಶುಭ ಹಾರೈಸಿದ್ದಾರೆ. ಅಜ್ಜನ ಮಾತು ಕೇಳಿ ಅಚ್ಚರಿ ಎನಿಸಿದ್ರೂ ಮಕ್ಕಳು, ಮೊಮ್ಮಕ್ಕಳು ಸೇರಿ ಇಳಿವಯಸ್ಸಿನ ನಿರ್ಧಾರಕ್ಕೆ ಜೈ ಎಂದಿದ್ದಾರೆ. ಮಕ್ಕಳೇ ಸೇರಿ ತಮ್ಮದೇ ಮನೆಯಲ್ಲಿ ನಿಖಾ ಮಾಡಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಸಮ್ಮುಖದಲ್ಲಿ‌ ಫಾತಿಮಾ ಅಜ್ಜಿಯನ್ನು   ವರಿಸಿದ ಮುಸ್ತಪಾ ಹೊಸ ದಾಂಪತ್ಯ ಆರಂಭಿಸಿದ್ದು ಅಚ್ಚರಿ ಮೂಡಿಸಿದೆ. ಆದರೆ ಇಳಿ ವಯಸ್ಸಿನಲ್ಲಿ ಹೆಣ್ಣಿನ ಆಸರೆ ಬಯಸಿದ ಮುಸ್ತಫಾ ದಿಟ್ಟ ನಿರ್ಧಾರಕ್ಕೆ ಕುಟುಂಬಸ್ಥರು ಫುಲ್‌ ಖುಷ್ ಆಗಿದ್ದಾರೆ.

Mysuru 85 year old Muslim Man marries a 64-year-old woman. The Marrige took place in the presence of their entire families.