ಸೆಲ್ಫಿ ಶೋಕಿಗೆ ಹೋಯ್ತು 19 ವರ್ಷದ ನರ್ಸಿಂಗ್ ವಿದ್ಯಾರ್ಥಿ ಪ್ರಾಣ  ; ಹೊಗೆನಕಲ್ ಜಲಪಾತದಲ್ಲಿ  ದುರಂತ ! 

27-01-22 04:59 pm       HK Desk news   ಕರ್ನಾಟಕ

ಹೊಗೆನಕಲ್ ಜಲಪಾತದಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ವಿದ್ಯಾರ್ಥಿ ನೀರುಪಾಲಾದ ಘಟನೆ ಹನೂರು ತಾಲೂಕಿನಲ್ಲಿ ಗುರುವಾರ ಸಂಭವಿಸಿದೆ.

ಚಾಮರಾಜನಗರ, ಜ 27: ಹೊಗೆನಕಲ್ ಜಲಪಾತದಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋದ ವಿದ್ಯಾರ್ಥಿ ನೀರುಪಾಲಾದ ಘಟನೆ ಹನೂರು ತಾಲೂಕಿನಲ್ಲಿ ಗುರುವಾರ ಸಂಭವಿಸಿದೆ.

ಮೈಸೂರು ಮೂಲದ ಸಂಗಮೇಶ್ ಎಂಬುವರ ಮಗ ಉಮಾಶಂಕರ್(19) ಮೃತ ದುರ್ದೈವಿ. ನರ್ಸಿಂಗ್ ಓದುತ್ತಿದ್ದ ಈತ ಸ್ನೇಹಿತರಾದ ರವಿಕುಮಾರ್, ಶಿವಪ್ರಸಾದ್ ಜತೆ ಗುರುವಾರ ಹೊಗೆನಕಲ್​ ಫಾಲ್ಸ್​ಗೆ ತೆರಳಿದ್ದ.

ಪ್ರವಾಸದ ಆರಂಭದಿಂದಲೂ ಸಾಕಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದ ಉಮಾಶಂಕರ್, ಬೇಡವೆಂದರೂ ಜಲಪಾತದ ತುದಿಯೊಂದರ ಬಳಿ ತೆರಳಿ ತನ್ನ ಸ್ನೇಹಿತರಿಗೆ ಫೋಟೋ ತೆಗೆಯುವಂತೆ ಹೇಳಿದ್ದಾನೆ‌. ಸ್ನೇಹಿತರು ಫೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದ ವೇಳೆ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ‌‌.

80 ಅಡಿಗೂ ಹೆಚ್ಚು ಆಳವಾದ ಜಾಗಕ್ಕೆ ಉಮಾಶಂಕರ್ ಬಿದ್ದಿದ್ದಾನೆ. ಸ್ಥಳಕ್ಕೆ ಮಲೆಮಹದೇಶ್ವರ ಬೆಟ್ಟದ ಠಾಣೆ ಪೊಲೀಸರು ತೆರಳಿ ಗೋಪಿನಾಥಂನ ನುರಿತ ಈಜುಗಾರ ತಂಡ ಶವಕ್ಕಾಗಿ ಹುಡುಕಾಟ ಮುಂದುವರಿಸಿದ್ದಾರೆ.

19 year old Nursing student killed after falling into Hogenakal Waterfalls while taking selfie in Chamrajnagara. The deceased has been identified as Umashankar (19).