ನಂದಿನಿ ಬ್ರಾಂಡ್ ಹೆಸರಲ್ಲಿ ನಕಲಿ ತುಪ್ಪದ ಜಾಲ ಪತ್ತೆ ; ಕೆಎಂಎಫ್ ಅಧಿಕಾರಿಗಳಿಂದ ಬೆಂಗಳೂರಿನ ವಿವಿಧೆಡೆ ದಾಳಿ

28-01-22 09:38 pm       HK Desk news   ಕರ್ನಾಟಕ

ಕೆಎಂಎಫ್ ಹಾಗೂ ನಂದಿನಿ ತುಪ್ಪದ ಬ್ರಾಂಡಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ಪತ್ತೆ ಮಾಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು, ಜ.28 : ಕೆಎಂಎಫ್ ಹಾಗೂ ನಂದಿನಿ ತುಪ್ಪದ ಬ್ರಾಂಡಿನಲ್ಲಿ ನಕಲಿ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಜಾಲವನ್ನು ಕೆಎಂಎಫ್ ಅಧಿಕಾರಿಗಳು ಬೆಂಗಳೂರು ನಗರದಲ್ಲಿ ಪತ್ತೆ ಮಾಡಿದ್ದು, ಪ್ರಕರಣ ದಾಖಲಿಸಿದ್ದಾರೆ.

ಮೈಸೂರಿನಲ್ಲಿ ನಕಲಿ ತುಪ್ಪ ತಯಾರಿಸಿ, ಬೆಂಗಳೂರು ಹಾಗೂ ಸುತ್ತಮುತ್ತ ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನಂದಿನಿ ಬ್ರಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಬೆಂಗಳೂರಿನ ವಿವಿಧೆಡೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಹನುಮಂತನಗರ, ಹೊಸನಗರ, ಮಾಕಳಿ, ಹೊಸಕೋಟೆ, ಜಯನಗರ, ನೆಲಮಂಗಲ, ಮಾಕಳಿ ಸೇರಿದಂತೆ ವಿವಿಧ ಕಡೆ ಅಧಿಕಾರಿಗಳು ಅಂಗಡಿಗಳಿಗೆ ದಾಳಿ ನಡೆಸಿದ್ದು, ನಕಲಿ ತುಪ್ಪವನ್ನು ವಶಕ್ಕೆ ಪಡೆದಿದ್ದಾರೆ.

ಅಂಗಡಿಗಳಲ್ಲಿ ಸಿಕ್ಕ ನಕಲಿ ತುಪ್ಪದ ಜಾಡು ಹಿಡಿದು ತುಪ್ಪದ ಗೋದಾಮುಗಳಿಗೂ ದಾಳಿ ನಡೆಸಿರುವ ಅಧಿಕಾರಿಗಳು ಭಾರೀ ಪ್ರಮಾಣದ ನಕಲಿ ಜಾಲವನ್ನು ಬಯಲಿಗೆಳೆದಿದ್ದಾರೆ. ನಂದಿನಿ ಹೆಸರಿನಲ್ಲಿರುವ ಒಂದು ಕೇಜಿ ಹಾಗೂ 15 ಕೇಜಿ ತೂಕದ ತುಪ್ಪದ ಟಿನ್ ಗಳನ್ನು ಪಡೆದು ಅದನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ವಿವಿಧ ಮಾದರಿಯ ನಕಲಿ ತುಪ್ಪದ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದು ಕೆಎಂಎಫ್ ಪ್ರಯೋಗಾಲಯಕ್ಕೆ ಗುಣಮಟ್ಟದ ಪರಿಶೀಲನೆಗಾಗಿ ಕಳಿಸಲಾಗಿದೆ. ಈ ವೇಳೆ, ನಕಲಿಯಾಗಿರುವುದು ಕಂಡುಬಂದಿದ್ದು, ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಬಿ.ಪಿ. ಸುರೇಶ್ ಪೊಲೀಸ್ ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಬಸವನಗುಡಿ ಪೊಲೀಸರು ಕ್ರಿಮಿನಲ್ ಕೇಸು ದಾಖಲಿಸಿದ್ದು, ನಕಲಿ ತುಪ್ಪದ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ನಂದಿನಿ ತುಪ್ಪವನ್ನು ನೀಡುತ್ತಿರುವ ಕೆಎಂಎಫ್ ಗೆ ಇದೀಗ ನಕಲಿ ತುಪ್ಪದ ಬಿಸಿ ತಟ್ಟಿದೆ.

Bangalore, A fake ghee (Ghee) case has been found in Bengaluru city after Mysore. Kmf(KMF) officials, who detected a fake ghee network in the city, said the fake ghee produced in Mysore was being sold in and around Bengaluru. Officials suspected of fake ghee in Bengaluru and kmf has formed several teams to find fake ghee. Therefore, officials have conducted inspections in several places including Bengaluru city.